ಬೆಂಗಳೂರು : ಶಿವಮೊಗ್ಗ ಲಯನ್ಸ್ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿದ ಗುಲ್ಬರ್ಗಾ ಮಿಸ್ಟಿಕ್ಸ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೂರನೇ ಜಯ ಸಾಧಿಸಿದೆ. ಟೂರ್ನಿ ಆರಂಭದ ಮೂರು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಶಿವಮೊಗ್ಗ ಲಯನ್ಸ್ ಸತತ ಮೂರನೇ ಸೋಲು ಅನುಭವಿಸಿದೆ. ಗುಲ್ಬರ್ಗಾ ಪರ ಬೌಲಿಂಗ್‌ನಲ್ಲಿ ಹಾರ್ದಿಕ್ ರಾಜ್ (4/27) ನಾಯಕ ವೈಶಾಕ್ ವಿಜಯ್ ಕುಮಾರ್ (2/9) ಹಾಗೂ ಬ್ಯಾಟಿಂಗ್‌ನಲ್ಲಿ ಚೇತನ್ ಎಲ್.ಆರ್ ಹಾಗೂ ಆದರ್ಶ್ ಪ್ರಜ್ವಲ್ ಗೆಲುವಿನ ರೂವಾರಿಗಳಾಗಿ ಮಿಂಚಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ರೋಹನ್ ಕದಂ (0) ಮತ್ತು ನಿಹಾಲ್ ಉಳ್ಳಾಲ್ (15) ಆರಂಭಿಕರನ್ನು ಬಹುಬೇಗನೆ ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ರೋಹಿತ್ ಕುಮಾರ್ (25) ಮತ್ತು ರೋಹನ್ ನವೀನ್ (33) ಕೊಡುಗೆಯ ನೆರವಿನಿಂದ ಪವರ್‌ಪ್ಲೇ ಅಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 60 ರನ್ ಗಳಿಸಿತು. ಆದಾಗ್ಯೂ ಗುಲ್ಬರ್ಗದ ಎಡಗೈ ಸ್ಪಿನ್ನರ್ ಹಾರ್ದಿಕ್ ರಾಜ್ ಎಂಟನೇ ಓವರ್‌ನಲ್ಲಿ ರೋಹನ್ ನವೀನ್ ಮತ್ತು ಅಭಿನವ್ ಮನೋಹರ್ (0) ಅವರ ವಿಕೆಟ್ ಪಡೆದರು. ಮುಂದಿನ ಓವರ್‌ನಲ್ಲಿ ಅಮಿತ್ ವರ್ಮಾ ಬೌಲಿಂಗ್‌ನಲ್ಲಿ ರೋಹಿತ್ ಕುಮಾರ್ ಔಟಾದರು.
-
Clinical finish. The Mystics clinch their second successive victory! 👊#IlliGeddavareRaja #MaharajaTrophy #KSCA #Karnataka pic.twitter.com/DF8we89U3i
— Maharaja Trophy T20 (@maharaja_t20) August 21, 2023 " class="align-text-top noRightClick twitterSection" data="
">Clinical finish. The Mystics clinch their second successive victory! 👊#IlliGeddavareRaja #MaharajaTrophy #KSCA #Karnataka pic.twitter.com/DF8we89U3i
— Maharaja Trophy T20 (@maharaja_t20) August 21, 2023Clinical finish. The Mystics clinch their second successive victory! 👊#IlliGeddavareRaja #MaharajaTrophy #KSCA #Karnataka pic.twitter.com/DF8we89U3i
— Maharaja Trophy T20 (@maharaja_t20) August 21, 2023
ಶ್ರೇಯಸ್ ಗೋಪಾಲ್ (16) ಮತ್ತು ಪ್ರಣವ್ ಭಾಟಿಯಾ (19) ಎಚ್ಚರಿಕೆಯ 36 ರನ್‌ಗಳ ಜೊತೆಯಾಟವಾಡಿದರು. ನಂತರ ಬಂದ ಕ್ರಾಂತಿ ಕುಮಾರ್ (5) ಮತ್ತು ಶಿವರಾಜ್ (0) ಬೇಗನೆ ವಿಕೆಟ್ ಕೊಟ್ಟು ನಿರಾಸೆ ಮೂಡಿಸಿದರು. ಅಂತಿಮವಾಗಿ, ಶಿವಮೊಗ್ಗ ಲಯನ್ಸ್ 17.4 ಓವರ್‌ಗಳಲ್ಲಿ 121 ಮೊತ್ತಕ್ಕೆ ಆಲೌಟ್ ಆಯಿತು. ಗುಲ್ಬರ್ಗ ಪರ ಹಾರ್ದಿಕ್ ರಾಜ್ (3/27), ವೈಶಾಕ್ ವಿಜಯ್ ಕುಮಾರ್ (2/9) ಮತ್ತು ಅಭಿಲಾಷ್ ಶೆಟ್ಟಿ (2/21) ವಿಕೆಟ್ ಉರುಳಿಸಿದರು.
ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಗುಲ್ಬರ್ಗಾ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಚೇತನ್ ಎಲ್.ಆರ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಆದರ್ಶ್ ಪ್ರಜ್ವಲ್ ಅರ್ಧಶತಕದ ಜೊತೆಯಾಟ ನಿಭಾಯಿಸಿದರು. ಪವರ್ ಪ್ಲೇ ಬಳಿಕ ಬೌಲಿಂಗ್‌ಗಿಳಿದ ಶಿವಮೊಗ್ಗ ನಾಯಕ ಶ್ರೇಯಸ್ ಗೋಪಾಲ್, ಆದರ್ಶ್ ಪ್ರಜ್ವಲ್ (37) ವಿಕೆಟ್ ಕಬಳಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಮ್ಯಾಕ್ನೈಲ್ ನೊರೊನ್ಹಾ (27*) ಆರಂಭಿಕ ಚೇತನ್‌ಗೆ (58*) ಸಾಥ್ ನೀಡಿದರು. ಇದರಿಂದ 12.4 ಓವರ್‌ಗಳಲ್ಲಿ ಗುಲ್ಬರ್ಗ ತಂಡವು 9 ವಿಕೆಟ್‌ಗಳ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್ ವಿವರ: ಶಿವಮೊಗ್ಗ ಲಯನ್ಸ್ - 121/10 (17.4) (ರೋಹನ್ ನವೀನ್ - 33, ರೋಹಿತ್ ಕುಮಾರ್ ಕೆ - 25, ಹಾರ್ದಿಕ್ ರಾಜ್ - 3/27, ವೈಶಾಕ್ ವಿಜಯ್ ಕುಮಾರ್ - 2/9, ಅಭಿಲಾಷ್ ಶೆಟ್ಟಿ - 2/21), ಗುಲ್ಬರ್ಗ ಮಿಸ್ಟಿಕ್ಸ್ - 126/1 (12.4) (ಎಲ್.ಆರ್ ಚೇತನ್ - 58*, ಆದರ್ಶ ಪ್ರಜ್ವಲ್ - 37, ಶ್ರೇಯಸ್ ಗೋಪಾಲ್ - 1/40) ಪಂದ್ಯ ಶ್ರೇಷ್ಠ - ಹಾರ್ದಿಕ್ ರಾಜ್, ಫಲಿತಾಂಶ: ಗುಲ್ಬರ್ಗಾ ಮಿಸ್ಟಿಕ್ಸ್‌ಗೆ 9 ವಿಕೆಟ್‌ಗಳ ಗೆಲುವು.
ಇದನ್ನೂ ಓದಿ: ಮಹಾರಾಜ ಟ್ರೋಫಿ: ಹ್ಯಾಟ್ರಿಕ್ ಸೋಲಿನ ಬಳಿಕ ಮಂಗಳೂರು ವಿರುದ್ಧ ಜಯ ಕಂಡ ಗುಲ್ಬರ್ಗಾ