ಬೆಂಗಳೂರು: ಮಳೆ ಬಾಧಿತ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ 33 ರನ್‌ಗಳ ಗೆಲುವು (ವಿಜೆಡಿ ವಿಧಾನ) ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಮೈಸೂರು 185/7 ಉತ್ತಮ ಮೊತ್ತವನ್ನು ದಾಖಲಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು ಇನ್ನಿಂಗ್ಸ್‌ನ 11.1 ಓವರ್ ವೇಳೆಗೆ ಮಳೆ ಅಡ್ಡಿಯಾಯಿತು. ವಿಜೆಡಿ ವಿಧಾನದನ್ವಯ ಬೆಂಗಳೂರು 33 ರನ್‌ಗಳ ಹಿನ್ನೆಡೆಯಿದ್ದಿದ್ದರಿಂದ ಮೈಸೂರು ತಂಡವನ್ನ ವಿಜಯಶಾಲಿ ಎಂದು ಘೋಷಿಸಲಾಯಿತು.
ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡಕ್ಕೆ ಪವರ್‌ಪ್ಲೇ ಅಂತ್ಯದೊಳಗೆ ಆರ್.ಸಮರ್ಥ್ (1), ಕರುಣ್ ನಾಯರ್ (2) ಮತ್ತು ರಾಹುಲ್ ರಾವತ್ (10) ವಿಕೆಟ್ ಪಡೆದ ಶುಭಾಂಗ್ ಹೆಗ್ಡೆ ಬಿಗ್ ಶಾಕ್ ನೀಡಿದರು. ಆರಂಭಿಕ ಆಟಗಾರ ಸಿಎ ಕಾರ್ತಿಕ್ ಅವರ ಶ್ರೇಷ್ಠ ಪ್ರದರ್ಶನದ ನೆರವಿನಿಂದ ಮೈಸೂರು ವಾರಿಯರ್ಸ್ ಗಮನಾರ್ಹವಾಗಿ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
-
The Warriors 🟡 keep marching on! ⚔️💪#KBBvMW #IlliGeddavareRaja #MaharajaTrophy #KSCA #Karnataka pic.twitter.com/aZUovBixW5
— Maharaja Trophy T20 (@maharaja_t20) August 19, 2023 " class="align-text-top noRightClick twitterSection" data="
">The Warriors 🟡 keep marching on! ⚔️💪#KBBvMW #IlliGeddavareRaja #MaharajaTrophy #KSCA #Karnataka pic.twitter.com/aZUovBixW5
— Maharaja Trophy T20 (@maharaja_t20) August 19, 2023The Warriors 🟡 keep marching on! ⚔️💪#KBBvMW #IlliGeddavareRaja #MaharajaTrophy #KSCA #Karnataka pic.twitter.com/aZUovBixW5
— Maharaja Trophy T20 (@maharaja_t20) August 19, 2023
ಈ ಹಂತದಲ್ಲಿ 36 ಎಸೆತಗಳಲ್ಲಿ ಕಾರ್ತಿಕ್ ತಮ್ಮ ಅರ್ಧ ಶತಕವನ್ನ ಪೂರೈಸಿದರು. 43 ಎಸೆತಗಳಲ್ಲಿ 62 ರನ್ ಗಳಿಸಿದ್ದಾಗ ಕಾರ್ತಿಕ್ ಶುಭಾಂಗ್ ಹೆಗ್ಡೆಗೆ ನಾಲ್ಕನೇ ಬಲಿಯಾದರು. ನಂತರ ಬಂದ ತುಷಾರ್ ಸಿಂಗ್ (19) ಮತ್ತು ಶಿವಕುಮಾರ್ ರಕ್ಷಿತ್ (10), ಮನೋಜ್ ಭಾಂಡಗೆ (28) ಮತ್ತು ಜೆ ಸುಚಿತ್ (31*) ಉತ್ತಮ ಕೊಡುಗೆ ನೀಡುವುದರೊಂದಿಗೆ ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 185 ರನ್ ತಲುಪಿತು.
ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ಕಳಪೆ ಆರಂಭ ಪಡೆಯಿತು. ಡಿ.ನಿಶ್ಚಲ್ (6), ಮಯಾಂಕ್ ಅಗರ್ವಾಲ್ (2), ಶುಭಾಂಗ್ ಹೆಗ್ಡೆ (13) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಜಸ್ವಂತ್ ಆಚಾರ್ಯ (19*) ಹಾಗೂ ಸೂರಜ್ ಅಹುಜಾ (31) ರನ್ ಗಳಿಸುವ ಮೂಲಕ ಇನ್ನಿಂಗ್ಸ್‌ಗೆ ಕೊಂಚ ಚೇತರಿಕೆ ನೀಡಿದರು. ಈ ಹಂತದಲ್ಲಿ ಹತ್ತನೇ ಓವರ್ ಎಸೆದ ಜೆ.ಸುಚಿತ್, ಸೂರಜ್ ಅಹುಜಾ ವಿಕೆಟ್ ಪಡೆದರು.
-
𝗨𝗽 𝗮𝗻𝗱 𝗮𝘄𝗮𝘆! 🔥
— Maharaja Trophy T20 (@maharaja_t20) August 19, 2023 " class="align-text-top noRightClick twitterSection" data="
Here are some cracking shots from @mysore_warriors’ 1st innings. 💥#KBBvMW #IlliGeddavareRaja #MaharajaTrophy #KSCA #Karnataka pic.twitter.com/6cwsyxYjXA
">𝗨𝗽 𝗮𝗻𝗱 𝗮𝘄𝗮𝘆! 🔥
— Maharaja Trophy T20 (@maharaja_t20) August 19, 2023
Here are some cracking shots from @mysore_warriors’ 1st innings. 💥#KBBvMW #IlliGeddavareRaja #MaharajaTrophy #KSCA #Karnataka pic.twitter.com/6cwsyxYjXA𝗨𝗽 𝗮𝗻𝗱 𝗮𝘄𝗮𝘆! 🔥
— Maharaja Trophy T20 (@maharaja_t20) August 19, 2023
Here are some cracking shots from @mysore_warriors’ 1st innings. 💥#KBBvMW #IlliGeddavareRaja #MaharajaTrophy #KSCA #Karnataka pic.twitter.com/6cwsyxYjXA
ಇದಾದ ಬೆನ್ನಲ್ಲೇ ಪವನ್ ದೇಶಪಾಂಡೆ (2) ಕೂಡ ವಿಕೆಟ್ ಕೈಚೆಲ್ಲಿದರು. ಬೆಂಗಳೂರು ಬ್ಲಾಸ್ಟರ್ಸ್ 11.1 ಓವರ್‌ಗಳಲ್ಲಿ 88/5 ಸ್ಕೋರ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಯಾದ ಪರಿಣಾಮ ವಿಜೆಡಿ ವಿಧಾನದ ಮೂಲಕ ಮೈಸೂರು ವಾರಿಯರ್ಸ್ 33 ರನ್‌ಗಳಿಂದ ಜಯ ಗಳಿಸಿತು. ಇದು ಬೆಂಗಳೂರು ತಂಡಕ್ಕೆ ಸತತ ಐದನೇ ಸೋಲಾಗಿದೆ. ಇದರಿಂದ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ - 1.99 ರನ್ ರೇಟ್ ಪಡೆದುಕೊಂಡಿದೆ. ಮಾಯಾಂಕ್ ತಂಡ ಲೀಗ್ ಹಂತದಲ್ಲಿ ಇನ್ನು ಐದು ಪಂದ್ಯಗಳನ್ನು ಆಡಬೇಕಿದ್ದು, ಇವುಗಳಲ್ಲಿ ಪುಟಿದೇಳುವ ಅಗತ್ಯವಿದೆ.
ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್ - 185/7 (20) (ಸಿ.ಎ ಕಾರ್ತಿಕ್ - 62, ಜೆ.ಸುಚಿತ್ 31*, ಶುಭಾಂಗ್ ಹೆಗ್ಡೆ 4/23, ರಿಷಿ ಬೋಪಣ್ಣ 2/19)
ಬೆಂಗಳೂರು ಬ್ಲಾಸ್ಟರ್ಸ್ - 81/5 (11.1) (ವಿಜೆಡಿ ವಿಧಾನದಿಂದ 11.1 ಓವರ್‌ಗಳಲ್ಲಿ ಗುರಿ 115) (ಸೂರಜ್ ಅಹುಜಾ - 31, ಜೆಸ್ವಂತ್ ಆಚಾರ್ಯ 19*, ಜೆ.ಸುಚಿತ್ - 2/8, ಸಿ.ಎ.ಕಾರ್ತಿಕ್ - 2/16)
ಪಂದ್ಯ ಶ್ರೇಷ್ಠ- ಸಿ.ಎ.ಕಾರ್ತಿಕ್, ಫಲಿತಾಂಶ : ಮೈಸೂರು ವಾರಿಯರ್ಸ್ಗೆ 33 ರನ್‌ಗಳ ಗೆಲುವು
ಇದನ್ನೂ ಓದಿ: ಮಹಾರಾಜ ಟ್ರೋಫಿ: ಡ್ರ್ಯಾಗನ್ಸ್ನ ಸಿದ್ಧಾರ್ಥ್ ಅಬ್ಬರದ ಶತಕ.. ಬೆಂಗಳೂರಿಗೆ ಸತತ ನಾಲ್ಕನೇ ಸೋಲು