ETV Bharat / state

ಮಹಾರಾಜ ಟ್ರೋಫಿ: ಮಂಗಳೂರಿನ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ ಹಾಲಿ ಚಾಂಪಿಯನ್ ಗುಲ್ಬರ್ಗ - ಮಂಗಳೂರು ಡ್ರ್ಯಾಗನ್ಸ್

Maharaja Trophy T20: ಹುಬ್ಬಳ್ಳಿ, ಮೈಸೂರು ತಂಡಗಳು ಕ್ವಾಲಿಫೈ ಆದ ನಂತರ ಮೂರನೇ ತಂಡವಾಗಿ ಸೆಮಿಸ್​ಗೆ ಗುಲ್ಬರ್ಗ ಪ್ರವೇಶಿಸಿದೆ. ಸಧ್ಯ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ಪಂದ್ಯ ನಡೆಯುತ್ತಿದ್ದು, ಬೆಂಗಳೂರು ಗೆದ್ದಲ್ಲಿ ಮಂಗಳೂರು ತಂಡ ಕ್ವಾಲಿಫೈ ಆಗಲಿದೆ. ಶಿವಮೊಗ್ಗ ಜಯಿಸಿದೆ ಮಾತ್ರ ನಾಲ್ಕನೇ ತಂಡವಾಗಿ ಸೆಮೀಸ್​ಗೆ ಪ್ರವೇಶಿಸಲಿದೆ.

Maharaja Trophy T20 2023
Maharaja Trophy T20 2023
author img

By ETV Bharat Karnataka Team

Published : Aug 27, 2023, 6:35 PM IST

ಬೆಂಗಳೂರು: ಮಂಗಳೂರು ಡ್ರ್ಯಾಗನ್ಸ್ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸುವ ಮೂಲಕ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಗುಲ್ಬರ್ಗ ಪರ ಬೌಲಿಂಗ್‌ನಲ್ಲಿ ಅಭಿಲಾಷ್ ಶೆಟ್ಟಿ (3/33) ಬ್ಯಾಟಿಂಗ್‌ನಲ್ಲಿ ಕೆ.ವಿ ಅನೀಶ್ (72*) ಹಾಗೂ ಎಲ್‌.ಆರ್ ಚೇತನ್ (58) ಗೆಲುವಿನ ರೂವಾರಿಗಳಾಗಿ ಮಿಂಚಿದರು.

ಮಂಗಳೂರು ಡ್ರ್ಯಾಗನ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಗುಲ್ಬರ್ಗಾ ಮಿಸ್ಟಿಕ್ಸ್ ಎರಡನೇ ಓವರ್‌ನಲ್ಲಿಯೇ ರೋಹನ್ ಪಾಟೀಲ್ ವಿಕೆಟ್ ಪಡೆಯಿತು. ದ್ವಿತೀಯ ವಿಕೆಟ್‌ಗೆ ಜೊತೆಯಾದ ಬಿ ಆರ್ ಶರತ್ ಮತ್ತು ತಿಪ್ಪಾರೆಡ್ಡಿ ಮೊದಲ 51 ರನ್ ಗಳಿಸುವ ಮೂಲಕ ಮಂಗಳೂರಿಗೆ ಉತ್ತಮ ಆರಂಭ ನೀಡಿದರು. ಆರನೇ ಓವರ್‌ನಲ್ಲಿ ಬಿ ಆರ್ ಶರತ್ (38) ವಿಕೆಟ್ ಪಡೆದ ಗುಲ್ಬರ್ಗಾ ಮಿಸ್ಟಿಕ್ಸ್ ಬೌಲರ್‌ಗಳು ಮಂಗಳೂರು ಬ್ಯಾಟ್ಸ್‌ಮನ್‌ಗಳು ನೆಲೆ ನಿಲ್ಲಲು ಅವಕಾಶವನ್ನೇ ನೀಡಲಿಲ್ಲ.

ಪರಿಣಾಮ 5.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದ್ದ ಮಂಗಳೂರು ಡ್ರ್ಯಾಗನ್ಸ್ 12ನೇ ಓವರ್‌ ಅಂತ್ಯಕ್ಕೆ 7 ವಿಕೆಟ್‌ಗಳನ್ನ ಕಳೆದುಕೊಂಡು 87 ರನ್‌ಗೆ ಕುಸಿಯಿತು. ಆರನೇ ಕ್ರಮಾಂಕದಲ್ಲಿ ಬಂದ ಅನಿರುದ್ಧ್ ಜೋಶಿ (46) ಕಲೆಹಾಕಿದ ರನ್ ಪರಿಣಾಮ ಮಂಗಳೂರು ಡ್ರ್ಯಾಗನ್ಸ್ 19.1 ಓವರ್‌ಗಳಲ್ಲಿ 144 ರನ್‌ಗಳಿಗೆ ಆಲೌಟ್ ಆಯಿತು. ಗುಲ್ಬರ್ಗ ಪರ ಅಭಿಲಾಶ್ ಶೆಟ್ಟಿ 3, ವೈಶಾಕ್ ವಿಜಯ್ ಕುಮಾರ್ ಹಾಗೂ ಹಾರ್ದಿಕ್ ರಾಜ್ ತಲಾ 2 ವಿಕೆಟ್ ಪಡೆದರು.

ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ಅದ್ಧೂರಿ ಆರಂಭ ಪಡೆಯಿತು. ಆರಂಭಿಕರಾದ ಕೆ ವಿ ಅನೀಶ್ ಹಾಗೂ ಎಲ್ ಆರ್ ಚೇತನ್ ಜೋಡಿ ಪವರ್‌ಪ್ಲೇನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 59 ರನ್ ಗಳಿಸಿತು. ಎಲ್ ಆರ್ ಚೇತನ್ 33 ಎಸೆತಗಳಲ್ಲಿ, ಕೆ ವಿ ಅನೀಶ್ 30 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದಾಗ ಗುಲ್ಬರ್ಗ ತಂಡ ನಿಖರವಾಗಿ ಹತ್ತು ಓವರ್‌ಗಳಲ್ಲಿ 100 ರನ್‌ಗಳ ಗಡಿಯನ್ನು ದಾಟಿದ್ದು ವಿಶೇಷವಾಗಿತ್ತು. ಈ ಹಂತದಲ್ಲಿ ಮಂಗಳೂರು ತಂಡದ ನಾಯಕ ಕೃಷ್ಣಪ್ಪ ಗೌತಮ್ 12ನೇ ಓವರ್‌ನಲ್ಲಿ ಎಲ್‌.ಆರ್ ಚೇತನ್ (58) ಮತ್ತು ನಂತರ ಬಂದ ಮ್ಯಾಕ್ನೈಲ್ ನೊರೊನ್ಹಾ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ತಂಡಕ್ಕೆ ಭರವಸೆಯ ನೀಡಿದರು. ಆದರೆ ಅನೀಶ್ (72*) ಮತ್ತು ಆರ್ ಸ್ಮರನ್ (8*) ಅವರ ಅಜೇಯ ಆಟ 15.3 ಓವರ್‌ಗಳಲ್ಲಿ 8 ವಿಕೆಟ್‌ಗಳ ಜಯ ತಂದುಕೊಟ್ಟಿತು.

ಸಂಕ್ಷಿಪ್ತ ಸ್ಕೋರ್: ಮಂಗಳೂರು ಡ್ರ್ಯಾಗನ್ಸ್ - 144/10 (19.1) (ಅನಿರುದ್ಧ ಜೋಶಿ - 46, ಬಿ.ಆರ್. ಶರತ್ - 38, ಅಭಿಲಾಷ್ ಶೆಟ್ಟಿ - 3/33-4, ಹಾರ್ದಿಕ್ ರಾಜ್ - 2/24-4) ಗುಲ್ಬರ್ಗ ಮಿಸ್ಟಿಕ್ಸ್ - 145-2 (15.3) ( ಕೆ.ವಿ ಅನೀಶ್ - 72*, ಎಲ್.ಆರ್. ಚೇತನ್ - 58, ಕೃಷ್ಣಪ್ಪ ಗೌತಮ್ 2/21-4) ಪಂದ್ಯ ಶ್ರೇಷ್ಠ - ಕೆ ವಿ ಅನೀಶ್

ಇದನ್ನೂ ಓದಿ: ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ 15ನೇ ಪದಕ.. ಈವರೆಗೆ ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದ ಭಾರತೀಯರಿವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.