ಬೆಂಗಳೂರು: ಶಿವಮೊಗ್ಗ ಲಯನ್ಸ್ ತಂಡವನ್ನು ಅನಾಯಾಸವಾಗಿ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ತಾಹಾ (69) ಮತ್ತು ಕೆ.ಎಲ್.ಶ್ರೀಜಿತ್ (61*) ಜೊತೆಯಾಟದ ಬಲದಿಂದ ಶಿವಮೊಗ್ಗವನ್ನು ಆರು ಓವರ್‌ಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳಿಂದ ಮಣಿಸಿತು.
-
𝗛𝘂𝗯𝗹𝗶 𝗧𝗶𝗴𝗲𝗿𝘀 𝗮𝗿𝗲 𝘁𝗵𝗲 𝗳𝗶𝗿𝘀𝘁 𝗳𝗶𝗻𝗮𝗹𝗶𝘀𝘁𝘀 𝗼𝗳 𝘁𝗵𝗲 𝗦𝗵𝗿𝗶𝗿𝗮𝗺 𝗖𝗮𝗽𝗶𝘁𝗮𝗹 𝗠𝗮𝗵𝗮𝗿𝗮𝗷𝗮 𝗧𝗿𝗼𝗽𝗵𝘆 𝗞𝗦𝗖𝗔 𝗧𝟮𝟬 𝗣𝗼𝘄𝗲𝗿𝗲𝗱 𝗯𝘆 𝗙𝗮𝗻𝗖𝗼𝗱𝗲.🔥🔝#IlliGeddavareRaja #MaharajaTrophy #KSCA #Karnataka pic.twitter.com/dbTUUnjrud
— Maharaja Trophy T20 (@maharaja_t20) August 28, 2023 " class="align-text-top noRightClick twitterSection" data="
">𝗛𝘂𝗯𝗹𝗶 𝗧𝗶𝗴𝗲𝗿𝘀 𝗮𝗿𝗲 𝘁𝗵𝗲 𝗳𝗶𝗿𝘀𝘁 𝗳𝗶𝗻𝗮𝗹𝗶𝘀𝘁𝘀 𝗼𝗳 𝘁𝗵𝗲 𝗦𝗵𝗿𝗶𝗿𝗮𝗺 𝗖𝗮𝗽𝗶𝘁𝗮𝗹 𝗠𝗮𝗵𝗮𝗿𝗮𝗷𝗮 𝗧𝗿𝗼𝗽𝗵𝘆 𝗞𝗦𝗖𝗔 𝗧𝟮𝟬 𝗣𝗼𝘄𝗲𝗿𝗲𝗱 𝗯𝘆 𝗙𝗮𝗻𝗖𝗼𝗱𝗲.🔥🔝#IlliGeddavareRaja #MaharajaTrophy #KSCA #Karnataka pic.twitter.com/dbTUUnjrud
— Maharaja Trophy T20 (@maharaja_t20) August 28, 2023𝗛𝘂𝗯𝗹𝗶 𝗧𝗶𝗴𝗲𝗿𝘀 𝗮𝗿𝗲 𝘁𝗵𝗲 𝗳𝗶𝗿𝘀𝘁 𝗳𝗶𝗻𝗮𝗹𝗶𝘀𝘁𝘀 𝗼𝗳 𝘁𝗵𝗲 𝗦𝗵𝗿𝗶𝗿𝗮𝗺 𝗖𝗮𝗽𝗶𝘁𝗮𝗹 𝗠𝗮𝗵𝗮𝗿𝗮𝗷𝗮 𝗧𝗿𝗼𝗽𝗵𝘆 𝗞𝗦𝗖𝗔 𝗧𝟮𝟬 𝗣𝗼𝘄𝗲𝗿𝗲𝗱 𝗯𝘆 𝗙𝗮𝗻𝗖𝗼𝗱𝗲.🔥🔝#IlliGeddavareRaja #MaharajaTrophy #KSCA #Karnataka pic.twitter.com/dbTUUnjrud
— Maharaja Trophy T20 (@maharaja_t20) August 28, 2023
ಟಾಸ್ ಸೋತು ಶಿವಮೊಗ್ಗ ಲಯನ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭಿಕರನ್ನು ಪವರ್ ಪ್ಲೇನಲ್ಲಿ ಹುಬ್ಬಳ್ಳಿ ಬೌಲರ್‌ಗಳು ನಿಯಂತ್ರಿಸಿದರು. 7ನೇ ಓವರ್ ಎಸೆದ ಮಿತ್ರಕಾಂತ್ ಯಾದವ್ ಅವರು ನಿಹಾಲ್ ಉಳ್ಳಾಲ್ (7) ವಿಕೆಟ್ ಪಡೆದು ಹುಬ್ಬಳ್ಳಿಗೆ ಯಶಸ್ಸು ತಂದುಕೊಟ್ಟರು. ನಂತರ ಬಂದ ವಿನಯ್ ಸಾಗರ್ ಜೊತೆಗೂಡಿದ ರೋಹನ್ ಕದಂ ಅರ್ಧಶತಕ (54) ಗಳಿಸಿ ಔಟಾದರು.
ಮುಂದೆ, ವಿನಯ್ ಸಾಗರ್ (7) ರನೌಟಿಗೆ ಬಲಿಯಾದರೆ, ಅಭಿನವ್ ಮನೋಹರ್ (2) ಹೆಚ್ಚು ಕಾಲ ಕ್ರೀಸ್ನಲ್ಲಿ ನೆಲೆಗೊಳ್ಳಲಿಲ್ಲ. 12.4 ಓವರ್‌ಗಳಲ್ಲಿ ಶಿವಮೊಗ್ಗ 4 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತ್ತು. ಈ ಹಂತದಲ್ಲಿ ಕ್ರೀಸಿಗೆ ಬಂದ ಎಚ್.ಎಸ್.ಶರತ್ (18) ಮತ್ತು ಶ್ರೇಯಸ್ ಗೋಪಾಲ್ (16) ದೊಡ್ಡ ಮೊತ್ತ ಕಲೆಹಾಕಲು ವಿಫಲವಾದರು. ಶಿವರಾಜ್ (6) ಔಟಾದ ನಂತರ ಪ್ರಣವ್ ಭಾಟಿಯಾ (17*) ಮತ್ತು ಕ್ರಾಂತಿ ಕುಮಾರ್ (9*) ಅಜೇಯರಾಗುಳಿದರು. ಇದರಿಂದ ಶಿವಮೊಗ್ಗ ಲಯನ್ಸ್ ನಿಗದಿತ ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.
-
Their batting heroics powered Hubli Tigers to the FINAL. 🔥🔝#IlliGeddavareRaja #MaharajaTrophy #KSCA #Karnataka pic.twitter.com/Jk1FIWrkPj
— Maharaja Trophy T20 (@maharaja_t20) August 28, 2023 " class="align-text-top noRightClick twitterSection" data="
">Their batting heroics powered Hubli Tigers to the FINAL. 🔥🔝#IlliGeddavareRaja #MaharajaTrophy #KSCA #Karnataka pic.twitter.com/Jk1FIWrkPj
— Maharaja Trophy T20 (@maharaja_t20) August 28, 2023Their batting heroics powered Hubli Tigers to the FINAL. 🔥🔝#IlliGeddavareRaja #MaharajaTrophy #KSCA #Karnataka pic.twitter.com/Jk1FIWrkPj
— Maharaja Trophy T20 (@maharaja_t20) August 28, 2023
ಈ ಗುರಿ ಬೆನ್ನತ್ತಿದ ಹುಬ್ಬಳ್ಳಿ ಆರಂಭಿಕರು ಶ್ರೇಯಸ್ ಗೋಪಾಲ್ ಎಸೆದ ಮೊದಲ ಓವರ್‌ನಲ್ಲಿ 19 ರನ್ ಗಳಿಸುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದರು. ಆದರೆ ಎರಡನೇ ಓವರ್‌ನಲ್ಲಿ ಲವನಿತ್ ಸಿಸೋಡಿಯಾ (13) ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಜೊತೆಯಾದ ಮೊಹಮ್ಮದ್ ತಾಹಾ ಮತ್ತು ಕೆ.ಎಲ್.ಶ್ರೀಜಿತ್ 67 ಎಸೆತಗಳಲ್ಲಿ 114 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಈ ಅವಧಿಯಲ್ಲಿ ತಾಹಾ 23 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಐದನೇ ಅರ್ಧಶತಕ ಸಿಡಿಸಿದರು. 69(38) ರನ್ ಗಳಿಸಿ ತಾಹಾ ಔಟಾದರು. ಕೆ.ಎಲ್.ಶ್ರೀಜಿತ್ 39 ಎಸೆತಗಳಲ್ಲಿ ಅಜೇಯ 61* ರನ್ ಪೇರಿಸಿದರು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ 8 ವಿಕೆಟ್‌ಗಳಿಂದ ಗೆದ್ದು ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್‌ಗೇರಿತು.
ಸಂಕ್ಷಿಪ್ತ ಸ್ಕೋರ್- ಶಿವಮೊಗ್ಗ ಲಯನ್ಸ್: 149-7 (20) (ರೋಹನ್ ಕದಂ - 54, ಎಚ್.ಎಸ್.ಶರತ್ - 18, ಮನ್ವಂತ್ ಕುಮಾರ್ - 2/29-4, ಲವಿಶ್ ಕೌಶಲ್ - 2/32-4) ಹುಬ್ಬಳ್ಳಿ ಟೈಗರ್ಸ್ -153-2 (14) (ಮೊಹಮ್ಮದ್ ತಾಹಾ - 69, ಕೆ.ಎಲ್ ಶ್ರೀಜಿತ್ - 61*, ವಿ.ಕೌಶಿಕ್ - 1/17-2, ನಿಶ್ಚಿತ್ ರಾವ್ - 1/24-3) ಪಂದ್ಯ ಶ್ರೇಷ್ಠ: ಮೊಹಮ್ಮದ್ ತಾಹಾ
ಇದನ್ನೂ ಓದಿ: ಮಹಾರಾಜ ಟ್ರೋಫಿ: ಬೆಂಗಳೂರು ವಿರುದ್ಧ ಗೆದ್ದು ಸೆಮಿಫೈನಲ್ ಸ್ಥಾನ ಗಿಟ್ಟಿಸಿದ ಶಿವಮೊಗ್ಗ