ಬೆಂಗಳೂರು: ಬೆಂಗಳೂರು ನಗರದ ಮಹಾಲಕ್ಷ್ಮಿ ಲೇಔಟ್ ಉಪಚುನಾವಣೆಗೆ ನೀರಸ ಮತದಾನ ಆಗ್ತಿದೆ. ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ.15.7 ರಷ್ಟು ಮತದಾನ ಆಗಿದೆ. ಮತ ಕೇಂದ್ರದತ್ತ ಮತದಾರರು ಹೆಚ್ಚಾಗಿ ಬರುತ್ತಿಲ್ಲ. ಮತದಾರರಿಲ್ಲದೆ ಮಹಾಲಕ್ಷ್ಮಿಪುರ ಬಸವೇಶ್ವರ ಫ್ರೌಡಶಾಲೆಯ ಮತಗಟ್ಟೆಗಳು ಖಾಲಿ ಹೊಡೆಯುತ್ತಿವೆ.
ಶಾಲಾ ಆವರಣದಲ್ಲಿ 7ಮತ ಗಟ್ಟೆಗಳಿದ್ದು ನೀರಸ ಮತದಾನವಾಗ್ತಿದೆ. 9 ಗಂಟೆಯವರೆಗೆ 8.21 ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ 270 ಮತಗಟ್ಟೆಗಳಿದ್ದು, ಬಹುತೇಕ ಮತಗಟ್ಟೆಗಳು ಖಾಲಿಹೊಡೆಯುತ್ತಿವೆ. ಒಬ್ಬೊಬ್ಬರೇ ಬಂದು ಮತ ಚಲಾಯಿಸುತ್ತಿದ್ದಾರೆ. ಯುವ ಮತದಾರರ ಸಂಖ್ಯೆ ಬಹಳಷ್ಟು ಕಡಿಮೆ ಇದೆ.
ಉಪಚುನಾವಣೆ ಆಗಿರೋದ್ರಿಂದ ಜನರಿಗೆ ಬೇಸತ್ತು ಚುನಾವಣೆಗೆ, ಮತ ಹಾಕಲು ಬರುತ್ತಿಲ್ಲ ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ.