ETV Bharat / state

ಮಹದೇವಪುರ ಕ್ಷೇತ್ರ ಸ್ಥಿತಿಗತಿ: ಲಿಂಬಾವಳಿ ಬಿಗಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಯತ್ನ

ಕ್ಷೇತ್ರದಲ್ಲಿನ ಸಮಸ್ಯೆಗಳನ್ನೇ ಬಂಡವಾಳವಾಗಿಸಿ ಕಾಂಗ್ರೆಸ್ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಬಿಗಿ ಹಿಡಿತವನ್ನು ಸಡಿಲಗೊಳಿಸಲು ಯತ್ನಿಸುತ್ತಿದೆ.

author img

By

Published : Mar 14, 2023, 7:35 AM IST

Updated : Mar 14, 2023, 9:52 AM IST

Mahadevapura Assembly Election
ಮಹದೇವಪುರ ಕ್ಷೇತ್ರ ಸ್ಥಿತಿಗತಿ

ಬೆಂಗಳೂರು: ಮಹದೇವಪುರ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರದಲ್ಲೊಂದು. ಮಳೆ ಕ್ಷೇತ್ರವನ್ನು ಇನ್ನಿಲ್ಲದಂತೆ ಕಾಡಿತ್ತು. ಈ ಮಧ್ಯೆ ವಿಧಾನಸಭೆ ಚುನಾವಣೆ ಎದುರಾಗಿದೆ. ಸದ್ಯ ಬಿಜೆಪಿ ಆಖಾಡವಾಗಿರುವ ಕ್ಷೇತ್ರದ ಸ್ಥಿತಿಗತಿ ಏನಿದೆ? ಎಂಬ ಸಮಗ್ರ ವರದಿ ಇಲ್ಲಿದೆ.

ಮಹದೇವಪುರ ಕ್ಷೇತ್ರ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ 2ನೇ ಕ್ಷೇತ್ರ. ಅತಿ ಹೆಚ್ಚು ಐಟಿ ಕಂಪನಿಗಳಿಗೂ ತವರು. ಬೆಂಗಳೂರಿನ‌ ಹೊರವಲಯಗಳು ಮಹದೇವಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಐಟಿ ಕಂಪನಿಗಳ ಆಶ್ರಯ ತಾಣವಾಗಿರುವ ಈ ಕ್ಷೇತ್ರದಲ್ಲಿ ವಲಸಿಗ ಮತದಾರರ ಸಂಖ್ಯೆ ಅಧಿಕ. ಬಹುತೇಕ ಟೆಕ್ಕಿಗಳು ಕ್ಷೇತ್ರದಲ್ಲಿ ವಾಸವಾಗಿದ್ದಾರೆ. ಅನ್ಯ ರಾಜ್ಯದ ಜನರು ಈ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ.

'ಕೈ' ವಶಕ್ಕೆ ಕಾರ್ಯತಂತ್ರ: ಬಹುರಾಷ್ಟ್ರೀಯ ಕಂಪನಿಗಳ ತಾಣವಾಗಿರುವ ಕ್ಷೇತ್ರದಲ್ಲಿ 11 ಗ್ರಾಮ ಪಂಚಾಯತಿಗಳಿವೆ. ಹಾಗಾಗಿ ನಗರೀಕರಣ ಹಾಗೂ ಹಳ್ಳಿಗಳ ಸಮೀಕರಣದ ಕ್ಷೇತ್ರ ಇದಾಗಿದೆ. ಸದ್ಯ ಇದು ಬಿಜೆಪಿಯ ಭದ್ರಕೋಟೆ. 2008ರ ಕ್ಷೇತ್ರ ವಿಂಗಡಣೆ ಬಳಿಕ ರಚನೆಯಾದ ಕ್ಷೇತ್ರದಲ್ಲಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಬಿಜೆಪಿಯ ಗೆಲುವಿನ ಕುದುರೆಯಾಗಿದ್ದಾರೆ. ಸತತ 3 ಬಾರಿಯೂ ಅರವಿಂದ ಲಿಂಬಾವಳಿ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಹಿಡಿದುಕೊಂಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಬಿಜೆಪಿಯಿಂದ ಮಹದೇವಪುರ ಕ್ಷೇತ್ರವನ್ನು ವಶಕ್ಕೆ ಪಡೆಯಲು ಪಣತೊಟ್ಟಿದೆ.

ಚುನಾವಣಾ ಲೆಕ್ಕಾಚಾರ: ಸತತ ಮೂರು ಬಾರಿ ಗೆಲುವು ಸಾಧಿಸಿದ ಅರವಿಂದ ಲಿಂಬಾವಳಿಗೆ ಈ ಬಾರಿಯೂ ಬಿಜೆಪಿ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಇತ್ತ ಲಿಂಬಾವಳಿಗೆ ಕ್ಷೇತ್ರ ಬದಲಾವಣೆಯ ಮಾತುಗಳು ಕೇಳಿ ಬರುತ್ತಿದೆ. ಅವರು ಈ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವನ್ನು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ 4ನೇ ಬಾರಿ ಕ್ಷೇತ್ರದಲ್ಲಿ ಗೆಲುವಿನ ಕಣ್ಣಿಟ್ಟಿದ್ದಾರೆ. ಆದರೆ ಆಡಳಿತ ವಿರೋಧಿ ಅಲೆ ಬಲವಾಗಿರುವುದು ಈ ಬಾರಿ ಲಿಂಬಾವಳಿಗೆ ಸವಾಲಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.

ಲಿಂಬಾವಳಿ ವಿರೋಧಿ ಅಲೆ: ಕ್ಷೇತ್ರದಲ್ಲಿನ ಸಮಸ್ಯೆಗಳನ್ನೇ ಬಂಡವಾಳವಾಗಿಸಿ ಕಾಂಗ್ರೆಸ್ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿಯವರ ಬಿಗಿ ಹಿಡಿತವನ್ನು ಸಡಿಲಗೊಳಿಸಲು ಯತ್ನಿಸುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಹಿರಿದಾಗಿದೆ. ಸುಮಾರು 10ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಬಾರಿ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್.ನಾಗೇಶ್ ಅವರನ್ನು ಪಕ್ಷಕ್ಕೆ ಕರೆತಂದಿರುವ ಕಾಂಗ್ರೆಸ್ ಮಹದೇವಪುರ ಕ್ಷೇತ್ರದಲ್ಲಿ ಕಣಕ್ಕಳಿಸುವ ಇರಾದೆಯಲ್ಲಿದೆ. ಆ ಮೂಲಕ ಅರವಿಂದ ಲಿಂಬಾವಳಿಯನ್ನು ಮಣಿಸುವ ತಂತ್ರವನ್ನು ಕಾಂಗ್ರೆಸ್ ಹೆಣೆದಿದೆ.

ಕ್ಷೇತ್ರದಲ್ಲಿ ಏನಿದ್ದರೂ ಬಿಜೆಪಿ ಮತ್ರು ಕಾಂಗ್ರೆಸ್ ನಡುವೆಯೇ ಬಹುವಾಗಿ ಜಿದ್ದಾಜಿದ್ದು ಇದೆ. ಜೆಡಿಎಸ್​​ನಿಂದ ಸ್ಥಳೀಯ ಮುನಿವೆಂಕಟಪ್ಪ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಆಮ್ ಆದ್ಮಿ ಪಕ್ಷದಿಂದ ಅಶೋಕ್ ಮೃತ್ಯುಂಜಯ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿನ ರಾಜಕೀಯ, ಮತದಾರರ ಸಮೀಕರಣ ಬದಲಾಗಿದೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಕ್ಷೇತ್ರ ಜಿದ್ದಾಜಿದ್ದಿನ ಸ್ಪರ್ಧೆಗೆ ವೇದಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಕ್ಷೇತ್ರದ ಸಮಸ್ಯೆಗಳೇನು?: ಮಹದೇವಪುರ ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಕಸದ ಸಮಸ್ಯೆ, ನೀರಿನ ಸಮಸ್ಯೆ ಹಾಗೂ ಟ್ರಾಫಿಕ್ ಸಮಸ್ಯೆ, ಕಲುಷಿತ ಕೆರೆಗಳು ಕ್ಷೇತ್ರದ ಹಾಗೂ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಯಾಗಿವೆ. ಈಗಾಗಲೇ ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕಿಸುವ ಕಾಮಗಾರಿ ಅಂತಿಮ ಹಂತ ತಲುಪಿದೆ. ಸಿಲ್ಕ್‌ಬೋರ್ಡ್‌ನಿಂದ ಹೊರ ವರ್ತುಲ ರಸ್ತೆ, ಕೆ.ಆರ್.ಪುರ, ಹೆಬ್ಬಾಳ ಮೂಲಕ ವಿಮಾನ ನಿಲ್ದಾಣ ತಲುಪುವ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಈ ವರ್ಷದ ಮಳೆ ಈ ಕ್ಷೇತ್ರವನ್ನು ಇನ್ನಿಲ್ಲದೆ ಕಾಡಿತ್ತು. ಹೊರ ವರ್ತುಲ ರಸ್ತೆ ನದಿಯಂತಾಗಿದ್ದಲ್ಲದೆ, ಐ.ಟಿ ಕಂಪನಿಗಳು ಮತ್ತು ಪ್ರತಿಷ್ಠಿತ ಬಡಾವಣೆಗಳಿಗೆ ನೀರು ನುಗ್ಗಿ ಜನರು ಪರದಾಡಿದ್ದರು.

ಈ ಸಮಸ್ಯೆಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಹೇಳಲಾಗಿದೆ. ಬಳಿಕ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯೂ ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಹತ್ತು ಹಲವು ಸಮಸ್ಯೆಗಳ ಮಧ್ಯೆ ಇದೀಗ ಚುನಾವಣೆ ಎದುರಾಗಿರುವುದು ಆಖಾಡದ ಕದನ ಕುತೂಹಲವನ್ನು ಹೆಚ್ಚಿಸಿದೆ.

ಜಾತಿವಾರು ಲೆಕ್ಕಾಚಾರ: ಕ್ಷೇತ್ರದಲ್ಲಿ ಒಟ್ಟು 5.72 ಲಕ್ಷ ಮತದಾರರಿದ್ದಾರೆ. ಈ ಪೈಕಿ 3,08,859 ಪುರುಷ ಮತದಾರರಿದ್ದರೆ, 2,63,560 ಮಹಿಳಾ ಮತದಾರರು ಇದ್ದಾರೆ. ಕಳೆದ ವರ್ಷಗಿಂತ ಈ ಬಾರಿ ಸುಮಾರು 1 ಲಕ್ಷ ಮತದಾರರ ಸಂಖ್ಯೆ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಎಸ್​​ಸಿ, ಎಸ್​ಟಿ ಮತದಾರರೇ ನಿರ್ಣಾಯಕರು. ಸುಮಾರು 2,25,000 ರಷ್ಟು ಎಸ್​​‌ಸಿ ಹಾಗೂ ಎಸ್‌ಟಿ ಮತಗಳಿವೆ. ಇನ್ನು ಒಬಿಸಿ ಮತದಾರರ ಸಂಖ್ಯೆ 98,000. ಈ ಪೈಕಿ ಒಕ್ಕಲಿಗ ಮತದಾರರು 95,000 ಇದ್ದಾರೆ. ಮುಸ್ಲಿಂ ಮತದಾರರ ಸಂಖ್ಯೆ 45,000-50,000 ಇದೆ. ಇತರೆ ಸಮುದಾಯದವರ ಸಂಖ್ಯೆ ಸುಮಾರು 30,000 ಇದೆ.

2018ರ ಚುನಾವಣಾ ಫಲಿತಾಂಶ: ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ‌ಮಧ್ಯೆಯೇ ಜಿದ್ದಾಜಿದ್ದಿ. ಕ್ಷೇತ್ರ ರಚನೆಯಾದಾಗಿನಿಂದ ಬಿಜೆಪಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕ ಅರವಿಂದ ಲಿಂಬಾವಳಿ 1,41,682 ಮತಗಳನ್ನು ಗಳಿಸಿ ಸತತ ಮೂರನೇ ಬಾರಿ ಗೆಲುವು ಸಾಧಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಸಿ.ಶ್ರೀನಿವಾಸ್ 1,23,898 ಮತ ಪಡೆದು ಅರವಿಂದ ಲಿಂಬಾವಳಿಗೆ ಪೈಪೋಟಿ ನೀಡಿದ್ದರು. ಬಿಜೆಪಿಯ ಅರವಿಂದ ಲಿಂಬಾವಳಿ 17,784 ಅಂತರದಿಂದ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆ ಮೂಲಕ ಬಿಜೆಪಿ ಹಾಲಿ ಶಾಸಕ ಲಿಂಬಾವಳಿ ಕ್ಷೇತ್ರದಲ್ಲಿ ಒಟ್ಟು ಮತಗಳ ಪೈಕಿ ಶೇ 50 ರಷ್ಟು ಮತ ಗಳಿಸಿದ್ದರೆ, ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ. 44 ರಷ್ಟಿತ್ತು.

ಇದನ್ನೂ ಓದಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2023: ಅಂತಿಮ ಮತದಾರರ ಪಟ್ಟಿ ಪ್ರಕಟ

Last Updated : Mar 14, 2023, 9:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.