ETV Bharat / state

ಜಂಟಿ ಸಮಿತಿಯಿಂದ ಮಹದಾಯಿ ಸ್ಥಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಆದೇಶ : ರಮೇಶ್ ಜಾರಕಿಹೊಳಿ ಸ್ಪಷ್ಟನೆ

ಕರ್ನಾಟಕ ರಾಜ್ಯವು ಮಹದಾಯಿ ನದಿ ನೀರನ್ನು ಮಲಪ್ರಭೆಯತ್ತ ಹರಿಸಿದ್ದು, ಇದರಿಂದ ಗೋವಾಕ್ಕೆ ನೀರು ಹರಿಯುತ್ತಿಲ್ಲ ಎಂಬ ವಾದವನ್ನು ರಾಜ್ಯದ ಪರ ವಕೀಲರು ಸಮರ್ಥವಾಗಿ ಎದುರಿಸಿದರು..

Mahadai water Sharing dispute hearing in Supreme Court
ಮಹಾದಾಯಿ ನೀರು ಹಂಚಿಕೆ ಕುರಿತು ಅರ್ಜಿ ವಿಚಾರಣೆ
author img

By

Published : Feb 22, 2021, 10:54 PM IST

ನವದೆಹಲಿ/ಬೆಂಗಳೂರು : ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೋವಾ ವಾದಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್ ಜಂಟಿ ಸಮಿತಿಯಿಂದ ಸ್ಥಳ ಪರಿಶೀಲನೆಗೆ ಆದೇಶಿಸಿದೆಯೇ ಹೊರತು, ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿ ರಾಜ್ಯಕ್ಕೆ ನೋಟಿಸ್ ಜಾರಿ ಮಾಡಿಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ವಿವಿಧ ರಾಜ್ಯಗಳೊಂದಿಗಿನ ನದಿ ನೀರು ಹಂಚಿಕೆ ಸಂಬಂಧ ಉದ್ಭವಿಸಿರುವ ಬಿಕ್ಕಟ್ಟು ಸಂಬಂಧ ನವದೆಹಲಿ ಪ್ರವಾಸ ಕೈಗೊಂಡಿರುವ ಸಚಿವರು, ಸೋಮವಾರದ ಬೆಳವಣಿಗೆಗಳ ಬಗ್ಗೆ ಈ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ರಾಜ್ಯವು ಮಹದಾಯಿ ನದಿ ನೀರನ್ನು ಮಲಪ್ರಭೆಯತ್ತ ಹರಿಸಿದ್ದು, ಇದರಿಂದ ಗೋವಾಕ್ಕೆ ನೀರು ಹರಿಯುತ್ತಿಲ್ಲ ಎಂಬ ವಾದವನ್ನು ರಾಜ್ಯದ ಪರ ವಕೀಲರು ಸಮರ್ಥವಾಗಿ ಎದುರಿಸಿದರು ಎಂದು ಹೇಳಿದ್ದಾರೆ.

ಓದಿ : ಮಹದಾಯಿ ನದಿ ನೀರು ಹಂಚಿಕೆ.. ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

ಅರ್ಜಿ ವಿಚಾರಣೆ ವೇಳೆ ಉಭಯ ಪಕ್ಷಗಳ ವಾದ ಆಲಿಸಿದ ಸುಪ್ರೀಂಕೋರ್ಟ್, ಮೂರೂ ಅರ್ಜಿದಾರರಾದ ಕರ್ನಾಟಕ, ಮಹಾರಾಷ್ಟ ಮತ್ತು ಗೋವಾಗಳಿಗೆ ತಲಾ ಓರ್ವ ಸೂಪರಿಂಟೆಂಡೆಂಟ್ ಇಂಜಿನಿಯರ್‌ಗಳನ್ನು ನೇಮಿಸುವಂತೆ ಸೂಚನೆ ನೀಡಿದ್ದು, ಈ ಮೂರೂ ಮಂದಿ ಸ್ಥಳ ಪರಿಶೀಲನೆ ನಡೆಸಿ ಸುಪ್ರೀಂಕೋರ್ಟ್​ಗೆ ಈ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.