ETV Bharat / state

ತನ್ನದೇ ಮನೆಗಾಗಿ ಮಕ್ಕಳ ಜೊತೆ ಮನೆ ಮುಂದೆ ಪ್ರತಿಭಟನೆಗೆ ಕುಳಿತ ತಾಯಿ - ಮನೆಯನ್ನು ಹೊಡೆಯುವ ಸಂಚು

ವಾಸವಾಗಿದ್ದ ಮನೆ ಕಳೆದು ಕೊಂಡು ಮಕ್ಕಳೊಂದಿಗೆ ತಾಯಿ ಬೀದಿಗೆ ಬಂದಿದ್ದಾರೆ.

ಪ್ರತಿಭಟನೆಗೆ ಕುಳಿತ ತಾಯಿ
ಪ್ರತಿಭಟನೆಗೆ ಕುಳಿತ ತಾಯಿ
author img

By

Published : Jun 2, 2023, 9:30 PM IST

ಯಲಹಂಕ (ಬೆಂಗಳೂರು) : ಹದಿನಾಲ್ಕು ವರ್ಷ ಸಂಸಾರ ನಡೆಸಿದ ತನ್ನದೇ ಮನೆಗಾಗಿ ಮಕ್ಕಳ ಜೊತೆ ತಾಯಿ ತನ್ನ ಮನೆಯ ಮುಂದೆಯೇ ಪ್ರತಿಭಟನೆ ನಡೆಸುತ್ತಿರುವ ಘಟನೆ ನಡೆದಿದೆ. ಮನೆ ಕಳೆದುಕೊಂಡಿರುವ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಸಾಕುವ ಹೊಣೆ ಹೊತ್ತು ಪ್ರತಿಭಟನೆ ದಾರಿ ತುಳಿದಿದ್ದಾರೆ. ತನ್ನ ಮನೆ ಮುಂದೆ ಕುಳಿತ್ತಿರುವ ಮಹಿಳೆ ನನ್ನ ಮನೆ.. ನನ್ನ ಹಕ್ಕು.. ನನ್ನ ಕಾನೂನು.. ನನ್ನ ಸಂವಿಧಾನ ಅಂತಾ ಬೋರ್ಡ್ ಹಿಡಿದು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಅಂದಹಾಗೇ ಪ್ರತಿಭಟನೆ ನಡೆಸುತ್ತಿರುವ ಇವರ ಹೆಸರು ಪುಷ್ಪವತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗಾಳಿಪೂಜೆ ಗ್ರಾಮದವರು. ಹದಿನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಹೆಗಡೆ ನಗರದ ಮುಂಜುನಾಥ್ ಇವರನ್ನು ಮದುವೆಯಾಗಿದ್ದು, ಹೆಗಡೆ ನಗರದ 1ನೇ ಕ್ರಾಸ್ ನಲ್ಲಿ ವಾಸವಾಗಿದ್ದರು. ಇವರ ದಾಪಂತ್ಯಕ್ಕೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗನಿದ್ದು, ಮಂಜುನಾಥ್ ಸಹೋದರರು ಸಹ ಜೊತೆಯಲ್ಲಿ ವಾಸವಾಗಿದ್ದರು.

ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಮಂಜುನಾಥ್ ಇತ್ತಿಚೇಗೆ ಬುದ್ದಿಮಾಂದ್ಯತೆಯಿಂದ ಬಳಲುತ್ತಿದ್ದು, ಅಣ್ಣನ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ತಮ್ಮಂದಿರಾದ ಸುರೇಶ್ ಮತ್ತು ಅಂಜಿನಪ್ಪ ಅಣ್ಣನ ಮನೆಯನ್ನು ಹೊಡೆಯುವ ಸಂಚು ನಡೆಸಿದ್ದಾರೆ. ಅಣ್ಣನಿಗೆ ಕುಡಿಸಿ ಇಲ್ಲದ ಸಲ್ಲದ ಚಾಡಿ ಹೇಳಿ ಗಂಡ ಹೆಂಡತಿಯರ ನಡುವೆ ವಿರಸ ಮೂಡಿಸಿದ್ದಾರೆ. ಮತ್ತು 20 ಲಕ್ಷ ಹಣಕ್ಕೆ ಮನೆಯನ್ನು ಖರೀದಿ ಮಾಡಿದ್ದಾರೆ. ಆದರೆ 20 ಲಕ್ಷ ಹಣದಲ್ಲಿ ಒಂದು ರೂಪಾಯಿ ಸಹ ನಮ್ಮ ಕೈಗೆ ಬಂದಿಲ್ಲ.

ಬಳಿಕ ಮೇ 26 ರಂದು ಸಂಜೆ 6:30 ಸಮಯದಲ್ಲಿ ಪುಷ್ಪಲತಾ ದೇವಸ್ಥಾನಕ್ಕೆ ಹೋಗಿದ್ದ ಸಮಯದಲ್ಲಿ ಮನೆಗೆ ನುಗ್ಗಿದ ಸುರೇಶ್ ಮನೆಯಲ್ಲಿದ್ದ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಿದ್ದಾರೆ. ಜೊತೆಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪಲತಾ ತನ್ನ ಗಂಡನ ಸಹೋದರರ ವಿರುದ್ಧ ಆರೋಪ ಮಾಡಿದ್ದಾರೆ.

ಮಂಜುನಾಥ್ ತಾಯಿ ಲಕ್ಷಮ್ಮ ಅವರಿಗೆ ಸರ್ಕಾರದಿಂದ ಮಂಜುರಾದ ಸೈಟ್ ನಲ್ಲಿ ಮೂವರು ಸಹೋದರರು ಬೇರೆ ಬೇರೆ ಕಡೆ ವಾಸವಾಗಿದ್ದರು. ಮಂಜುನಾಥ್ ಭಾಗಕ್ಕೆ 500 ಅಡಿಗಳ ಮನೆ ಸಿಕ್ಕಿತ್ತು. ಈ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗ ಹೇಗೆ ಮನೆಯಲ್ಲಿದ್ದ ಸಾಮಗ್ರಿಗಳನ್ನ ಬೇರೆಡೆ ಸಾಗಿಸಿ ಮನೆಗೆ ಬೀಗಿ ಹಾಕಿದ್ದಾರೆಂಬುದು ಪುಷ್ಪಲತಾರ ಪ್ರಶ್ನೆಯಾಗಿದೆ. ಸದ್ಯ ವಾಸವಾಗಿದ್ದ ಮನೆಯನ್ನು ಕಳೆದು ಕೊಂಡಿರುವ ಪುಷ್ಪಲತಾ ನೆಲೆ ಇಲ್ಲದೇ ಮಕ್ಕಳೊಂದಿಗೆ ಬೀದಿಗೆ ಬಂದಿದ್ದಾರೆ.

ಗಂಡನ ಸಹೋದರರು ಹೇಳುವುದೇನು?: ಪುಷ್ಪಲತಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಂಜುನಾಥ್ ಸಹೋದರ ಸುರೇಶ್, ಪುಷ್ಪಲತಾ ಹೆಂಡತಿಯಾಗಿ ನನ್ನ ಅಣ್ಣನನ್ನು ಸರಿಯಾಗಿ ನೋಡಿ ಕೊಳ್ಳುತ್ತಿರಲಿಲ್ಲ. ಮನೆ ಖರೀದಿಗೆ ಸಂಬಂಧಿಸಿದಂತೆ 20 ಲಕ್ಷ ಹಣವನ್ನ ಕೊಡಲಾಗಿದೆ. ಆದರೆ ಕೊಟ್ಟ ಹಣವನ್ನು ಖರ್ಚು ಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಿದರು.

ಮಂಜುನಾಥ್ ಮನೆ ಖರೀದಿ ಮಾಡುವಾಗ ಪುಷ್ಪಲತಾರವ ಸಹಿ ಇರ ಬೇಕಿತ್ತು. ಆದರೆ ಮಂಜುನಾಥ್ ಅವರ ಸಹಿಯೊಂದಿಗೆ ಖರೀದಿ ಮಾಡಿರೋದು ಅನುಮಾನಕ್ಕೆ ಎಡೆ ಮಾಡಿದೆ. ಮನೆ ಖರೀದಿ ಮಾಡುವಾಗ 20 ಲಕ್ಷ ಹಣವನ್ನು ನಗದು ರೂಪದಲ್ಲಿ ಕೊಟ್ಟಿರುವುದ್ದಾಗಿ ಹೇಳುತ್ತಿರುವುದು ಸಹ ಅನುಮಾನ ಮೂಡಿಸಿದೆ.

ಇದನ್ನೂ ಓದಿ : ಆಸ್ತಿಗಾಗಿ ವೃದ್ಧ ತಂದೆಯನ್ನೇ ಮನೆಯಿಂದ ಹೊರಹಾಕಿದ ಮಕ್ಕಳು: ಸ್ವಯಾರ್ಜಿತ ಆಸ್ತಿಗಾಗಿ ಪಂಚಾಯಿತಿ ಎದುರು ಪ್ರತಿಭಟನೆಗೆ ಕುಳಿತ ವೃದ್ಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.