ETV Bharat / state

ವಾಣಿಜ್ಯ ಉದ್ದಿಮೆಗೆ ಅಕ್ರಮ ಪರವಾನಗಿ: ಎಂ.ಲಕ್ಷ್ಮೀನಾರಾಯಣ್‌ ಕ್ಲೀನ್‌ಚಿಟ್‌ ರದ್ದು - Kannada news

'ನಮ್ಮ ಬೆಂಗಳೂರು ಪೌಂಡೇಷನ್' ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಎಂ.ಲಕ್ಷ್ಮೀನಾರಾಯಣ್‌ ಅವರಿಗೆ ನೀಡಲಾದ ಕ್ಲೀನ್‌ಚಿಟ್ ಆದೇಶ ರದ್ದುಪಡಿಸಿದೆ.

ಹೈಕೋರ್ಟ್
author img

By

Published : May 30, 2019, 7:59 AM IST

ಬೆಂಗಳೂರು : ಕೋರ್ಟ್ ಆದೇಶ ಧಿಕ್ಕರಿಸಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಉದ್ದಿಮೆ ಪರವಾನಗಿ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದಎಂ.ಲಕ್ಷ್ಮೀನಾರಾಯಣ್‌ ಅವರಿಗೆ ನೀಡಲಾಗಿದ್ದ ಕ್ಲೀನ್‌ಚಿಟ್ ಆದೇಶವನ್ನು ರದ್ದುಪಡಿಸಿದೆ.

'ನಮ್ಮ ಬೆಂಗಳೂರು ಪೌಂಡೇಶನ್' ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ, ಎಂ. ಲಕ್ಷ್ಮೀನಾರಾಯಣ್‌ಗೆ ಕ್ಲೀನ್‌ಚಿಟ್ ನೀಡಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಹೊಸದಾಗಿ ಉದ್ದಿಮೆ ಪರವಾನಗಿ ನೀಡಬಾರದು ಎಂದು 2016ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ, ಕೋರಮಂಗಲದ 8ನೇ ಮುಖ್ಯರಸ್ತೆಯಲ್ಲಿ ಕ್ಲಬ್ ಒಂದಕ್ಕೆ 2016ರ ಪಾಲಿಕೆ ಆಯುಕ್ತರಾಗಿದ್ದ ಎಂ.ಲಕ್ಷ್ಮೀನಾರಾಯಣ್ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ 'ನಮ್ಮ ಬೆಂಗಳೂರು ಫೌಂಡೇಶನ್‌' ಲಕ್ಷ್ಮೀ ನಾರಾಯಣ‌ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿ‌ದ ಕೋರ್ಟ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿತ್ತು. ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, 2016ರ ಸೆ.29ರಂದು ಎಂ. ಲಕ್ಷ್ಮೀನಾರಾಯಣ್ ಅವರಿಗೆ ಕ್ಲೀನ್‌ಚಿಟ್ ನೀಡಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮತ್ತೆ 'ನಮ್ಮ ಬೆಂಗಳೂರು ಫೌಂಡೇಶನ್' ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

Intro:ನಮ್ಮ ಬೆಂಗಳೂರು ಪೌಂಡೇಷನ್ ಸಲ್ಲಿಸಿದ್ದ ಅರ್ಜಿ
ಎಂ.ಲಕ್ಷ್ಮೀನಾರಾಯಣ್‌ಗೆ ಕ್ಲೀನ್‌ಚಿಟ್ ಆದೇಶ
ರದ್ದು ಪಡಿಸಿದ ಹೈಕೋರ್ಟ್

ಭವ್ಯ.

ನಮ್ಮ ಬೆಂಗಳೂರು ಪೌಂಡೇಷನ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿ ಎಂ.ಲಕ್ಷ್ಮೀನಾರಾಯಣ್‌ಗೆ ಕ್ಲೀನ್‌ಚಿಟ್ ನೀಡಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಹಾಗೆ ಲಕ್ಷ್ಮೀನಾರಾಯಣ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಮನವಿ ಸಲ್ಲಿಸಲು
ಬೆಂಗಳೂರು ಪೌಂಡೇಷನ್ ಅರ್ಜಿದಾರರಿಗೆ
ಅವಕಾಶ ನೀಡಿ ಅರ್ಜಿಯನ್ನ ಇತ್ಯರ್ಥಪಡಿಸಿದೆ ಹೈಕೋರ್ಟ್

ಪ್ರಕರಣವೇನು?

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಹೊಸದಾಗಿ ಉದ್ದಿಮೆ ಪರವಾನಗಿ ನೀಡಬಾರದು ಎಂದು 2016ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ ಕೋರಮಂಗಲದ 8ನೇ ಮುಖ್ಯರಸ್ತೆಯಲ್ಲಿ ಕ್ಲಬ್ಗೆ 2016ರ ಪಾಲಿಕೆ ಆಯುಕ್ತರಾಗಿದ್ದ ಎಂ. ಲಕ್ಷ್ಮೀನಾರಾಯಣ್ ಅನುಮತಿ ನೀಡಿದ್ರು. ಇದನ್ನ ಪ್ರಶ್ನಿಸಿ ನಮ್ಮ ಬೆಂಗಳೂರು ಪೌಂಡೇಷನ್‌ ಲಕ್ಷೀನಾರಯಣ‌ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ರು.. ನಂತ್ರ ಹೈಕೋರ್ಟ್ ವಿಚಾರಣೆ ನಡೆಸಿ‌ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಖುವಂತೆ ಹೈಕೋರ್ಟ್ ಸೂಚನೆ ನೀಡಿತ್ತು . ಮನವಿ ಪರಿಶೀಲಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2016ರ ಸೆ.29ರಂದು ಎಂ.ಲಕ್ಷ್ಮೀನಾರಾಯಣ್ ಅವರಿಗೆ ಕ್ಲೀನ್ ಚಿಟ್ ನೀಡಿ ಆದೇಶಿಸಿದ್ದರು. ಇದನ್ನ ಪ್ರಶ್ನೀಸಿ ಮತ್ತೆ ನಮ್ಮ ಬೆಂಗಳೂರು ಪೌಂಡೇಷನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ರು‌ . ಈ ಅರ್ಜಿ ಇವತ್ತು ಹೈಕೋರ್ಟ್ ಇತ್ಯರ್ಥ ಮಾಡಿ ಆದೇಶ ಹೊರಡಿಸಿದೆ.

Body:KN_BNG_08_29_HIGCOURT_BHAVYA_7204498Conclusion:KN_BNG_08_29_HIGCOURT_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.