ETV Bharat / state

ಪ್ರೇಯಸಿಗೆ ಚಾಕು ಇರಿದು ಚಲಿಸುವ ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ - ಚಾಕು ಇರಿತ

ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು‌ ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಮಹದೇವನ್ ತಿಳಿಸಿದ್ದಾರೆ..

Lover who attempted suicide by falling off a moving train After killed his lover
ಪ್ರೇಯಸಿಗೆ ಚಾಕು ಇರಿದು ಚಲಿಸುವ ರೈಲಿನಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ
author img

By

Published : Apr 5, 2021, 4:38 PM IST

ಬೆಂಗಳೂರು : ಪ್ರೇಯಸಿಯನ್ನು ಕೊಲೆ ಮಾಡಿ ಪ್ರಿಯತಮ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಸುಂದರಪಾಳ್ಯದಲ್ಲಿ ನಡೆದಿದೆ‌. ಕೊಲೆಯಾದ ಪ್ರಿಯತಮೆಗೆ 17 ವರ್ಷ ಎನ್ನಲಾಗಿದೆ.

ಸೋಮಸುಂದರಪಾಳ್ಯದಲ್ಲಿ ವಾಸವಾಗಿದ್ದ ರಾಜು ಜೊಮ್ಯಾಟೊ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಅಪ್ರಾಪ್ತೆಯನ್ನ ಪ್ರೀತಿಸುತ್ತಿದ್ದ. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಬಂದಿದ್ದು, ಇಬ್ಬರೂ ದೂರವಾಗಿದ್ದರು‌‌. ಇದೇ ಕೋಪಕ್ಕೆ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಬಳಿಕ ತಾನೂ ಸಾಯಲು ನಿರ್ಧರಿಸಿ ನಿನ್ನೆ ಬೆಳಗ್ಗೆ ಯಶವಂತಪುರ-ಮಲ್ಲೇಶ್ವರ ರೈಲ್ವೆ ಮಾರ್ಗ ಮಧ್ಯೆ ರೈಲಿನಿಂದ ಜಿಗಿದಿದ್ದಾನೆ. ರೈಲಿನಿಂದ ಕೆಳಗೆ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟಾಗಿತ್ತು. ಸ್ಥಳೀಯರ ಸಹಕಾರದಿಂದ ಪೊಲೀಸರು ಆತನನ್ನು ನಿಮ್ಹಾನ್ಸ್​ಗೆ ದಾಖಲಿಸಿದ್ದಾರೆ.

ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು‌ ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಮಹದೇವನ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸಂಬಂಧಿಕನ ಭೀಕರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.