ETV Bharat / state

ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಖಾಸಗಿ ಶಾಲಾ ಸಂಘಟನೆಗಳ ನಿರ್ಲಕ್ಷ್ಯ: ಲೋಕೇಶ್ ತಾಳಿಕಟ್ಟೆ ಬೇಸರ - ಟಾಸ್ಕ್ ಪೋರ್ಸ್ ಕಮಿಟಿ

ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಈ ವರ್ಷದ ಭೌತಿಕ ತರಗತಿಗಳು ಶುರುವಾಗಿಲ್ಲ. ಈ ಸಂಬಂಧ ವಿದ್ಯಾರ್ಥಿಗಳನ್ನು ಕಲಿಕೆಯ ನಿರಂತರತೆಯಲ್ಲಿ ತೊಡಗಿಸಿಕೊಳ್ಳಲು ಶಿಕ್ಷಣ ಇಲಾಖೆ ಹಾಗೂ ಸರ್ಕಾರವೂ ಟಾಸ್ಕ್ ಫೋರ್ಸ್‌ ಕಮಿಟಿ ರಚಿಸಿದೆ. ಆದರೆ ಕಮಿಟಿಯಲ್ಲಿ ಖಾಸಗಿ ಶಾಲೆಗಳನ್ನು ಕಡೆಗಣಿಸಲಾಗಿದೆ ಎಂದು ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.

ಲೋಕೇಶ್ ತಾಳಿಕಟ್ಟೆ
Lokesh Talikatte
author img

By

Published : Jul 16, 2021, 4:06 PM IST

ಬೆಂಗಳೂರು: ರಾಜ್ಯದಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ‌. ಆದರೆ ಕೊರೊನಾ ಕಾರಣಕ್ಕೆ ಭೌತಿಕ ತರಗತಿಗಳು ಶುರುವಾಗಿಲ್ಲ. ಈ ಸಂಬಂಧ ವಿದ್ಯಾರ್ಥಿಗಳನ್ನು ಕಲಿಕೆಯ ನಿರಂತರತೆಯಲ್ಲಿ ತೊಡಗಿಸಿಕೊಳ್ಳಲು ಶಿಕ್ಷಣ ಇಲಾಖೆ ಹಾಗೂ ಸರ್ಕಾರವೂ ಟಾಸ್ಕ್ ಫೋರ್ಸ್ ಕಮಿಟಿ ರಚಿಸಿದೆ. ಆದರೆ ಕಮಿಟಿಯಲ್ಲಿ ಖಾಸಗಿ ಶಾಲೆಗಳನ್ನು ಕಡೆಗಣಿಸಲಾಗಿದೆ ಎಂದು ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.

ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ದೇವಿಶೆಟ್ಟಿರ ಅಧ್ಯಕ್ಷತೆಯ ರಾಜ್ಯ ತಾಂತ್ರಿಕ ಕಾರ್ಯಪಡೆಯು ಈಗಾಗಲೇ ಶಾಲೆಗಳ ಪ್ರಾರಂಭ ಹಾಗೂ ಅದು ನೆರವೇರಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ವೈಜ್ಞಾನಿಕ ನಿರ್ದೇಶನಗಳನ್ನು ಪ್ರಕಟಿಸಲಾಗಿದೆ. ವರದಿಯಲ್ಲಿ ಶಾಲಾ-ಕಾಲೇಜು ಪ್ರಾರಂಭಿಸುವ ಮುನ್ನ ಪ್ರಾಥಮಿಕ ಪಾಲುದಾರರ ಜೊತೆ ಸಮಾಲೋಚಿಸಿ ನಿರ್ಧರಿಸಬೇಕೆಂದು ಸೂಚಿಸಿದೆ.

ಅದರಂತೆ ಶಾಲಾ ಆಡಳಿತ ಮಂಡಳಿಯ ರಾಜ್ಯ ಸಂಘಟನೆಯ ಪದಾಧಿಕಾರಿಗಳು, ರಾಜ್ಯ ಪೋಷಕ ಮಂಡಳಿಯವರು, ಸರ್ಕಾರಿ ಶಾಲೆಗಳ ಎಸ್ಟಿಎಂಸಿ ರಾಜ್ಯ ಪದಾಧಿಕಾರಿಗಳು, ರಾಜ್ಯ ಶಿಕ್ಷಕ ಸಂಘಟನೆಯ ಪದಾಧಿಕಾರಿಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ಅವರ ಜೊತೆ ಚರ್ಚಿಸಿ ನಂತರ ಶಾಲೆಗಳ ಪ್ರಾರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ಸಚಿವರು ಹೇಳಿದ್ದರು.‌ ಆದರೆ ಶಿಕ್ಷಣ ಸಚಿವರು ತಮ್ಮ ಒಂದು ಕಾರ್ಯಪಡೆಯನ್ನು ರಚಿಸಿ ಮೊದಲ ಸಭೆಯನ್ನು ನಡೆಸಿದ್ದಾರೆ. ಆ ಕಾರ್ಯ ಪಡೆಯಲ್ಲಿರುವ ಯಾರೂ ಕೂಡ ಪ್ರಾಥಮಿಕ ಪಾಲುದಾರರಲ್ಲ. ಅವರು ಸರ್ಕಾರಿ ಶಾಲೆಗಳ ಸ್ಥಿತಿಗತಿ, ಅಲ್ಲಿಯ ಮಕ್ಕಳ ಪರಿಸ್ಥಿತಿಯನ್ನು ಗ್ರಾಮೀಣ ಮಟ್ಟಕ್ಕಿಳಿದು ಅಧ್ಯಯನ ಮಾಡಿರುವ ಸುಳಿವಿಲ್ಲ ಎಂದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಅಪರಾಧಕ್ಕೆ ಕಡಿವಾಣ: 600ಕ್ಕೂ ಹೆಚ್ಚು ರೌಡಿಶೀಟರ್​​ಗಳ ಮನೆ ಮೇಲೆ ದಾಳಿ

ಬಹು ಮುಖ್ಯವಾಗಿ ರಾಜ್ಯ ಎಸ್ಟಿಎಂಸಿಯ ಒಬ್ಬ ಸದಸ್ಯರೂ ಇಲ್ಲ. ಖಾಸಗಿ ಶಾಲಾ ಆಡಳಿತ ಮಂಡಳಿಯ ಇಡಿ ರಾಜ್ಯವನ್ನು ಪ್ರತಿನಿಧಿಸುವ ಒಬ್ಬ ಸದಸ್ಯರೂ ಇಲ್ಲದೆ ಇರುವುದು ಖಂಡನೀಯ. ತಾರತಮ್ಯ ಹಾಗೂ ಏಕಪಕ್ಷಿಯ ನಿರ್ಧಾರಗಳು ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು, ಜನರನ್ನು ದಾರಿ ತಪ್ಪಿಸುವ ಹುನ್ನಾರ ಆಗಿವೆ. ಶಿಕ್ಷಣ ಸಚಿವರು ಕೊಡುವ ನಿರ್ದೇಶನಗಳು ಕಳೆದ ವರ್ಷದ ರೀತಿಯೆ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಆದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳ, ಪೋಷಕರ ಹಾಗೂ ಶಾಲಾ ಆಡಳಿತ ಮಂಡಳಿಗಳ ಆತಂಕ ಹೆಚ್ಚಾಗುವ ಸಾಧ್ಯತೆಯಿದೆ. ಸರ್ಕಾರಕ್ಕೆ ಮುಜುಗರ ಆಗುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.