ETV Bharat / state

ಮರುಸ್ಥಾಪನೆ ಬೆನ್ನಲ್ಲೇ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ: ಲಂಚ ಪಡೆಯುತ್ತಿದ್ದ ಬಿಬಿಎಂಪಿ ಜಂಟಿ ಆಯುಕ್ತ ಅರೆಸ್ಟ್ - ಎಸಿಬಿ ರದ್ದು

ಮರುಸ್ಥಾಪನೆ ಬಳಿಕ ಲೋಕಾಯುಕ್ತ ಸಂಸ್ಥೆಯಿಂದ ಮೊದಲ ದಾಳಿ. ಬಿಬಿಎಂಪಿ ಕಚೇರಿ ಮೇಲೆ ದಾಳಿ ಮಾಡಿ, ಜಂಟಿ ಆಯುಕ್ತರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಲೋಕಾಯುಕ್ತರು.

ಲೋಕಾಯುಕ್ತ ಸಂಸ್ಥೆಯಿಂದ ಮೊದಲ ದಾಳಿ
ಲೋಕಾಯುಕ್ತ ಸಂಸ್ಥೆಯಿಂದ ಮೊದಲ ದಾಳಿ
author img

By

Published : Sep 12, 2022, 5:58 PM IST

Updated : Sep 12, 2022, 10:36 PM IST

ಬೆಂಗಳೂರು: ರಾಜ್ಯದಲ್ಲಿ ಲೋಕಾಯುಕ್ತ ಮರುಸ್ಥಾಪನೆ ಬೆನ್ನಲ್ಲೇ ಭ್ರಷ್ಟರ ಬೇಟೆಗೆ ಇಳಿದಿದೆ. ಪಶ್ಚಿಮ ವಿಭಾಗ ಬಿಬಿಎಂಪಿ ಕಚೇರಿ ಮೇಲೆ ಇಂದು ಲೋಕಾಯುಕ್ತ ಸಂಸ್ಥೆ ದಾಳಿ ಮಾಡಿದೆ. ಖಾತೆ ಬದಲಾವಣೆಗಾಗಿ ದೂರುದಾರರಿಂದ ಲಂಚ ಪಡೆಯುತ್ತಿದ್ದ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಹಾಗೂ ಆಪ್ತ ಸಹಾಯಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಎಫ್​​ಡಿಎ ಸಿಬ್ಬಂದಿ ಉಮೇಶ್ ಬಂಧಿತರಾಗಿದ್ದಾರೆ.‌ ಇಂದು ಮಂಜುನಾಥ್ ಎಂಬುವರಿಂದ ನಾಲ್ಕು ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ರೆಡ್​ ಹ್ಯಾಂಡಾಗಿ ಹಿಡಿದಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಮೇಲೆ ಲೋಕಾ ದಾಳಿ
ಬಿಬಿಎಂಪಿ ಅಧಿಕಾರಿಗಳ ಮೇಲೆ ಲೋಕಾ ದಾಳಿ

ಖಾತೆಗಳನ್ನು ಬದಲಾಯಿಸುವಂತೆ ಪಶ್ಚಿಮ ವಿಭಾಗದ ಕಚೇರಿಗೆ ಮಂಜುನಾಥ್ ಅರ್ಜಿ ಹಾಕಿದ್ದರು. ಖಾತೆ ಬದಲಾಯಿಸಿಕೊಡಲು 12 ಲಕ್ಷ ಹಣ ನೀಡುವಂತೆ ಶ್ರೀನಿವಾಸ್ ಡಿಮ್ಯಾಂಡ್ ಮಾಡಿದ್ದರಂತೆ. ಮಾತುಕತೆ ಬಳಿಕ 4 ಲಕ್ಷಕ್ಕೆ ಡೀಲ್ ಕುದುರಿಸಿ ಇಂದು ದೂರುದಾರರಿಂದ ಹಣ ಪಡೆಯುವಾಗ ಲೋಕಾಯುಕ್ತ ಎಸ್ಪಿ ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಮಲ್ಲೇಶ್ವರಂ ಬಳಿ ಇರುವ ಬಿಬಿಎಂಪಿ ಕಚೇರಿ ಮೇಲೆ ಲೋಕಾಯುಕ್ತ SP ಶ್ರೀನಾಥ್ ಮಹದೇವ ಜೋಶಿ ನೇತೃತ್ವದಲ್ಲಿ 8 ಜನ ಲೋಕಾ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಮೇಲೆ ಲೋಕಾ ದಾಳಿ
ಬಿಬಿಎಂಪಿ ಅಧಿಕಾರಿಗಳ ಮೇಲೆ ಲೋಕಾ ದಾಳಿ

ಮರುಸ್ಥಾಪನೆ ಬೆನ್ನಲ್ಲೇ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ: ಎಸಿಬಿ ಸ್ಥಾಪನೆ ಬಳಿಕ ಲೋಕಾಯುಕ್ತ ಸಂಸ್ಥೆ ಶಕ್ತಿ ಕಳೆದುಕೊಂಡಿತ್ತು. ಇದೀಗ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಮರುಸ್ಥಾಪಿಸಲಾಗಿದೆ. ಈ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆ ಕಾರ್ಯಾಚರಣೆಗೆ ಇಳಿದಿದೆ. ಇಂದು ಮೊದಲ ದಾಳಿ ಮಾಡಿದೆ. ಆರು ವರ್ಷಗಳ ಬಳಿಕ ಬಂಧಿಸುವ ಅಧಿಕಾರ ಪಡೆದಿರುವ ಲೋಕಾಯುಕ್ತ ಸಂಸ್ಥೆ, ಬಿಬಿಎಂಪಿ ಅಧಿಕಾರಗಳಿಗೆ ಶಾಕ್ ನೀಡಿದೆ.

(ಇದನ್ನೂ ಓದಿ: ಹೈಕೋರ್ಟ್ ಆದೇಶದನ್ವಯ ಎಸಿಬಿ ರದ್ದು ಮಾಡಿ ಸರ್ಕಾರ ಅಧಿಕೃತ ಆದೇಶ)

Last Updated : Sep 12, 2022, 10:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.