ETV Bharat / state

ಲೋಕಾಯುಕ್ತ ದಾಳಿ: ಅಪ್ಪ, ಮಗನ ಕೋಟಿ ಕೋಟಿ ಹಣದ ತನಿಖೆ ಚುರುಕು - MLA caught in lokayukta raid

ತನಿಖೆ ತೀವ್ರಗೊಳಿಸಿದ ಲೋಕಾಯುಕ್ತ ಅಧಿಕಾರಿಗಳು - ಪ್ರಕರಣಕ್ಕೆ ಸಂಬಂಧಿಸಿದವರ ಬ್ಯಾಂಕ್​ ಖಾತೆ ಫ್ರೀಜ್​ ಮಾಡಲು ತಯಾರಿ - ಶಾಸಕರನ್ನು ಗ್ರಿಲ್​ ಮಾಡಲು ಪ್ರಶ್ನಾವಳಿ ಸಿದ್ಧತೆ.

Kn_bng_03_lokayuktha_case_upadate_7202806
ಲೋಕಾಯುಕ್ತ ದಾಳಿ: ಅಪ್ಪ, ಮಗನ ಕೋಟಿ ಕೋಟಿ ಹಣದ ತನಿಖೆ ಚುರುಕು
author img

By

Published : Mar 5, 2023, 6:13 PM IST

ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗ ಪ್ರಶಾಂತ್​ ಮಾಡಾಳ್​ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಒಂದು ಕಡೆ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಲು ತಯಾರಿ ನಡೆಸುತ್ತಿದ್ದರೆ ಇನ್ನೊಂದೆಡೆ ವಿರೂಪಾಕ್ಷಪ್ಪ ವಿಚಾರಣೆಗೆ ಪ್ರಶ್ನಾವಳಿಗಳ ಪಟ್ಟಿಯನ್ನ ಲೋಕಾಯುಕ್ತ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚನ್ನಗಿರಿ ತಾಲೂಕಿನ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಗ ಪ್ರಶಾಂತ್ ಮಾಡಾಳ್ ಕೋಟಿ ಕೋಟಿ ಹಣದ ತನಿಖೆಯನ್ನ ಲೋಕಾಯುಕ್ತ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಪ್ರಶಾಂತ್ ಮನೆಯಲ್ಲಿ ಸಿಕ್ಕ 6 ಕೋಟಿ ಹಣ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಇದೀಗ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಲು ಮುಂದಾಗಿದ್ದಾರೆ.

ಪ್ರಶಾಂತ್ ಮಾಡಾಳ್, ಶಾಸಕ ವಿರೂಪಾಕ್ಷಪ್ಪ ಹಾಗೂ ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳನ್ನ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ತನಿಖೆ ವೇಳೆ ಯಾವುದೇ ವಹಿವಾಟು ವ್ಯವಹಾರ ನಡೆಯದಂತೆ ಅಧಿಕಾರಿಗಳು ನಿಗಾ ಇಟ್ಟಿದ್ದು, ಈಗ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳ ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಬ್ಯಾಂಕ್ ಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಇನ್ನು, ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಹಾಗೂ ದಾಳಿ ನಡೆಸಿ ಎರಡು ದಿನಗಳೇ ಕಳೆದು ಹೋಗಿದೆ. ಆದರೆ ಈವರೆಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಗ್ಗೆ ಯಾವುದೇ ಮಾಹಿತಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಲ್ಲ. ಲೋಕಾಯಕ್ತ ಅಧಿಕಾರಿಗಳ ಮುಂದೆ ಶಾಸಕರು ಪ್ರತ್ಯಕ್ಷವಾದರೆ ಗ್ರಿಲ್ ಮಾಡಲು ಕೆಲವು ಪ್ರಶ್ನಾವಳಿಗಳನ್ನ ಸಿದ್ಧಪಡಿಸಿಕೊಂಡಿದ್ದಾರೆ.

ಪ್ರಶ್ನಾವಳಿಗಳ ಪಟ್ಟಿ ತಯಾರಿಸಿದ ಲೋಕಾಯುಕ್ತ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿರುವ ದಾಖಲಾತಿಗಳ ಆಧಾರದ ಮೇಲೆ 50ಕ್ಕೂ ಹೆಚ್ಚು ಪ್ರಶ್ನೆಗಳನ್ನ ಸಿದ್ದಪಡಿಸಿದ್ದಾರೆ. ಆರು ಕೋಟಿ ಹಣ, ಮೂರು ವರ್ಷದಲ್ಲಿ ಕೆಎಸ್​ಡಿಎಲ್​ ನಲ್ಲಿ ಕೊಟ್ಟ ಟೆಂಡರ್​ಗಳು ಹಾಗೂ ಕೆಎಎಸ್​ಡಿಎಲ್ ಯೂನಿಯನ್ ಶಿವಶಂಕರ್ ಮಾಡಿದ ಆರೋಪಗಳ ವಿಚಾರಣೆ ನಡೆಸಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ಸುಮಾರು 50 ಪ್ರಶ್ನೆಗಳನ್ನ ಸಿದ್ದಪಡಿಸಿರೋ ಲೋಕಾಯುಕ್ತ ಅಧಿಕಾರಿಗಳು ಮಾಡಾಳ್ ವಿರೂಪಾಕ್ಷಪ್ಪ ಪತ್ತೆಯಾದ ಕೂಡಲೇ ವಿಚಾರಣೆ ಮಾಡಲಿದ್ದಾರೆ.

ಒಟ್ಟಿನಲ್ಲಿ ನಾಪತ್ತೆಯಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಹಿಂದೆ ಬಿದ್ದಿರುವ ಲೋಕಾಯುಕ್ತ ಪೊಲೀಸರು, ಶತಾಯಗತಾಯ ಅವರನ್ನ ಪತ್ತೆ ಹಚ್ಚಿ ಕೆಎಸ್​ಡಿಎಲ್ ಟೆಂಡರ್ ವ್ಯವಹಾರಗಳನ್ನ ಬಯಲಿಗೆಳೆಯಲು ಯೋಜನೆ ರೂಪಿಸಿದ್ದಾರೆ. ಸದ್ಯ ತನಿಖೆ ಚುರುಕು ಪಡೆದುಕೊಂಡಿದ್ದು, ಶಾಸಕ ವಿರೂಪಾಕ್ಷಪ್ಪಗೆ ಲೋಕಾಯುಕ್ತ ಕಂಟಕವಾಗಿ ಪರಿಣಮಿಸುತ್ತ ಎಂಬುದನ್ನು ಕಾದು ನೋಡಬೇಕಿದೆ.

ದಾಳಿಯಲ್ಲಿ 8 ಕೋಟಿ ನಗದು ಪತ್ತೆ: ಶಾಸಕರ ಪುತ್ರನ ಕಚೇರಿ ಮತ್ತು ಮನೆ ಮೇಲಿನ ಲೋಕಾಯುಕ್ತ ದಾಳಿಯಲ್ಲಿ ಒಟ್ಟು 8 ಕೋಟಿ 12 ಲಕ್ಷದ 30 ಸಾವಿರ ನಗದು ವಶ ಪಡಿಸಿಕೊಳ್ಳಲಾಗಿತ್ತು. ಐಜಿಪಿ ಸುಬ್ರಮಣ್ಯೇಶ್ವರ ರಾವ್, ಲೋಕಾಯುಕ್ತ ಎಸ್.ಪಿ ಅಶೋಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರಿಂದ ಲಕ್ಷಾಂತರ ನಗದು, ಚಿನ್ನಾಭರಣ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.