ETV Bharat / state

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ವರ್ಗಾವಣೆ ಪತ್ರ ನೀಡಲು ಲಂಚ ಕೇಳಿದ ಪ್ರಾಚಾರ್ಯ ಬಲೆಗೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ.

ಶಾಲಾ ಪ್ರಿನ್ಸಿಪಲ್ ಲೋಕಾಯುಕ್ತ ಬಲೆಗೆ
ಶಾಲಾ ಪ್ರಿನ್ಸಿಪಲ್ ಲೋಕಾಯುಕ್ತ ಬಲೆಗೆ
author img

By

Published : May 31, 2023, 5:34 PM IST

Updated : May 31, 2023, 9:17 PM IST

ಬೆಂಗಳೂರು: ಇಂದು ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ತುಮಕೂರು, ಶಿವಮೊಗ್ಗ ಹಾಗೂ ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.

ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ದಾಳಿ ನಡೆದಿದ್ದು, ಆದಾಯದ ಮೂಲ, ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಬಗ್ಗೆ ಲೋಕಾಯುಕ್ತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ವರ್ಗಾವಣೆ ಪತ್ರ ನೀಡಲು 9 ನೇ ತರಗತಿಯ ವಿದ್ಯಾರ್ಥಿಯೊಬ್ಬನ ಪೋಷಕರಿಗೆ 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಬೆಂಗಳೂರಿನ ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯ ಪ್ರಿನ್ಸಿಪಾಲ್ ವಿ. ನಾರಾಯಣ ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಪ್ರಿನ್ಸಿಪಾಲ್ ಬಲೆಗೆ ಬಿದ್ದಿದ್ದಾರೆ. ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆ ಅನುದಾನಿತ ಪ್ರೌಢಶಾಲೆಯಾಗಿದ್ದು, ವಿದ್ಯಾರ್ಥಿಯೊಬ್ಬರ ತಾಯಿ ದಿವ್ಯಾ ಅವರು ಪ್ರಿನ್ಸಿಪಲ್ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಎಸ್‌ಪಿ ಬಸವರಾಜ ಮಗದುಮ್ ನೇತೃತ್ವದಲ್ಲಿ ಬುಧವಾರ ದಾಳಿ ನಡೆದಿದ್ದು, ಪ್ರಿನ್ಸಿಪಾಲ್ ನಾರಾಯಣ ಅವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಕಚೇರಿ ಮಾಹಿತಿ ನೀಡಿದೆ.

lokayukta-has-arrested-the-school-principal-who-demanded-bribe
ದಾಳಿ ವೇಳೆ ಜಪ್ತಿಯಾದ ವಸ್ತುಗಳು

ಬೆಂಗಳೂರಿನ ಕೆ.ಆರ್ ವೃತ್ತದಲ್ಲಿರುವ ಬೆಸ್ಕಾಂ ಅಧಿಕಾರಿ ಹೆಚ್.ಜೆ. ರಮೇಶ್ ಅವರಿಗೆ ಸೇರಿದ 10 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಇವರಿಗೆ ಸೇರಿದ ಒಟ್ಟು 5.6 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ 1 ದ್ವಿಚಕ್ರವಾಹನ, 1 ಕಾರು, ಚಿನ್ನ, ಬೆಳ್ಳಿ, ವಿಸ್ಕಿ ಬಾಟಲಿಗಳು, ಗೃಹೋಪಯೋಗಿ ಉಪಕರಣಗಳು, ವಿವಿಧ ಶೇರುಗಳು 1.4 ಕೊಟಿ ರೂ. ಮೌಲ್ಯ ಹೊಂದಿದೆ. ದೇವನಹಳ್ಳಿಯ ಹೈಟೆಕ್ ಡಿಫೆನ್ಸ್​ ಆ್ಯಂಡ್ ಏರೋಸ್ಪೇಸ್ ಪಾರ್ಕ್ ಇಂಡಸ್ಟ್ರಿಯಲ್ ಏರಿಯಾದಲ್ಲಿ 1 ನಿವೇಶನ, ದಾಬಸ್​​ಪೇಟೆಯ ಸೋಮಪುರದ 2ನೇ ಹಂತದಲ್ಲಿರುವ 0.75 ಎಕರೆ ಭೂಮಿ, ಬಸವೇಶ್ವರ ನಗರದ ಬಿಇಎಂಎಲ್ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮನೆಯ ಮೌಲ್ಯಗಳು ಸೇರಿದಂತೆ 4.20 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿ ಕಾರ್ಖಾನೆಗಳ ಉಪ ನಿರ್ದೇಶಕ ಟಿ.ವಿ. ನಾರಾಯಣಪ್ಪಗೆ ಸೇರಿದ 4 ಕಡೆಗಳಿಗೆ ದಾಳಿ ನಡೆದಿದೆ. 2 ದ್ವಿಚಕ್ರವಾಹನ, ಚಿನ್ನಾಭರಣ, ಬೆಳ್ಳಿ, ಪೀಠೋಪಕರಣ, 17 ಸಾವಿರ ರೂ. ನಗದು ಜಪ್ತಿ ಮಾಡಲಾಗಿದ್ದು, ಇದರ ಬೆಲೆ 22.50 ಲಕ್ಷ ರೂ ಎಂದು ಅಂದಾಜಿಸಲಾಗಿದೆ. 1 ನಿವೇಶನ, 3 ಮನೆ, 10 ಎಕರೆ ಕೃಷಿ ಭೂಮಿಯ ಮೊತ್ತ 2.58 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಹೆಜ್ಜಾಲ ಜ್ಯುಡಿಶಿಯಲ್ ಲೇಔಟ್‌ನಲ್ಲಿ 1 ನಿವೇಶನ, ವಿಜಯನಗರದಲ್ಲಿ 1 ಮನೆ, ಕೆಆರ್‌ಪುರದಲ್ಲಿ 2 ಮನೆ, ಕೋಲಾರದ ಮುಳಬಾಗಿಲಿನಲ್ಲಿ 10 ಎಕರೆ ಜಾಗ ಹೊಂದಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೊತೆಗೆ ಬೆಂಗಳೂರು ಉತ್ತರ ತಾಲೂಕಿನ ಕಿಟ್ಟನಹಳ್ಳಿ ಗ್ರಾಾಮ ಪಂಚಾಯತ್‌ನ ಕಾರ್ಯದರ್ಶಿ ಎಸ್.ಡಿ. ರಾಮಸ್ವಾಮಿಗೆ ಸೇರಿದ ನಿವಾಸ ಸೇರಿದಂತೆ 3 ಕಡೆಗಳಲ್ಲಿ ದಾಳಿ ನಡೆದಿದೆ. ಚಿನ್ನ, ಬೆಳ್ಳಿ, ನಿವೇಶನ ಸೇರಿದಂತೆ ಬೆಲೆ ಬಾಳುವ ವಸ್ತು ಹೊಂದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿ ಬಿಬಿಎಂಪಿ ವಲಯದ ಕಾರ್ಯನಿರ್ವಾಹಕ ಅಭಿಯಂತರ ಎನ್.ಜಿ. ಪ್ರಮೋದ್ ಕುಮಾರ್​​ಗೆ ಸೇರಿದ ನಿವಾಸದ ಮೇಲೆ ಮಂಡ್ಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮೈಸೂರಿನ ಮೂಡಾ ಚೀಫ್ ಅಕೌಂಟ್ಸ್ ಆಫೀಸರ್ ಎನ್. ಮುತ್ತುಗೆ ಸೇರಿದ 3 ಕಡೆ ಹಾಗೂ ಮೈಸೂರು ಸಿಟಿ ಕಾರ್ಪೊರೇಷನ್‌ನ ಸುಪರಿಟೆಂಡೆಂಟ್ ಇಂಜಿನಿಯರ್‌ಗೆ ಸೇರಿದ 3 ಕಡೆಗಳಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಂಜನಗೂಡಿನ ಹಿರಿಯ ಸಬ್ ರಿಜಿಸ್ಟ್ರಾಾರ್ ಎಂ.ಶಿವಶಂಕರ ಮೂರ್ತಿಗೆ ಸೇರಿದ 4 ಕಡೆ ಚಾಮರಾಜನಗರ ಲೋಕಾ ಪೊಲೀಸರು ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಇಬ್ಬರು ಇಂಜಿನಿಯರ್​ಗಳ ಮನೆ ಮೇಲೆ ದಾಳಿ: ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಭ್ರಷ್ಟ ಇಂಜಿನಿಯರ್​ಗಳಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿದ್ದರು. ತುಂಗಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಪ್ರಶಾಂತ್​ಗೆ ಸಂಬಂಧಪಟ್ಟ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ. ​ಶಿವಮೊಗ್ಗದ ಹೊಸಮನೆಯ ಕೆ.ಹೆಚ್.ಬಿ 3ನೇ ತಿರುವಿನಲ್ಲಿನ ಮನೆಯ ಮೇಲೆ ಲೋಕಾಯುಕ್ತ ದಾಳಿಯ ವೇಳೆ 3.5 ಕೆ.ಜಿ ಚಿನ್ನ, 24 ಕೆ.ಜಿ ಬೆಳ್ಳಿ, ಬರೂಬ್ಬರಿ 300 ಶೂಗಳು ಜೊತೆಗೆ 50 ವಿದೇಶಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಬೆಂಗಳೂರಿನಲ್ಲಿ ಎರಡು‌ ನಿವೇಶನಗಳು ಹಾಗು ಶೆಟ್ಟಿಹಳ್ಳಿ ಗ್ರಾಮದಲ್ಲಿ ಪ್ರಶಾಂತ್ ಹೆಸರಿನಲ್ಲಿ 8 ಎಕರೆ ಅಡಕೆ ತೋಟವಿದೆ. ಇಲ್ಲಿ ಒಂದು‌ ಫಾರಂ ಹೌಸ್ ಕೂಡ ಇದೆ. ಅಲ್ಲದೆ ಹಲವು ಶೇರ್ ಬಾಂಡ್​ಗಳು ಪತ್ತೆಯಾಗಿವೆ. ಹಾಗೂ ಪ್ರಶಾಂತ್ ಅವರ ಮನೆ ಮುಂದೆ ನಾಲ್ಕು ಕಾರುಗಳಿದ್ದು, ಎಲ್ಲವೂ ದುಬಾರಿ ಕಾರುಗಳಾಗಿವೆ. ಶಿಕಾರಿಪುರದ ಜಿಲ್ಲಾ ಪಂಚಾಯತ್ ಇಂಜಿನಿಯರ್ ಆದ ಶಂಕರ ನಾಯ್ಕ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಶಂಕರ ನಾಯ್ಕ್ ಅವರ ಶಿಕಾರಿಪುರದ ಮನೆಯಲ್ಲಿ 350 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ, 10 ಎಕರೆ ಕೃಷಿ ಭೂಮಿ ಪತ್ತೆಯಾಗಿದೆ.

ಮಂಗಳೂರು, ಉಡುಪಿಯಲ್ಲೂ ದಾಳಿ: ಉಡುಪಿಯ ಜಿಲ್ಲೆಯ ಮಣಿಪಾಲದ ಕಾರ್ಮಿಕ ಅಧಿಕಾರಿ ಬಿ.ಆರ್.ಕುಮಾರ್‌ಗೆ ಸೇರಿದ 2 ಕಡೆ ದಾಳಿ ನಡೆಸಿ ಅಘೋಷಿತ ಆಸ್ತಿಗೆ ಸಂಬಂಧಿಸಿದ ಮೌಲ್ಯಯುತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಭೂ ವಿಜ್ಞಾನಿ ಎ.ಎಂ. ನಿರಂಜನ್​ಗೆ ಸೇರಿದ 4 ಜಾಗಗಳಲ್ಲಿ ಮಂಗಳೂರು ಪೊಲೀಸರು ಶೋಧ ನಡೆಸಿದ್ದಾರೆ.

ಹಾವೇರಿ, ತುಮಕೂರಲ್ಲೂ ಶೋಧ : ರಾಣೇಬೆನ್ನೂರು ಹಾವೇರಿ ವಲಯದ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಇಂಜಿನಿಯರ್ ವಾಗೀಶ್‌ಗೆ ಸೇರಿದ 3 ಕಡೆ ಹಾವೇರಿ ಲೋಕಾಯುಕ್ತ ಪೊಲೀಸರು, ಕೊಪ್ಪಳ ಕೆಆರ್‌ಐಡಿಎಲ್‌ಮ ಇಇ ಜರಣಪ್ಪ ಎಂ.ಚಿಂಚೋಳಿಕರ್‌ಗೆ ಸೇರಿದ 4 ಕಡೆ ಕೊಪ್ಪಳ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾಾರೆ. ಮೈಸೂರಿನ ಕೈಎಡಿಬಿ ಇಇ ಸಿ.ಎನ್.ಮೂರ್ತಿಗೆ ಸೇರಿದ 3 ಕಡೆ ತುಮಕೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಉಚಿತ ಅಕ್ಕಿ ಕೊಟ್ಟರೆ ಸೋಮಾರಿಗಳಾಗ್ತಾರೆ ಎಂಬುದು ತಪ್ಪು ಹೇಳಿಕೆ: ಡಾಲಿ ಧನಂಜಯ್

Last Updated : May 31, 2023, 9:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.