ETV Bharat / state

ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಆರೋಗ್ಯಾಧಿಕಾರಿ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ - bbmp

ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಆರೋಗ್ಯಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡು ಹಲಸೂರಿನ ಕಚೇರಿಯಲ್ಲಿ ರೆಡ್ ಹ್ಯಾಂಡಾಗಿ ಲಂಚದ ಸಮೇತ ವಶಕ್ಕೆ ಪಡೆದಿದ್ದಾರೆ.

lokayukta-arrested-bbmp-health-officer-who-was-accepting-bribe
ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಆರೋಗ್ಯಾಧಿಕಾರಿ ಲೋಕಾಯುಕ್ತ ವಶಕ್ಕೆ
author img

By

Published : Apr 27, 2023, 6:19 PM IST

ಬೆಂಗಳೂರು: ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಣೆಗೆ ಗುತ್ತಿಗೆ ಪಡೆದಿದ್ದ ವ್ಯಕ್ತಿಗೆ ಬಾಕಿ ಹಣ ಬಿಡುಗಡೆಗೊಳಿಸಲು ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ವೈದ್ಯಕೀಯ ಆರೋಗ್ಯಾಧಿಕಾರಿಯನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿ.ವಿ. ರಾಮನ್ ನಗರ ವಾರ್ಡ್​ನ ಆರೋಗ್ಯಾಧಿಕಾರಿ ಶಿವೇಗೌಡ ವಿ ಎಂಬುವರನ್ನು 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ವಶಕ್ಕೆ ಪಡೆಯಲಾಗಿದೆ.

ಶ್ರೀನಿವಾಸುಲು ಎಂಬುವವರು ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಣೆಗೆ ಬಿಬಿಎಂಪಿಯಿಂದ ಗುತ್ತಿಗೆ ಪಡೆದಿದ್ದರು. ಪಾವತಿಸಬೇಕಾದ ಹಣಕ್ಕೆ ಪ್ರತಿಯಾಗಿ 80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ವೈದ್ಯಾಧಿಕಾರಿ ಶಿವೇಗೌಡ, 30 ಸಾವಿರ ಮುಂಗಡವಾಗಿ ಸ್ವೀಕರಿಸಿದ್ದರು. ಉಳಿದ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು ಹಲಸೂರಿನ ಕಚೇರಿಯಲ್ಲಿ ರೆಡ್ ಹ್ಯಾಂಡಾಗಿ ಲಂಚದ ಸಮೇತ ಆರೋಪಿತನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಜಸ್ಟ್ 25 ಸಾವಿರ‌ ರೂ. ಕೊಡಿ : ಮತದಾರರ ಡಿಟೈಲ್ಸ್ ಕೊಡ್ತೇವೆ ಎಂದಿದ್ದ ಅನಾಮಧೇಯ ಕಂಪನಿ ವಿರುದ್ಧ ಕೇಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.