ETV Bharat / state

ಲಾಕ್​ಡೌನ್​ ಭಯ: ಬೆಂಗಳೂರು ಬಿಟ್ಟು ಊರಿನತ್ತ ಮುಖ ಮಾಡಿದ ಕಾರ್ಮಿಕರು - Lockdown Effect in bengalore

ಬೆಂಗಳೂರಿನಲ್ಲಿ ಕಂಪನಿಗಳು, ಕಾರ್ಖಾನೆಗಳು ಲಾಕ್​ಡೌನ್​ಗೆ ಸಿಲುಕಿ ಬಾಗಿಲು ಮುಚ್ಚಿವೆ. ಇದರಿಂದ ಕೆಲಸವಿಲ್ಲದೆ, ಸಂಪಾದನೆ ಇಲ್ಲದೆ ಕಂಗೆಟ್ಟ ಜನ ಮನೆ ಖಾಲಿ ಮಾಡಿ ಊರುಗಳತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಡುತ್ತಿದ್ದಾರೆ.

lockdown-effect-migrant-workers-leaving-bangalore
ಬೆಂಗಳೂರು ಬಿಟ್ಟು ಊರಿನತ್ತ ಮುಖ ಮಾಡಿದ ಕಾರ್ಮಿಕರು
author img

By

Published : May 9, 2021, 7:52 PM IST

ಬೆಂಗಳೂರು: ನಾಳೆಯಿಂದ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಲಾಕ್​ಡೌನ್​ ಆಗಲಿರುವ ಕಾರಣ ಐಟಿ-ಬಿಟಿ ಕ್ಷೇತ್ರವಾದ ಮಹಾದೇವಪುರಕ್ಕೆ ಕೆಲಸವನ್ನು ಹುಡುಕಿಕೊಂಡು ಬಂದಿದ್ದ ಸಾವಿರಾರು ಕುಟುಂಬಗಳು ಮನೆ ಬಾಡಿಗೆ ಕಟ್ಟಲೂ ಆಗದೇ ಈಗ ಮತ್ತೆ ತಮ್ಮ ಊರಿನತ್ತ ಮುಖ ಮಾಡಿದ್ದಾರೆ.

ಬೆಂಗಳೂರು ಬಿಟ್ಟು ಊರಿನತ್ತ ಮುಖ ಮಾಡಿದ ಕಾರ್ಮಿಕರು

ನಾಳೆಯಿಂದ ಕರ್ನಾಟಕ ಸಂಪೂರ್ಣ ಬಂದ್ ಆಗುವುದರಿಂದ ಮತ್ತು ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಜನ ತಮ್ಮೂರಿಗೆ ತೆರಳುತ್ತಿದ್ದಾರೆ. ಮತ್ತೊಂದೆಡೆ ಕಂಪನಿಗಳು, ಕಾರ್ಖಾನೆಗಳು ಲಾಕ್​ಡೌನ್​ಗೆ ಸಿಲುಕಿ ಬಾಗಿಲು ಮುಚ್ಚಿವೆ. ಇದರಿಂದ ಕೆಲಸವಿಲ್ಲದೆ, ಸಂಪಾದನೆ ಇಲ್ಲದೆ ಕಂಗೆಟ್ಟ ಜನ ಮನೆ ಖಾಲಿ ಮಾಡಿ ಊರುಗಳತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಡುತ್ತಿದ್ದಾರೆ.

ಐಟಿ-ಬಿಟಿ ಕ್ಷೇತ್ರವಾದ ಮಹದೇವಪುರದಲ್ಲಿ ದೇಶದ ನಾನಾ ಮೂಲಗಳಿಂದ ಕೆಲಸವನ್ನು ಹುಡುಕಿಕೊಂಡು ಬಂದು ಹತ್ತಾರು ವರ್ಷಗಳಿಂದ ವಾಸವಾಗಿದ್ದರು. ಅದರಲ್ಲೂ ಹೆಚ್ಚಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯದಿಂದ ಬಂದು ನೆಲೆಸಿದ್ದರು. ಆದರೀಗ ಕೊರೊನಾ ಕಾರಣಕ್ಕೆ ಮತ್ತೆ ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಓದಿ: ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ; ಸಚಿವ ಆರ್‌ ಅಶೋಕ್ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.