ಬೆಂಗಳೂರು: ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದ ಭಾಗವಾಗಿ ರಾಜಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಅನಗತ್ಯವಾಗಿ ಓಡಾಟ ನಡೆಸುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.
ರಾಜ್ಯದಲ್ಲಿ ನಿನ್ನೆಯಿಂದ ಲಾಕ್ಡೌನ್ 3.0 ಜಾರಿಗೊಂಡಿದ್ದು, ಈ ವೇಳೆ ಅನಗತ್ಯವಾಗಿ ಓಡಾಟ ನಡೆಸಿರುವ ಅನೇಕ ವಾಹನ ಜಪ್ತಿ ಮಾಡಲಾಗಿದೆ. ಒಟ್ಟು 20 ಗಂಟೆಯಲ್ಲಿ 1,496 ವಾಹನ ಜಪ್ತಿ ಮಾಡಲಾಗಿದೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 8ರವರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಇದನ್ನೂ ಓದಿ: ಮೃತರ ಅಸ್ತಿ, ಚಿತಾಭಸ್ಮ ವಿಸರ್ಜಿಸಲು ಅನುಮತಿ ನೀಡಿ ಸರ್ಕಾರ ಆದೇಶ
ಕಾರ್ಯಾಚರಣೆ ವೇಳೆ 1,316 ದ್ವಿಚಕ್ರ ವಾಹನ, 79 ಆಟೋ, 101 ಕಾರು ಸೀಜ್ ಮಾಡಲಾಗಿದ್ದು, 63 ಜನರ ವಿರುದ್ಧ ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆಯ ಕೇಸ್ ಬುಕ್ ಮಾಡಿ ಎನ್ಡಿಎಂಎ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜೂನ್ 7ರವರೆಗೆ ಲಾಕ್ಡೌನ್ ಮುಂದೂಡಿಕೆ ಮಾಡಲಾಗಿದೆ.