ಬೆಂಗಳೂರು: ನಗರದಲ್ಲಿ ಕೊರೊನಾ ವೈರಸ್ ಜಾಗೃತಿಯ ಹೊರತಾಗಿಯೂ ಸಾರ್ವಜನಿಕರು ಮಾಸ್ಕ್ ಧರಿಸದೇ ವಾಹನ ಚಾಲನೆ ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಬಿಬಿಎಂಪಿ ಇಲಾಖೆಯ ಆರೋಗ್ಯಾಧಿಕಾರಿಗಳು, ಮಾರ್ಷಲ್ಗಳು ಮತ್ತು ಇನ್ಸ್ಪೆಕ್ಟರ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಪ್ರಕರಣದ ಸಂಖ್ಯೆ ಹಾಗೂ ದಂಡ ವಸೂಲಿ :
* ಬಾಣಸವಾಡಿ 630 ಕೇಸ್- 1,26,000 ರೂ.
* ರಾಮಮೂರ್ತಿನಗರ 162 ಕೇಸ್ - 32,400 ರೂ.
* ಹೆಣ್ಣೂರು 337 ಕೇಸ್- 67,400 ರೂ.
* ಕೆ.ಜಿ ಹಳ್ಳಿ 226 ಕೇಸ್- 4,400 ರೂ.
* ಡಿ.ಜೆ. ಹಳ್ಳಿ 178 ಕೇಸ್- 35,600 ರೂ.
* ಹಲಸೂರು 183 ಕೇಸ್- 36,600 ರೂ,ದಂಡ ವಸೂಲಿಯಾಗಿದೆ.
* ಹಾಗೆಯೇ ಬೈಯಪ್ಪನಹಳ್ಳಿ 213 ಕೇಸ್- 42,600 ರೂ.
* ಜೆ.ಬಿ ನಗರ 168 ಕೇಸ್- 33,600 ರೂ.
* ಪುಲಕೇಶಿನಗರ 358 ಕೇಸ್- 71,600 ರೂ.
* ಭಾರತಿ ನಗರ- 147ಕೇಸ್ 29,400 ರೂ.
* ಶಿವಾಜಿನಗರ 53 ಕೇಸ್ 10, 600 ರೂ.
* ಕಮರ್ಷಿಯಲ್ ಠಾಣೆ 41 ಕೇಸ್- 8200 ರೂ. ಸೇರಿದಂತೆ ಒಟ್ಟು 5,80,000 ಹಣ ವಶಪಡಿಸಿಕೊಂಡಿದ್ದಾರೆ.
ಸದ್ಯ ಸ್ವತಃ ಅಧಿಕಾರಿಗಳೇ ಖುದ್ದಾಗಿ ಫೀಲ್ಡ್ಗೆ ಇಳಿದು ಮಾಸ್ಕ್ ಧರಿಸದೆ ಇರುವವರಿಗೆ ಬಿಸಿ ಮುಟ್ಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಸರ್ಕಾರ ಕೂಡ ಕೋವಿಡ್ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು.