ಬೆಂಗಳೂರು: ಲಾಕೌಡೌನ್ ನಿಯಮ ಉಲ್ಲಂಘಿಸಿ ಸಿಲಿಕಾನ್ ಸಿಟಿಯ ಬಹುತೇಕ ಕಡೆ ಅನಗತ್ಯವಾಗಿ ರಸ್ತೆಗಿಳಿದು ಪೊಲೀಸರ ಕೈಗೆಸಿಕ್ಕಿಬಿದ್ದು, ಜಪ್ತಿಯಾದ ವಾಹನಗಳು ಇಂದಿನಿಂದ ವಾಹನ ಸವಾರರ ಕೈ ಸೇರಲಿವೆ.
ಜಪ್ತಿಗೊಳಗಾದ ಮಾಲೀಕರು ಸರಿಯಾದ ದಾಖಲೆಗಳನ್ನ ಪೊಲೀಸರಿಗೆ ನೀಡಿ, ಪೊಲೀಸರು ವಿಧಿಸಿದ ದಂಡ ಪಾವತಿಸಿ ವಾಹನ ಪಡೆಯಬಹುದು.
ವಾಹನ ಪಡೆಯುವ ನಿಯಮ ಹೀಗಿದೆ:
- ವಾಹನ ಜಪ್ತಿಗೊಳಗಾದ ಮಾಲೀಕ ತನ್ನ ವಾಹನ ಮರಳಿ ಕೊಡುವಂತೆ ಠಾಣಾಧಿಕಾರಿಗೆ ಅರ್ಜಿ ಸಲ್ಲಿಸಬೇಕು.
- ವಾಹನದ ಚಾಲನಾ ಪರವಾನಿಗೆ ಮತ್ತು ನೋಂದಣಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ನೀಡಬೇಕು.
- ಸಂಚಾರ ನಿಯಮ ಉಲ್ಲಂಘನೆಯ ಹಳೇ ದಂಡ ಇದ್ರೆ ಪಾವತಿಸಬೇಕು.
- ದ್ವಿಚಕ್ರವಾಹನಗಳಿಗೆ 500, ನಾಲ್ಕು ಚಕ್ರದ ವಾಹನಗಳಿಗೆ 1,000 ದಂಡ ಕಟ್ಟಿ ವಾಹನ ಪಡೆಯಬೇಕು.
ಸದ್ಯ ಲಾಕೌಡೌನ್ ಶುರುವಾದ ಮೊದಲ ದಿನದ ವಾಹನಗಳನ್ನ ಮೊದಲು ನೀಡಲಿದ್ದಾರೆ. ತಮ್ಮ ವಾಹನಗಳು ಸಿಗುತ್ತದೆ ಅನ್ನೋ ಖುಷಿಯಲ್ಲಿ ಜನರು ಏಕಾಏಕಿ ಬರುವ ಸಾಧ್ಯತೆ ಹಿನ್ನೆಲೆ, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕೆಲ ಕ್ರಮ ಕೈಗೊಳ್ಳಲಾಗಿದೆ. ಇನ್ಸ್ಸ್ಪೆಕ್ಟರ್ಗೆ ಅರ್ಜಿ ಸಲ್ಲಿಸಿದ ನಂತರ ಸರಥಿ ಸಾಲಿನಲ್ಲಿ ನಿಂತು ಪೊಲೀಸರಿಗೆ ದಾಖಲಾತಿಗಳನ್ನ ನೀಡಬೇಕು. ನಂತರ ಪೊಲೀಸರು ಅದನ್ನ ಪರಿಶೀಲಿಸಿ,ಅದಕ್ಕೆ ಬೇಕಾದ ದಂಡ ವಸೂಲಿ ಮಾಡಲಿದ್ದಾರೆ. ಸದ್ಯ ಮಾರ್ಚ್ 30ರಿಂದ ಇಲ್ಲಿಯವರಗೆ 47,100ಕ್ಕೂ ಹೆಚ್ಚು ವಾಹನ ಜಪ್ತಿಯಾಗಿದೆ. ಮೊದಲು ಜಪ್ತಿಯಾದ ವಾಹನಗಳನ್ನ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ನೀಡಲಿದ್ದಾರೆ.