ETV Bharat / state

ಶಿಗ್ಗಾಂವಿ ಮತೋತ್ಸಾಹ: ಫಸ್ಟ್‌ ಟೈಂ ವೋಟ್​ ಮಾಡಿದ ಯುವತಿ, ಎಲ್ಲರಿಗಿಂತ ಮೊದಲು ಬಂದು ಓಟ್‌ ಮಾಡಿದ ವೃದ್ಧ ವ್ಯಕ್ತಿ ಹೇಳಿದ್ದಿಷ್ಟು

ಶಿಗ್ಗಾಂವಿಯಲ್ಲಿ ಮತದಾನ ನಡೆಯುತ್ತಿದೆ. ಯುವ ಮತದಾರರು, ವಯೋವೃದ್ಧರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡುತ್ತಿದ್ದಾರೆ.

ಶಿಗ್ಗಾಂವಿಯಲ್ಲಿ ಮತದಾನ ಜೋರು
ಶಿಗ್ಗಾಂವಿಯಲ್ಲಿ ಮತದಾನ ಜೋರು (ETV Bharat)
author img

By ETV Bharat Karnataka Team

Published : Nov 13, 2024, 9:59 AM IST

ಹಾವೇರಿ: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬಿರುಸಿನ ಮತದಾನ ನಡೆಯುತ್ತಿದೆ. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಯುವ ಮತದಾರರು, ವಯೋವೃದ್ಧರು ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ವೋಟಿಂಗ್ ಮಾಡುತ್ತಿದ್ದಾರೆ.

ಮೊದಲ ಬಾರಿ ಮತದಾನ: ಜಾಹ್ನವಿ ಕಾಮನಹಳ್ಳಿ ಎಂಬ ಯುವತಿ ಇದೇ ಮೊದಲ ಬಾರಿ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು. ಶಿವಮೊಗ್ಗದಿಂದ ಶಿಗ್ಗಾಂವಿ ಪಟ್ಟಣಕ್ಕೆ ಆಗಮಿಸಿದ ಇವರು, ಪಟ್ಟಣದ ಮತಗಟ್ಟೆ ಸಂಖ್ಯೆ 99ರಲ್ಲಿ ತಂದೆ-ತಾಯಿ ಜೊತೆಗೆ ಮತ ಹಕ್ಕು ಚಲಾಯಿಸಿದರು.

ಫಸ್ಟ್‌ ಟೈಂ ವೋಟ್​ ಮಾಡಿದ ಯುವತಿಯ ಹೇಳಿಕೆ (ETV Bharat)

ಬಳಿಕ ಈಟಿವಿ ಭಾರತ ಜೊತೆಗೆ ಮಾತನಾಡಿದ ಜಾಹ್ನವಿ, "ಮೊದಲ ಬಾರಿ ವೋಟ್​ ಮಾಡುತ್ತಿದ್ದೇನೆ ಎಂಬ ಭಯ ಇತ್ತು. ನನ್ನ ತಂದೆ-ತಾಯಿ ಮತದಾನದ ಬಗ್ಗೆ ಹೇಳಿಕೊಟ್ಟಿದ್ದರಿಂದ ಸುಲಭ ಅನ್ನಿಸಿತು. ಓಟು ಹಾಕಲೆಂದೇ ಶಿವಮೊಗ್ಗದಿಂದ ಶಿಗ್ಗಾಂವಿ ಬಂದಿದ್ದೇನೆ. ಇದು ನನ್ನ ಮೊದಲ ಮತದಾನ. ಯುವ ಮತದಾರರು ಮನೆಯಲ್ಲಿ ಕುಳಿತುಕೊಳ್ಳದೆ ಮತದಾನ ಮಾಡಬೇಕು. ನಾವು ಪಕ್ಷ ನೋಡಿ ಮತದಾನ ಮಾಡಬಾರದು, ಅಭಿವೃದ್ಧಿ ಮಾಡುವ ವ್ಯಕ್ತಿ ನೋಡಿ ಮತ ಹಾಕಬೇಕು" ಎಂದು ಅವರು ಹೇಳಿದರು.

ವೃದ್ಧ ವ್ಯಕ್ತಿಯಿಂದ ಮೊದಲ ಮತ: ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಎಲ್ಲರಿಗಿಂತ ಮೊದಲು ವೋಟ್‌ ಹಾಕಿ ಮಾತನಾಡಿದ ತಿರುಕಪ್ಪ ಚಾಕಾಪುರ ಎಂಬ 70 ವರ್ಷದ ವೃದ್ಧ, "ಕುರುಬರ ಮೊದಲ ಮತದಾನದಿಂದ ಒಳ್ಳೆಯದಾಗುತ್ತದೆ ಎಂಬ ಮಾತಿದೆ. ಅದೇ ರೀತಿ ನಮ್ಮ ಓಣಿಯ ಹಾಲುಮತದ ಹಿರಿಯರು ಕೂಡ ಮೊದಲು ನೀನೇ ಓಟು ಹಾಕು ಎಂದು ತಿಳಿಸಿದ್ದರು. ಅದರಂತೆ ಪೂಜೆ ಮಾಡಿದ ಬಳಿಕ ನಾನೇ ಮೊದಲ ಓಟು ಹಾಕಿದೆ. ಯುವಕರು, ಯುವತಿಯರು, ಹಿರಿಯರು ಎಲ್ಲರೂ ಮತದಾನ ಮಾಡಬೇಕು. ಹಾಗಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ" ಎಂದರು.

ಶಿಗ್ಗಾಂವಿ: ಎಲ್ಲರಿಗಿಂತ ಮೊದಲು ಬಂದು ಓಟ್‌ ಮಾಡಿದ ವೃದ್ಧ ವ್ಯಕ್ತಿಯ ಪ್ರತಿಕ್ರಿಯೆ (ETV Bharat)

ಮತದಾನ ಆರಂಭಕ್ಕೂ ಮುನ್ನ ಈ ಮತಗಟ್ಟೆಯಲ್ಲಿ ತೆಂಗಿನಕಾಯಿ ಒಡೆದು, ಹೊಸ್ತಿಲಿಗೆ ಅರಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಯಿತು. ಮತದಾನಕ್ಕೆ ಮುನ್ನ ಮತಗಟ್ಟೆ ಸಿಬ್ಬಂದಿ ಅಣಕು ಮತದಾನ ನಡೆಸಿದರು.

ಅಭ್ಯರ್ಥಿಯಿಂದ ವಿಶೇಷ ಪೂಜೆ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ತಂದೆ, ಸಂಸದ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಗೆ ಮತದಾನಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ಅಶೋಕ ನಗರದ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಸವರಾಜ ಬೊಮ್ಮಾಯಿ ಹಾವೇರಿ ಗದಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಬಳಿಕ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.