ETV Bharat / state

ಸಿಎಂ ಸಿದ್ದರಾಮಯ್ಯನವರ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್‌.ಕೆ.ಅತೀಕ್‌ ನೇಮಕ - ಮುಖ್ಯಮಂತ್ರಿ ಸಿದ್ದರಾಮಯ್ಯ

L.K.Atheeq appointed additional CS to CM Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್‌.ಕೆ.ಅತೀಕ್‌ ಅವರನ್ನು ಸರ್ಕಾರ ನೇಮಿಸಿದೆ.

Additional Chief Secretary to the Chief Minister
ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್‌.ಕೆ.ಅತೀಕ್‌ ನೇಮಕ
author img

By ETV Bharat Karnataka Team

Published : Nov 28, 2023, 6:55 AM IST

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಹುದ್ದೆಗೆ ಡಾ.ರಜನೀಶ್‌ ಗೋಯೆಲ್‌ ನೇಮಕಗೊಂಡಿರುವ ಹಿನ್ನೆಲೆಯಲ್ಲಿ, ಅವರಿಂದ ತೆರವಾದ ಸಿಎಂ ಅವರ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್‌.ಕೆ.ಅತೀಕ್‌ ಅವರನ್ನು ನೇಮಿಸಲಾಗಿದೆ.

ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಪ್ರಭಾರಿ ಹೊಣೆಯನ್ನು ಎಲ್‌.ಕೆ.ಅತೀಕ್‌ ಅವರಿಗೆ ವಹಿಸಲಾಗಿದೆ. ಇದಕ್ಕೂ ಮುನ್ನ ಎಲ್.ಕೆ.ಅತೀಕ್​ ಅವರಿಗೆ ಐಎನ್ಎಸ್ ಪ್ರಸಾದ್ ನಿವೃತ್ತಿಯಿಂದ ತೆರವಾದ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜವಾಬ್ದಾರಿ ‌ನೀಡಲಾಗಿತ್ತು.

ಇತ್ತೀಚಿನ ನೇಮಕಾತಿಗಳು: ರಾಜ್ಯದಲ್ಲಿ ಜಾತಿ ಗಣತಿ ವರದಿ ಚರ್ಚೆ ನಡೆಯುತ್ತಿದ್ದು, ಇತ್ತೀಚೆಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಮರುನೇಮಕ ಮಾಡಲಾಗಿತ್ತು. ಎರಡು ತಿಂಗಳ ಅವಧಿಗೆ (2024 ಜನವರಿ 31ರವರೆಗೆ) ಆಯೋಗದ ಅಧ್ಯಕ್ಷರನ್ನಾಗಿ ಜಯಪ್ರಕಾಶ್​ ಹೆಗ್ಡೆ ಅವರನ್ನು ಮರುನೇಮಿಸಿ ಸರ್ಕಾರ ಆದೇಶಿಸಿತ್ತು.

ಅವಧಿ ವಿಸ್ತರಣೆಗೆ ಅವಕಾಶವಿಲ್ಲದ ಕಾರಣಕ್ಕೆ ಹಾಲಿ ಅಧ್ಯಕ್ಷರನ್ನೇ ಮತ್ತೆ ನೇಮಕ ಮಾಡಲಾಗಿದೆ. ಇವರೊಂದಿಗೆ ಐವರು ಸದಸ್ಯರೂ ಮರುನೇಮಕವಾಗಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅಧಿಕಾರಾವಧಿ ನ.26ಕ್ಕೆ ಮುಗಿದಿದೆ. ಸಿಎಂ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿತ್ತು.

ಜಾತಿ ಗಣತಿ ವರದಿ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಜಾತಿ ಗಣತಿ ವರದಿಯ ಮೂಲ ಪ್ರತಿ ನಾಪತ್ತೆಯಾಗಿದ್ದು, ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಳಿಕ ಈ ಬಗ್ಗೆ ಅವರು ಸ್ಪಷ್ಟನೆ ಕೊಟ್ಟಿದ್ದು, ಮೂಲ ಪ್ರತಿ ಅಂದ್ರೆ ದತ್ತಾಂಶ ಅಲ್ಲ. ಎಲ್ಲ ದತ್ತಾಂಶಗಳು ಸುರಕ್ಷಿತವಾಗಿವೆ. ಅಧ್ಯಕ್ಷರು, ಸದಸ್ಯರು ಮತ್ತು ಸೆಕ್ರೆಟರಿ ಸಹಿ ಇರುವ ದತ್ತಾಂಶ, ಹಾರ್ಡ್ ಕಾಪಿ, ಪ್ರಿಂಟೆಡ್ ಕಾಪಿಯೂ ಇದೆ ಎಂದು ಹೇಳಿದ್ದರು.

ಇದನ್ನೂ ಓದಿ: ಅಕ್ರಮ ಸಕ್ರಮ ಯೋಜನೆಯಡಿ ಜಮೀನು ಪಡೆಯಲು ಹೊಸ ಕಾರ್ಯಕ್ರಮ ರೂಪಿಸುತ್ತಿರುವ ರಾಜ್ಯ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.