ಬೆಂಗಳೂರು: ದೇಶಾದ್ಯಂತ ಇಂದಿನಿಂದ ಎಣ್ಣೆ ಖರೀದಿ ಮಾಡಲು ಅವಕಾಶ ನೀಡಲಾಗಿದ್ದು, ಇದರ ಬೆನ್ನಲ್ಲೇ ಸಿಲಿಕಾನ ಸಿಟಿ ಬೆಂಗಳೂರಿನಲ್ಲೂ ಎಣ್ಣೆ ಖರೀದಿ ಬಲು ಜೋರಾಗಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣಾ ಎದುರಿನ ಕಸ್ತೂರಬಾ ರಸ್ತೆ ಬಳಿ ಈ ಟಾನಿಕ್ ಶಾಪ್ ಎದುರಿನ ಮದ್ಯದ ಶಾಪ್ನಲ್ಲಿ ಜನರು ಸರಥಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ಮದ್ಯ ಖರೀದಿ ಮಾಡ್ತಿದ್ದು, ಈ ವೇಳೆ, ಯುವತಿಯರು ಎಣ್ಣೆ ಖರೀದಿ ಮಾಡುತ್ತಿರುವ ದೃಶ್ಯ ಕಂಡು ಬಂದವು.
ಮದ್ಯ ಖರೀದಿ ಮಾಡಲು ಬಂದಿದ್ದ ಯುವತಿಯೊಬ್ಬಳು ತಲೆ ತಿರುಗಿ ಬಿದ್ದಿರುವ ಘಟನೆ ನಡೆದಿದ್ದು, ಈ ವೇಳೆ, ವೈನ್ಶಾಪ್ ಸಿಬ್ಬಂದಿ ಆಕೆಯ ಆರೈಕೆ ಮಾಡಿದ್ದಾರೆ. ಬಿಸಿಲು ಲೆಕ್ಕಿಸದೇ ಜನರು ಕ್ಯೂನಲ್ಲಿ ನಿಂತಿರುವುದು ಸರ್ವೆ ಸಾಮಾನ್ಯವಾಗಿತ್ತು.