ETV Bharat / state

ನಾಳೆ ಮದ್ಯ ಮಾರಾಟ ಮಾರ್ಗಸೂಚಿ ಪ್ರಕಟ: ಅಬಕಾರಿ ಸಚಿವ ನಾಗೇಶ್ - Liquor sales in the green zone

ರಾಜ್ಯದ ಗ್ರೀನ್ ಝೋನ್​ನಲ್ಲಿ ಮದ್ಯ ಮಾರಾಟ ಇರುತ್ತದೆ. ಆದರೆ, ರೆಡ್ ಮತ್ತು ಆರೆಂಜ್‌ ಝೋನ್ ಗಳಲ್ಲಿ ಮದ್ಯ ಮಾರಾಟದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ನಾಳೆ ಮದ್ಯ ಮಾರಾಟ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ.

Excise Minister Nagesh
ಅಬಕಾರಿ ಸಚಿವ ನಾಗೇಶ್
author img

By

Published : May 1, 2020, 11:09 PM IST

ಬೆಂಗಳೂರು: ಕೇಂದ್ರ ಸರ್ಕಾರ ಮೇ 4 ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಹಿನ್ನೆಲೆ ರಾಜ್ಯದಲ್ಲಿ ಯಾವ ರೀತಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು ಎನ್ನುವ ಕುರಿತು ನಾಳೆ ಮದ್ಯ ಮಾರಾಟ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ.

ದೂರವಾಣಿ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ಎಲ್ಲೆಲ್ಲಿ ಮದ್ಯ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಆದರೆ, ರಾಜ್ಯದ ಗ್ರೀನ್ ಝೋನ್​ನಲ್ಲಿ ಮದ್ಯ ಮಾರಾಟ ಇರುತ್ತದೆ. ಅಲ್ಲಿ ಶೇ.100 ರಷ್ಟು ಮದ್ಯ ಮಾರಾಟ ಆರಂಭಿಸಲಾಗುತ್ತದೆ. ಆದರೆ, ರೆಡ್ ಮತ್ತು ಆರೆಂಜ್‌ ಝೋನ್ ಗಳಲ್ಲಿ ಮದ್ಯ ಮಾರಾಟದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು‌ ಸ್ಪಷ್ಟಪಡಿಸಿದ್ದಾರೆ.

ಯಾವ ಝೋನ್​​​​​​​ನಲ್ಲಿ ಮದ್ಯ ಮಾರಾಟ ಎಂದು ಕೇಂದ್ರ ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ನಾಳೆ ಮಾರ್ಗಸೂಚಿ ಬರಲಿದೆ. ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಳೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಮದ್ಯ ಮಾರಾಟದ ವೇಳೆ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಕಡ್ಡಾಯ, ಒಂದು ವೇಳೆ, ನಿಯಮ ಉಲ್ಲಂಘನೆ ಮಾಡಿದರೆ ಲಾಕ್​ಡೌನ್ ವೇಳೆ ಮದ್ಯ ಮಾರಾಟಕ್ಕೆ ನೀಡುವ ಅನುಮತಿಯನ್ನು ರದ್ದು ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.