ಬೆಂಗಳೂರು: ರಾಜ್ಯದಲ್ಲಿ ಲಿಕ್ಕರ್ ಮಾರಾಟಕ್ಕೆ ಕುತ್ತು ಬಂದಿದೆ. ಲಾಕ್ಡೌನ್ ಸಡಿಲಿಕೆ ಬಳಿಕ ರೀ ಓಪನ್ ಆದಾಗ ಬಂದ ಪ್ರತಿಕ್ರಿಯೆ ಈಗಿಲ್ಲ ಎನ್ನುತ್ತಿದ್ದಾರೆ ಬಾರ್ ಮಾಲೀಕರು.
ಬಹಳಷ್ಟು ಮಂದಿ ತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಿರುವುದೇ ಮದ್ಯ ಮಾರಾಟ ಕಡಿಮೆಯಾಗಲು ಕಾರಣ ಎನ್ನಲಾಗಿದೆ. ಈಗಾಗಲೇ ಲಕ್ಷಾಂತರ ಜನ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಸೇರಿದಂತೆ ಹತ್ತಾರು ವೃತ್ತಿಯಲ್ಲಿ ತೊಡಗಿದ್ದವರು ನಗರ ಬಿಟ್ಟು ತೆರಳಿದ್ದಾರೆ. ಕಾರ್ಮಿಕರು ಇದ್ದಾಗ ಮದ್ಯ ಮಾರಾಟ ಸ್ವಲ್ಪ ಮಟ್ಟಿಗೆ ಜೋರಾಗಿತ್ತು. ಆದರೀಗ ಮದ್ಯ ಮಾರಾಟ ಇಳಿಮುಖವಾಗಿದೆ.
ಮೇ 5- 4.45 ಲಕ್ಷ ಲೀಟರ್ IML, 0.90 ಲಕ್ಷ ಲೀಟರ್ ಬಿಯರ್ ಮಾರಾಟ.
ಮೇ 6- 4.60 ಲಕ್ಷ ಲೀಟರ್ IML, 0.90 ಲಕ್ಷ ಲೀಟರ್ ಬಿಯರ್ ಮಾರಾಟ.
ಮೇ 7- 3.26 ಲಕ್ಷ ಲೀಟರ್ IML, 0.77 ಲಕ್ಷ ಲೀಟರ್ ಬಿಯರ್ ಮಾರಾಟ.
ಮೇ 8- 3.04 ಲಕ್ಷ ಲೀಟರ್ IML, 0.96 ಲಕ್ಷ ಲೀಟರ್ ಬಿಯರ್ ಮಾರಾಟ.
ಮೇ 27- 1.59 ಲಕ್ಷ ಲೀಟರ್ IML, 0.51 ಲಕ್ಷ ಲೀಟರ್ ಬಿಯರ್ ಮಾರಾಟ.
ಮೇ 28- 1.30 ಲಕ್ಷ ಲೀಟರ್ IML, 0.47 ಲಕ್ಷ ಲೀಟರ್ ಬಿಯರ್ ಮಾರಾಟ.
ಮೇ 29- 1.50 ಲಕ್ಷ ಲೀಟರ್ IML, 0.61 ಲಕ್ಷ ಲೀಟರ್ ಬಿಯರ್ ಮಾರಾಟ.
ಮೇ 30- 1.67 ಲಕ್ಷ ಲೀಟರ್ IML, 0.67 ಲಕ್ಷ ಲೀಟರ್ ಬಿಯರ್ ಮಾರಾಟ.
ಮೇ ತಿಂಗಳಾಂತ್ಯಕ್ಕೆ 44.46 ಲಕ್ಷ ಲೀಟರ್ IML ಮಾರಾಟ, 12.29 ಲಕ್ಷ ಲೀಟರ್ ಬಿಯರ್ ಮಾರಾಟ.
ಒಟ್ಟು ಮಾರಾಟದ ಮೌಲ್ಯ 2,146 ಕೋಟಿ ರೂ.
ಅದರಲ್ಲಿ ಸರ್ಕಾರಕ್ಕೆ 1,387 ಕೋಟಿ ರೂ. ವರಮಾನವಾಗಿದೆ.
ಸದ್ಯ ಬಾರ್ ಮಾಲೀಕರು ಹೇಳುವ ಪ್ರಕಾರ ವ್ಯಾಪಾರ ಕುಸಿತ ಕಂಡಿದೆ. ಮೊದಲಿನಷ್ಟು ಪ್ರತಿಕ್ರಿಯೆ ಇಲ್ಲ, ಜನರು ಬರುತ್ತಿಲ್ಲ ಎನ್ನುತ್ತಿದ್ದಾರೆ.