ETV Bharat / state

'ಹಿರಿಯ ಪತ್ರಕರ್ತ ದಿನೇಶ್​ ಅಮಿನ್​ ಮಟ್ಟುಗೆ ಗುಂಡಿಕ್ಕುವ ಜೀವ ಬೆದರಿಕೆ' - CAA

ಮುಸ್ಲಿಂ ಮತ್ತು ಬಿಲ್ಲವ ಸಮಾಜದ ಐಕ್ಯತಾ ಸಮಾವೇಶಕ್ಕೆ ನನಗೆ ಆಹ್ವಾನ ನೀಡಲಾಗಿತ್ತು. ಓರ್ವ ಪುಣೆಯಿಂದ ನನಗೆ ಕರೆಮಾಡಿ ತುಳು ಭಾಷೆಯಲ್ಲಿ 'ನಿನಗೆ ಗುಂಡು ಹಾರಿಸುತ್ತೇನೆ' ಎಂದು ಜೀವ ಬೆದರಿಕೆ ಹಾಕಿದ್ದಾನೆ. ನಾನು ಈ ಬಗ್ಗೆ ಇನ್ನು ಪೊಲೀಸ್ ಠಾಣೆಯ ಮೆಟ್ಟಿಲು ಸಹ ಏರಿಲ್ಲ. ಪೇಜಾವರ ಶ್ರೀಗಳು ಹಿಂದೂ- ಮುಸ್ಲಿಂ ಭಾಯಿ ಭಾಯಿ ಅಂದಾಗ ಯಾರು ಈ ಬಗ್ಗೆ ಮಾತನಾಡುವುದಿಲ್ಲ. ಅದೇ ಸಾಮಾನ್ಯರು ಮುಸ್ಲಿಂ ಹಾಗೂ ಬಿಲ್ಲವರು ಹೊಂದಾಣಿಕೆ ಮಾಡಿಕೊಂಡರೆ ಅವರಿಗೆ ಸಹಿಸಲು ಆಗುವುದಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್​ ಅಮಿನ್ ಮಟ್ಟು ಕಿಡಿಕಾರಿದರು.

Dinesh Amin Mattu
ದಿನೇಶ್​ ಅಮಿನ್​ ಮಟ್ಟು
author img

By

Published : Jan 9, 2020, 5:40 AM IST

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್​ ಅಮಿನ್ ಮಟ್ಟು ಅವರು, 'ತುಳು ಸಮುದಾಯದ ಮುಖಂಡರೊಬ್ಬರು ಕರೆ ಮಾಡಿ ತಮಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದು ಆರೋಪಿಸಿದರು.

ಮುಸ್ಲಿಂ ಮತ್ತು ಬಿಲ್ಲವ ಸಮಾಜದ ಐಕ್ಯತಾ ಸಮಾವೇಶಕ್ಕೆ ನನಗೆ ಆಹ್ವಾನ ನೀಡಲಾಗಿತ್ತು. ಓರ್ವ ಪುಣೆಯಿಂದ ನನಗೆ ಕರೆಮಾಡಿ ತುಳು ಭಾಷೆಯಲ್ಲಿ 'ನಿನಗೆ ಗುಂಡು ಹಾರಿಸುತ್ತೇನೆ' ಎಂದು ಜೀವ ಬೆದರಿಕೆ ಹಾಕಿದ್ದಾನೆ. ನಾನು ಈ ಬಗ್ಗೆ ಇನ್ನು ಪೊಲೀಸ್ ಠಾಣೆಯ ಮೆಟ್ಟಿಲು ಸಹ ಏರಿಲ್ಲ. ಪೇಜಾವರ ಶ್ರೀಗಳು ಹಿಂದೂ- ಮುಸ್ಲಿಂ ಭಾಯಿ ಭಾಯಿ ಅಂದಾಗ ಯಾರು ಈ ಬಗ್ಗೆ ಮಾತನಾಡುವುದಿಲ್ಲ. ಅದೇ ಸಾಮಾನ್ಯರು ಮುಸ್ಲಿಂ ಹಾಗೂ ಬಿಲ್ಲವರು ಹೊಂದಾಣಿಕೆ ಮಾಡಿಕೊಂಡರೆ ಅವರಿಗೆ ಸಹಿಸಲು ಆಗುವುದಿಲ್ಲ ಎಂದು ಕಿಡಿಕಾರಿದರು.

ಕಾರ್ಯಕಗ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್​ ಅಮಿನ್​ ಮಟ್ಟು

ಇದುವರೆಗೂ ನಾನು ಸಾರ್ವಜನಿಕವಾಗಿ ಸಿಎಎ, ಎನ್ಆರ್​ಸಿ ಹಾಗೂ ಎನ್ಆರ್​ಪಿ ಬಗ್ಗೆ ಏನೂ ಮಾತನಾಡಿಲ್ಲ. ನನಗೆ ಆ ಬಗ್ಗೆ ಅವಸರವೂ ಇಲ್ಲ. ನನ್ನ ಪ್ರಕಾರ ಸಿಎಎ ಹಾಗೂ ಎನ್ಆರ್​ಸಿ ಅನುಷ್ಠಾನಕ್ಕೆ ಇನ್ನು 40 ವರ್ಷಗಳು ಕಳೆದರೂ ಆಗುವುದಿಲ್ಲ. ಒಂದುಕಾಲು ಕೋಟಿ ಅಧಿಕಾರಿಗಳು ಇದ್ದಾಗ ಮಾತ್ರ ಸಿಎಎ ಅಂಕಿಅಂಶಗಳು ಸಂಗ್ರಹಿಸಲು ಸಾಧ್ಯ. ಅಸ್ಸೊಂನಲ್ಲಿ ಸಾವಿರಕ್ಕೂ ಅಧಿಕ ಕೋಟಿ ವೆಚ್ಚವಾದರೂ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಇಡೀ ದೇಶಾದ್ಯಂತ ಅನುಷ್ಠಾನ ತರಲು ಸಾಧ್ಯವಿಲ್ಲ ಎಂದರು.

ಸಮಾವೇಶ ಹಾಗೂ ಪ್ರತಿಭಟನೆಗಳು ನಡೆಯುತ್ತಿದರೂ ಹಳ್ಳಿಗಳಲ್ಲಿ ಈ ಬಗ್ಗೆ ಇನ್ನೂ ಅರಿವು ಬಂದಿಲ್ಲ. ಹಳ್ಳಿಗಳಿಗೆ ಹೋಗಿ ದಾಖಲೆ ಕೇಳಿದಾಗ ಬೆಂಕಿ ಬೀಳುತ್ತದೆ. ನಮ್ಮ ಎದುರಿಗಿರುವ ಬಹುದೊಡ್ಡ ಸವಾಲು ಹಿಂದೂ ಮತ್ತು ಮುಸ್ಲಿಮರ ಐಕ್ಯತೆ. ಇದನ್ನು ಒಡೆಯುವುದೆ ಅವರ ಮುಖ್ಯ ಉದ್ದೇಶವಾಗಿದೆ ಎಂದರು.

Intro:Amin mattuBody:ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಂತಹ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಮ್ಮಿನ್ ಮಟ್ಟುರವರು ಬಿಲ್ಲವ ಸಮಾಜದ ಒಬ್ಬ ಮುಖಂಡ ತಮಗೆ ನೇರವಾಗಿ ಜೀವಬೆದರಿಕೆ ಹಾಕಿದನ್ನು ತಿಳಿಸಿದರು.

ಇದುವರೆಗೂ ನಾನು ಸಾರ್ವಜನಿಕವಾಗಿ ನಾನು ಸಿಎಎ , ಎನ್ಆರ್ಸಿ, ಎನ್ಆರ್ಪಿ ಬಗ್ಗೆ ಮಾತನಾಡಿಲ್ಲ,ನನಗೆ ಅಷ್ಟು ಅವಸರವೂ ಇಲ್ಲ,ನನ್ನ ಪ್ರಕಾರ ಸಿಎಎ ಹಾಗೂ ಎನ್ಆರ್ಸಿಯನ್ನಾ ಅನುಷ್ಠಾನಕ್ಕೆ ತರಲು ಇನ್ನು 40 ವರ್ಷವಾದ್ರು ಆಗಲ್ಲ, ಯಾಕೆಂದರೆ
ಒಂದುಕಾಲು ಕೋಟಿ ಅಧಿಕಾರಿಗಳು ಇದ್ದಾಗ ಮಾತ್ರ ಸಿಎಎ ಅಂಕಿಅಂಶ ಮಾಡಲು ಸಾಧ್ಯ, ಅಸ್ಸಾಂನಲ್ಲಿ ಸಾವಿರಕ್ಕೂ ಅಧಿಕ ಕೋಟಿ ವೆಚ್ಚವಾದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಇಡೀ ದೇಶದಲ್ಲಿ ಇದು ಅನುಷ್ಠಾನವಾಗಲಿ ಸಾಧ್ಯವಿಲ್ಲ.

ರ್ಯಾಲಿ ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ರು ಹಳ್ಳಿಗಳಲ್ಲಿ ಇವುಗಳ ಬಗ್ಗೆ ಅರಿವು ಬಂದಿಲ್ಲ,ಅದೇ ಹಳ್ಳಿಗಳಿಗೆ ಬಂದು ದಾಖಲೆ ಕೇಳಿದಾಗ ಬೆಂಕಿ ಬೀಳುತ್ತೆ,ನಮ್ಮ ಎದುರಿಗಿರುವ ಬಹುದೊಡ್ಡ ಸವಾಲು ಹಿಂದೂ ಮತ್ತು ಮುಸ್ಲಿಂಮರ ಐಕ್ಯಮತ,ಇದನ್ನು ಒಡೆಯುವುದೆ ಅವರ ಮುಖ್ಯ ಉದ್ದೇಶವಾಗಿದೆ, ಮುಸ್ಲಿಂ ಮತ್ತು ಬಿಲ್ಲವ ಸಮಾಜದ ಐಕ್ಯತಾ ಸಮಾವೇಶಕ್ಕೆ ನನಗೆ ಆಹ್ವಾನವಿತ್ತು, ಇದನ್ನು ಅರಿತು ಪುಣೆಯಿಂದ ನನಗೆ ಪೋನ್ ಮಾಡಿ ತುಳುನಲ್ಲಿ ಮಾತನಾಡಿ,ನಿನಗೆ ಗುಂಡು ಹರಿಸುತ್ತೇನೆ ಅಂತಾ ನನಗೆ ಬೆದರಿಕೆ ಹಾಕುತ್ತಾನೆ, ನಾನು ಇನ್ನು ಪೊಲೀಸ್ ಠಾಣೆಯ ಮೆಟ್ಟಿಲು ಸಹ ಏರಿಲ್ಲ,ಪೇಜಾವರ ಶ್ರಿಗಳು ಮುಸ್ಲಿಂ ಮತ್ತು ಹಿಂದೂಗಳು ಬಾಯಿ ಬಾಯಿ ಅಂದಾಗ ಯಾರು ಮಾತನಾಡುವುದಿಲ್ಲ,ಅದೇ ಸಾಮಾನ್ಯ ಮುಸ್ಲಿಂ ಹಾಗೂ ಬಿಲ್ಲವರು ಹೊಂದಾಣಿಕೆ ಮಾಡಿಕೊಂಡ್ರೆ ಅವರಿಗೆ ಆಗುವುದಿಲ್ಲ.

Conclusion:Video from mojo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.