ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿಗೆ ಪಕ್ಷ ಮತ್ತು ಸಿದ್ಧಾಂತದ ಬಗ್ಗೆ ಪ್ರಶ್ನಿಸಿದ್ದಕ್ಕೆ ಬೆಂಬಲಿಗರಿಂದ ಜೀವ ಬೆದರಿಕೆ ಬಂದಿದೆ ಎಂದು ಯುವಕನೋರ್ವ ಕಮಿಷನರ್ ಕಚೇರಿಗೆ ದೂರು ಸಲ್ಲಿಸಿದ್ದಾನೆ.
ಚನ್ನಪಟ್ಟಣದ ನಿವಾಸಿ ಲಕ್ಷ್ಮಿಕಾಂತ್ ದೂರು ನೀಡಿದ ಯುವಕ. ಈತ ಇದೇ ಮಾರ್ಚ್ 16ರಂದು ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಸಿದ್ಧಾಂತದ ಬಗ್ಗೆ ಪ್ರಶ್ನಿಸಿ, ರೈತರ ಪರವಾಗಿ ನಿಲ್ಲಿ, ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಿ ಎಂದು ಹೇಳಿದ್ದ.
ಅಲ್ಲದೇ ನಿಖಿಲ್ ಕುಮಾರಸ್ವಾಮಿಗೆ ರೈತರ ಬಗ್ಗೆ ಏನೂ ಗೊತ್ತಿಲ್ಲ ಎಂದು ತಾಕೀತು ಮಾಡಿದ್ದ. ಈ ಹಿನ್ನೆಲೆ ಜೀವ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಲಕ್ಷ್ಮಿಕಾಂತ್ ದೂರು ಸಲ್ಲಿಸಿದ್ದಾನೆ.
ಈ ಕುರಿತು ಮಾತನಾಡಿದ ಯುವಕ ಲಕ್ಷ್ಮಿಕಾಂತ್, ಶಿವುಸಾಗರ್ ಎಂಬಾತ ಜೀವ ಬೆದರಿಕೆ ಹಾಕಿದ್ದಾನೆ. ಕುಮಾರಸ್ವಾಮಿ ಹಾಗೂ ಅವರ ಆಪ್ತ ಹಾಪ್ಕಾಮ್ ದೇವರಾಜ್ ಬಗ್ಗೆ ಮಾತನಾಡ ಬೇಡ ಎಂದು ಧಮ್ಕಿ ಹಾಕಿದ್ದಾನೆ. ತಪ್ಪು ಮಾಡಿದವರ ಬಗ್ಗೆ ಧ್ವನಿ ಎತ್ತಿದ್ದೇ ತಪ್ಪಾ? ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವಕ ಮನವಿ ಮಾಡಿದ್ದಾನೆ.
ಇದನ್ನೂ ಓದಿ ..ಸರ್ಕಾರ ಬೀಳಿಸೋದಕ್ಕೆ ಸಿ.ಪಿ ಯೋಗೇಶ್ವರ್ 9ಕೋಟಿ ಸಾಲ ಮಾಡಿದ್ಯಾಕೆ?: ಸಿದ್ಧರಾಮಯ್ಯ ಪ್ರಶ್ನೆ