ಬೆಂಗಳೂರು: ಮಂಗಳವಾರ ಸಂಜೆ ಸರ್ಕಾರ ವಲಸೆ ಕಾರ್ಮಿಕರ ರೈಲು ರದ್ದು ಮಾಡಿದ್ದು ಸಂವಿಧಾನದ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಿದೆ ಎಂದು 500ಕ್ಕೂ ಹೆಚ್ಚು ಕಾರ್ಮಿಕ ಪರ ಸಂಘಗಳು ಮುಖ್ಯಮಂತ್ರಿಗೆ ಪತ್ರ ಬರೆದಿವೆ.
ಸಂವಿಧಾನದ ಆರ್ಟಿಕಲ್ 19 1 (ಡಿ) ಹಾಗೂ ಆರ್ಟಿಕಲ್ 23 ಉಲ್ಲಂಘನೆಯ ಕ್ರಮವಾಗಿದೆ. ಜೊತೆಗೆ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಶೇ. 64 ವಲಸೆ ಕಾರ್ಮಿಕರ ಬಳಿ 100 ರೂಪಾಯಿಗಿಂತ ಕಡಿಮೆ ಹಣವಿದೆ. 6% ಕಾರ್ಮಿಕರು ಮಾತ್ರ ಲಾಕ್ಡೌನ್ ಸಮಯದಲ್ಲಿ ಪೂರ್ಣ ವೇತನ ಸಿಕ್ಕಿದೆ ಎಂದು ವಿವರಿಸಲಾಗಿದೆ.
ಇದೆ ಪತ್ರದಲ್ಲಿ ಸರ್ಕಾರ ವಲಸೆ ಕಾರ್ಮಿಕರನ್ನು ಸ್ವಂತ ಊರಿಗೆ ಹೋಗುವವರನ್ನು ಗುರುತಿಸಿ ಕೂಡಲೇ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು ಎಂದು 500ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಕಾರ್ಮಿಕ ಪರ ಹೋರಾಟಗಾರರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.