ಬೆಂಗಳೂರು: ರಾಜ್ಯದಲ್ಲಿನ ಹಲವು ಭಾಗಗಳಲ್ಲಿ ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಕ್ಷೇತ್ರದ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 25 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ಕ್ಷೇತ್ರದ ಬೆಳ್ಳಂದೂರು ವಾರ್ಡ್ ಹಾಗೂ ಕೊಡತಿ, ಹಾಲನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅರವಿಂದ ಲಿಂಬಾವಳಿ, ಚಲ್ಲಘಟ್ಟ ಗ್ರಾಮದಲ್ಲಿ BWSSB ಕಾಮಗಾರಿ ಪರಿವೀಕ್ಷಣೆ ನಡೆಸಿ ಹರಳೂರು ಜಂಕ್ಷನ್ನಲ್ಲಿ ಸುಮಾರು 20 ಕೋಟಿ ರೂ.ಗಳ ವೆಚ್ಚದಲ್ಲಿ ಅಂಡರ್ ಪಾಸ್ ಕಾಮಗಾರಿಗೆ ಚಾಲನೆ ನೀಡಲಾಯಿತು ಎಂದರು.
ಹಾಲನಾಯಕನಹಳ್ಳಿ ಕಾಲೋನಿ, ಕೋದಂಡರಾಮ ನಗರ ಹಾಗೂ ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡತಿ ಕಾಲೋನಿ, ಕೊಡತಿ, ಕೊಡತಿ ಗೇಟ್, ಸೂಲಿಕುಂಟೆ, ಮುಳ್ಳೂರು, ವಾಲೆಪುರ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ, ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಯಿತು ಎಂದರು.