ETV Bharat / state

ಪುರಾತತ್ವ ಇಲಾಖೆಯನ್ನು ಕನ್ನಡ, ಸಂಸ್ಕೃತಿ ಇಲಾಖೆಗೆ ಸೇರಿಸುವ ಕುರಿತು ಅಗತ್ಯ ಕ್ರಮ: ಸಚಿವ ಸುನೀಲ್ ಕುಮಾರ್

ಪ್ರಾಚ್ಯವಸ್ತು ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ಸೇರಿಸಬೇಕು ಎನ್ನುವ ಕುರಿತು ಸಿಎಂ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ
author img

By

Published : Sep 13, 2021, 3:48 PM IST

Updated : Sep 13, 2021, 5:18 PM IST

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಪುರಾತತ್ವ ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ ಕೋಟೆ ಕೊತ್ತಲಗಳು, ಪಾಳುಬಿದ್ದಿರುವ, ನಿರ್ವಹಣೆ ಇಲ್ಲದ ಸೊರಗಿರುವ ಅರಮನೆಗಳ ಪುನರುಜ್ಜೀವನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ, ವಿವಿಗಳಲ್ಲಿ ಕನ್ನಡ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕೇವಲ 2 ಸಾವಿರ ರೂ ಕೊಡಲಾತ್ತಿದೆ, ಪುರಾತತ್ವ ಇಲಾಖೆಯನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿಸಲಾಗಿದೆ, ಇದನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ಸೇರಿಸಬೇಕು. ಪ್ರವಾಸೋದ್ಯಮ ಇಲಾಖೆಯಲ್ಲಿ ಇದ್ದಲ್ಲಿ ಏನೂ ಉಪಯೋಗವಿಲ್ಲ. ಅದೇ ರೀತಿ ಪುರಾತತ್ವ ಇಲಾಖೆಯಡಿ ಕೋಟೆ ಕೊತ್ತಲಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ, ಮರಗಿಡ ಬೆಳೆದಿವೆ, ಅಲ್ಲದೆ ಪಾಳುಬಿದ್ದ ಅರಮನೆ ಕಟ್ಟುವ ಕೆಲಸವಾಗಬೇಕು ಎಂದರು.

ಇದಕ್ಕೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ಕನ್ನಡ ಸಾಹಿತ್ಯ ಉಳಿಸಲು, ಬೆಳೆಸಲು ಬೇಕಾದ ಎಲ್ಲ ಕೆಲಸ ನಮ್ಮ ಸರ್ಕಾರ ಮಾಡಿತ್ತಿದೆ. 22 ವಿವಿಗಳಲ್ಲಿ ಅಧ್ಯಯನ ಮಾಡುತ್ತಿರುವ 8 ರಾಜ್ಯಗಳ ಅನ್ಯ ಭಾಷಿಕ ವಿದ್ಯಾರ್ಥಿಗಳಿಗೆ ವಿದ್ಯಾವೇತನ ನೀಡಲಾಗುತ್ತಿದೆ. ಕೊರೊನಾ ವೇಳೆ ಎಲ್ಲಾ ಚಟುವಟಿಕೆ ಸ್ಥಗಿತವಾಗಿತ್ತು. ಆದರೆ ಕನ್ನಡ ಪ್ರಾಧಿಕಾರದಿಂದ ಆನ್ ಲೈನ್ ಮುಖಾಂತರ 188 ಕಾರ್ಯಕ್ರಮವನ್ನು ಕನ್ನಡಪರವಾಗಿ ಮಾಡಿದ್ದೇವೆ ಎಂದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಪ್ರಾಚ್ಯ ವಸ್ತು ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ಸೇರಿಸಬೇಕು ಎನ್ನುವ ಕುರಿತು ಸಿಎಂ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಕೋಟೆ ಕೊತ್ತಲಗಳನ್ನು, ಅರಮನೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿ: ನಮ್ಮ ಎಲ್ಲಾ ಸರ್ಕಾರಿ ಐಟಿಐ, ಪಾಲಿಟೆಕ್ನಿಕ್, ಪದವಿ ಕಾಲೇಜುಗಳಲ್ಲಿ ಬೇಡಿಕೆಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ಕೊಡುವ ಕೆಲಸ ಮಾಡಲಾಗುತ್ತದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಕಳೆದ ಎರಡು ವರ್ಷ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ್, ನಾವು ಸ್ಕಿಲ್ ಕನೆಕ್ಟ್ ಪೋರ್ಟಲ್ ಆರಂಭಿಸಿದ್ದೇವೆ, ಉದ್ದಿಮೆಗಳು ಆರಂಭಗೊಂಡಾಗ ಪೋರ್ಟ್‌ಲ್‌ನಲ್ಲಿ ನೋಂದಾಯಿಸಬೇಕು. ಅವರ ಅಗತ್ಯಕ್ಕೆ ತಕ್ಕ ಕೌಶಲ್ಯ ತರಬೇತಿ ನೀಡುವ ಕೆಲಸವನ್ನು ನಾವು ಮಾಡಲಿದ್ದೇದೆ, ಕೊರೊನಾ ಕಾರಣಕ್ಕೆ ತರಬೇತಿ ವಿಳಂಬವಾಗಿದೆ. ನಮ್ಮ ಎಲ್ಲಾ ಕಾಲೇಜುಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ಕೊಡುವ ಕೆಲಸ ಮಾಡಲಾಗುತ್ತದೆ. 150 ಐಟಿಐ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಮೇಲದರ್ಜೆಗೇರಿಸಲಾಗಿದೆ. ಕೆಜಿಟಿಟಿಐ ನಲ್ಲೂ ಬಹಳ ಪ್ರಸ್ತುತ ತರಬೇತಿ ನೀಡಲಾಗುತ್ತಿದೆ, ಪಾಲಿಟೆಕ್ನಿಕ್ ನಲ್ಲಿಯೂ ಉತ್ತಮ ತರಬೇತಿ ನೀಡಲಾಗುತ್ತಿದೆ. ನಮ್ಮ ಸರ್ಕಾರಿ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಅನುಮತಿ ಪಡೆಯದೆ ಸಚಿವರು ಗೈರಾಗುವಂತಿಲ್ಲ: ಕಲಾಪಕ್ಕೆ ಸಚಿವ ಆನಂದ್ ಸಿಂಗ್ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸದನಕ್ಕೆ ಹೇಳದೆ ಕೇಳದೆ ಸಚಿವರು ಗೈರಾಗುವಂತಿಲ್ಲ, ನನ್ನ ಅನುಮತಿ ಪಡೆಯಲೇಬೇಕು ಎಂದು ಸಭಾ ನಾಯಕ ಕೋಟಾಶ್ರೀನಿವಾಸ ಪೂಜಾರಿ ಅವರಿಗೆ ಸೂಚಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ, ಸರ್ಕಾರದವರು ಸ್ವಚ್ಛ ಗಾಳಿಗೂ ಕಾರ್ಯಕ್ರಮ ಮಾಡಿದ್ದಾರೆ. ಕೈಗಾರಿಕೆಗಳಿಂದ ಮಾಲಿನ್ಯ ಉಂಟಾಗುತ್ತಿದೆ, ಆದರೆ ನೀಡಿರುವ ಉತ್ತರ ಅರ್ಥವಾಗುತ್ತಿಲ್ಲ, ಈ ಕಾರ್ಯಕ್ರಮ, ಅಂಕಿ ಅಂಶದ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಹಣ ಬಳಕೆಯಾಗಿದೆ ಆದರೆ ಕೆಲಸಗಳು ಆಗಿಲ್ಲ, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಇದಕ್ಕೆ ಸಚಿವ ಆನಂದ್ ಸಿಂಗ್ ಪರವಾಗಿ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಸ್ವಚ್ಚ ಗಾಳಿ ಸೇವಿಸುವ ಹಕ್ಕನ್ನು ನೀಡಲು ರಾಜ್ಯದ ಆಯ್ದ ನಗರಗಳನ್ನು ಗುರುತಿಸಲಾಗಿದೆ. ದೂಳಿನ ಪ್ರಮಾಣ ಕಡಿಮೆ ಮಾಡುವುದು, ಹೊಗೆ ರಹಿತ ವಾತಾವರಣ ನಿರ್ಮಾಣ, ಕಟ್ಟಡ ತ್ಯಾಜ್ಯ ನಿರ್ವಹಣೆ ಮೂಲಕ ದೂಳು ಕಡಿಮೆ ಮಾಡುವುದು, ರಸ್ತೆ ಪಕ್ಕ ಗಿಡ ನೆಡುವುದು, ನೀರಿನ ಸಿಂಪಡಣೆ ಸೇರಿ ಧೂಳು ಕಡಿಮೆಗೆ ಯೋಜನೆ ರೂಪಿಸಲಾಗಿದೆ. ಧೂಳು ರಹಿತ, ಪರಿಸರ ಮಾಲಿನ್ಯ ಕಡಿಮೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ನೀವು ಉದ್ಯೋಗ ಕೊಡೋರಲ್ಲ, ಪಕೋಡಾ ಮಾರಿ ಎಂದವರಲ್ಲವೇ?

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಬೆಂಗಳೂರನ್ನು ಬೇರೆ ನಗರಕ್ಕೆ ಹೋಲಿಸಬೇಡಿ, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು, ಮತ್ತಷ್ಟ ಉದ್ಯೋಗ ಸಿಗುವ ಕಾರ್ಯಕ್ರಮ ಮಾಡಲಿದ್ದೇವೆ, ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವ ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು

ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಉದ್ಯೋಗ ಸೃಷ್ಟಿಯಲ್ಲಿ ಹೈದರಾಬಾದ್ ಶೇ.13, ಪೂನಾ ಶೇ.13 ವೃದ್ದಿಯಾಗಿದ್ದರೆ ಬೆಂಗಳೂರು ಮಾತ್ರ ಶೇ.4 ಪರ್ಸೆಂಟ್ ವೃದ್ಧಿಯಾಗಿದೆ. ಬೆಂಗಳೂರು ಕಡಿಮೆ ಆಗಿದೆ ಇದಕ್ಕೆ ಕಾರಣವೇನು ಎನ್ನು ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ್, ಕೋವಿಡ್ ಕಾರಣದಿಂದ ತರಬೇತಿ ಕೊಡಲು ಅಡೆತಡೆ ಆಗಿದೆ.

ಎಷ್ಟು ಪರ್ಸೆಂಟ್ ಉದ್ಯೋಗ ನಿರ್ಮಾಣ ಆಗುತ್ತಿದೆ ಎಂದು ಬೇರೆ ಬೇರೆ ಸಂಸ್ಥೆಗಳ ರೆಫರೆನ್ಸ್ ಮೇಲೆ ಹೇಳಿದ್ದಾರೆ. ಆದರೆ ಇಎಸ್ಐ ಪಿಎಫ್ ಅಂಕಿ ಅಂಶ ನೋಡಿದರೆ ಗೊತ್ತಾಗಲಿದೆ, ಬೆಂಗಳೂರಿನಲ್ಲಿ ಉದ್ಯೋಗ ಹೆಚ್ಚಿಸಬೇಕು ಎನ್ನುವುದು ನಮ್ಮ ಅಭಿಪ್ರಾಯ ಆಗಿದೆ, ಎಲ್ಲ ವಲಯದಲ್ಲೂ ಬೆಂಗಳೂರು ಮುಂದೆ ಹೋಗುತ್ತಿದೆ , ಇನ್ನಷ್ಟು ಶಕ್ತಿ ತುಂಬಬೇಕಿದೆ ಅದಕ್ಕೆ ಸರ್ಕಾರ ಬದ್ದವಿದೆ. ಈವರೆಗೆ ಬೇಡಿಕೆ, ಪೂರೈಕೆ ನೋಡದೆ ತರಬೇತಿ ನೀಡಲಾಗುತ್ತಿತ್ತು ಈಗ ಅದನ್ನು ಸರಿಪಡಿಸಲಾಗಿದೆ. ಬೇಡಿಕೆ ನೋಡಿ ತರಬೇತಿ ನೀಡಲಾಗುತ್ತಿದೆ. ಬೇಡಿಕೆಯಾಧಾರಿತ ತರಬೇತಿ ಕಡೆಗೆ ನಮ್ಮ ಆಧ್ಯತೆ ಇದೆ. ನಾವು ಉದ್ಯೋಗ ಕೊಡುವವರಲ್ಲ ತರಬೇತಿ ಕೊಡುವವರು ಮಾತ್ರ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಹರಿಪ್ರಸಾದ್, ನೀವು ಉದ್ಯೋಗ ಕೊಡೋರಲ್ಲ ಎಂದು ಗೊತ್ತಿದೆ. ಪಕೋಡ ಮಾರಾಟ ಮಾಡಿ ಎಂದು ನಿಮ್ಮ ಪ್ರಧಾನಿ ಹೇಳಿದ್ದಾರೆ ಎಂದು ಕಾಲೆಳೆದರು.

ನಂತರ ಮಾತು ಮುಂದುವರೆಸಿದ ಅಶ್ವತ್ಥನಾರಾಯಣ್, ಆರ್ಥಿಕ ಪುನಶ್ಚೇತನದಲ್ಲಿ ಕರ್ನಾಟಕ ಮುಂದಿದೆ, ಎಲ್ಲ ತೆರಿಗೆಯಲ್ಲಿ ರಿಕವರಿ ಮಾಡುವಲ್ಲಿಯೂ ಕರ್ನಾಟಕ ಮುಂದಿದೆ, ಉದ್ಯೋಗ ಸೃಷ್ಟಿಯೂ ಉತ್ತಮವಾಗಿ ಆಗುತ್ತಿದೆ, ಉದ್ಯೋಗಾವಕಾಶವೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಆಗಿದೆ. ಬೆಂಗಳೂರನ್ನು ಬೇರೆ ನಗರಕ್ಕೆ ಹೋಲಿಸಬೇಡಿ, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ, ಉದ್ಯೋಗ ಸಿಗುವ ಕಾರ್ಯಕ್ರಮ ಮಸಲಾಡಲಿದ್ದೇವೆ, ಹೆಚ್ಚಿನ ಉದ್ಯೋಗ ಸಿಗಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ಶಿಥಿಲ ಶಾಲಾ ಕಟ್ಟಡ ತೆರವಿಗೆ ಕ್ರಮ: ಕಾರವಾರ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಹಳೆಯ ಶಿಥಿಲ ಶಾಲಾ ಕಟ್ಟಡ ತೆರವಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸದನಕ್ಕೆ ಭರವಸೆ ನೀಡಿದರು.

ಕಾರವಾರ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಹಳೆಯ ಶಾಲಾ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಬೇಕು ಎನ್ನುವ ಕಾಂಗ್ರೆಸ್ ಸದಸ್ಯ ಫೋಟ್ನೇಕರ್ ಪ್ರಶ್ನೆಗೆ ಸಭಾಪತಿ ಸಾತ್ ನೀಡಿದರು. ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಮಳೆ ಜಾಸ್ತಿ ಇದೆ ಎನ್ನುವುದು ನಿಜ, ಕಳೆದ ಮೂರು ವರ್ಷದಿಂದ‌ 102 ಕೊಠಡಿ ದುರಸ್ತಿ ಮಾಡಿದ್ದೇವೆ, 20 ಹೊಸ ಕೊಠಡಿ ಕಟ್ಟಿಸಿದ್ದೇವೆ, ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ನವೀಕರಿಸುವ ಇಂಧನ ಮೂಲದ ವಿದ್ಯುತ್ ಬ್ಯಾಂಕಿಂಗ್ ಗೆ ಅವಕಾಶ: ನವೀಕರಿಸುವ ಇಂಧನ ಮೂಲದ ವಿದ್ಯುತ್ ಬ್ಯಾಂಕಿಂಗ್ ಸೌಲಭ್ಯ ತೆಗೆದಿರುವ ಸುತ್ತೋಲೆ ಹೊರಡಿಸಿದ ನಂತರ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಂತೆ ಪುನಃ ಬ್ಯಾಂಕಿಂಗ್ ಸೌಲಭ್ಯವನ್ನು ಕಲ್ಪಿಸುವ ಕುರಿತು ಸರ್ಕಾರದಿಂದ ಅನುಮೋದನೆ ನೀಡಲಾಗುತ್ತಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ನವೀಕರಿಸುವ ಇಂಧನ ಮೂಲದ ವಿದ್ಯುತ್ ಬ್ಯಾಂಕಿಂಗ್ ತೆಗೆದಿರುವ ಕುರಿತು ಸದಸ್ಯ ಬಿ.ಎಂ ಫಾರೂಕ್ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ಸುನೀಲ್ ಕುಮಾರ್, ನಮ್ಮ ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಶೇ. 50 ರಷ್ಟು ನವೀಕರಿಸುವ ಇಂಧನ ಮೂಲದಿಂದಲೇ ಬರುತ್ತಿದೆ. ನವೀಕರಿಸುವ ಇಂಧನ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ವಿದ್ಯುತ್ ಬ್ಯಾಂಕಿಂಗ್ ತೆಗೆದುಹಾಕುವ ಕುರಿತು ಸುತ್ತೋಲೆ ಹೊರಡಿಸಿದ ನಂತರ ಈಗ ಮತ್ತೆ ಪರಿಶೀಲನೆ ಮಾಡಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಂತೆ ಪುನಃ ಬ್ಯಾಂಕಿಂಗ್ ಸೌಲಭ್ಯವನ್ನು ಕಲ್ಪಿಸುವ ಕುರಿತು ಸರ್ಕಾರದಿಂದ ಅನುಮೋದನೆ ನೀಡಲಾಗುತ್ತಿದೆ, ಸದಸ್ಯರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಹೊರ ರಾಜ್ಯದಿಂದ ಸೌರ ವಿದ್ಯುತ್ ಖರೀದಿ ಇಲ್ಲ: ಬೇರೆ ರಾಜ್ಯದಿಂದ ಸೌರ ವಿದ್ಯುತ್ ಖರೀದಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಸೌರಶಕ್ತಿ ವಿದ್ಯುತ್ ಮೇಲ್ಛಾವಣಿ ಪ್ರೋತ್ಸಾಹಿಸಲು ಕೈಗೊಂಡ ಕ್ರಮವೇನು, ಬೇರೆ ರಾಜ್ಯದಿಂದ ವಿದ್ಯುತ್ ಖರೀದಿ ಹುನ್ನಾರವಿದೆಯಾ ಎನ್ನುವ ಕಾಂಗ್ರೆಸ್ ವಿಪ್ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ಸುನೀಲ್ ಕುಮಾರ್, ಸೌರ ವಿದ್ಯುತ್ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಈ ವರ್ಷದ ಟಾರ್ಗೆಟ್ ಮೇಲ್ಚಾವಣಿ ಸೌರವಿದ್ಯುತ್ ನಿಂದ 3725 ಹೆಸ್ಕಾಂಗಳಿಂದ ಮೆವ್ಯಾ ಉತ್ಪಾದನೆ ಇರಿಸಿಕೊಳ್ಳಲಾಗಿದೆ, ತಾಲೂಕು, ಜಿಲ್ಲಾ ಮಟ್ಟದ ಖಾಸಗಿ ಮನೆಗಳು, ಸರ್ಕಾರಿ ಕಚೇರಿಯಲ್ಲೂ ಮೇಲ್ಚಾವಣಿಯಲ್ಲಿ ಅಳವಡಿಸಲು ಚಿಂತನೆ ನಡೆಸಿವೆ, ಟಾರ್ಗೆಟ್ ರೀಚ್ ಮಾಡಲಿದ್ದೇವೆ. ಹೊರ ರಾಜ್ಯದಿಂದ ಸೌರ ವಿದ್ಯುತ್ ಖರೀದಿ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದರು. ಮೇಲ್ಚಾವಣಿಯಲ್ಲಿ ಸೌರಶಕ್ತಿ ಉತ್ಪಾದನೆ ಹೊಸ ಯೋಜನೆಯಾಗಿದೆ. ಎಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಅವಕಾಶ ಇದೆಯೋ ಅಲ್ಲಿ ಮಾಡಲು ಸಿದ್ದವಿದೆ ಎಂದರು.

ಕಾಡಿಗೆ ಹೋಗೋಣ ಬನ್ನಿ ಎಂದ ಸಚಿವ: ವನ್ಯಜೀವಿಗಳ ಕುರಿತು ಸರ್ಕಾರದ ಮಾಹಿತಿ ತೃಪ್ತಿ ನೀಡದಿದ್ದರೆ ನಾವು ನೀವು ಕೂಡಿ ಕಾಡಿಗೆ ಹೋಗೋಣ ಬನ್ನಿ ಎಂದು ಸಚಿವ ಉಮೇಶ್ ಕತ್ತಿ ಸದನದಲ್ಲಿ ಹಾಸ ಚಟಾಕಿ ಹಾರಿಸಿದರು.

ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕುರಿತು ಸದಸ್ಯ ರಮೇಶ್ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಉಮೇಶ್ ಕತ್ತಿ, ನಾಲ್ಕು ವರ್ಷಕ್ಕೊಮ್ಮೆ ವನ್ಯಜೀವಿಗಳ ಗಣತಿ ನಡೆಯುತ್ತಿದೆ, ರೈತರ ಬೆಳೆನಾಶಕ್ಕೆ ಪರಿಹಾರ ಕೊಟ್ಟಾಗಿದೆ.

ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಕಡಿಮೆ ಆಗುತ್ತಿಲ್ಲ, ನಾನು ಸಚಿವನಾಗಿ ಉತ್ತರ ಕೊಡುತ್ತಿದ್ದೇನೆ, ಅಧಿಕಾರಿಗಳ ಜೊತೆ ಚರ್ಚಿಸಿ ಉತ್ತರ ನೀಡಿದ್ದೇನೆ. ಬೇಕಾದರೆ ನಾವು ನೀವು ಹೋಗೋಣ ಬನ್ನಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ನೀವು ಹೋಗಿದ್ದು ಬರೀ ನಾಗರಹೊಳೆ, ಬಂಡೀಪುರ ಮಾತ್ರ, ನಮ್ಮ ಕಡೆ ಬನ್ನಿ ಇನ್ನು ಹಲವು ಪ್ರಾಣಿ ಪಕ್ಷಿ ತೋರಿಸುತ್ತೇವೆ ಎಂದು ಸದಸ್ಯರ ಕಾಲೆಳೆದರು.

Last Updated : Sep 13, 2021, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.