ETV Bharat / state

ವಾಹನದ ನಂಬರ್ ಪ್ಲೇಟ್ ಮೇಲೆ ಚಿಹ್ನೆ, ಡೆಸಿಗ್ನೇಷನ್ ಕಂಡ್ರೆ ಫೋಟೋ ಕ್ಲಿಕ್ಕಿಸಿ ದೂರು ನೀಡಿ.. - ವಾಹನದ ನೋಂದಣಿ ಫಲಕಗಳ ಮೇಲೆ ಅನಧಿಕೃತ ಚಿಹ್ನೆಗೆ ನಿಷೇಧ

ವಾಹನಗಳಲ್ಲಿ ಸ್ಥಳೀಯ ಸಂಸ್ಥೆಗಳ ಹೆಸರುಗಳನ್ನು ಚಿಹ್ನೆ ಲಾಂಛನಗಳನ್ನು ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಅಳವಡಿಸಿಕೊಳ್ಳುವುದು ಕಾನೂನು ಉಲ್ಲಂಘನೆಯಾಗಿದೆ.

legal-action-against-a-vehicle-with-association-name-designation-on-number-plate
ವಾಹನದ ನಂಬರ್ ಪ್ಲೇಟ್ ಮೇಲೆ ಚಿಹ್ನೆ, ಡೆಸಿಗ್ನೇಷನ್ ಕಂಡ್ರೆ ಫೋಟೋ ಕ್ಲಿಕ್ಕಿಸಿ ದೂರು ನೀಡಿ..
author img

By

Published : Jun 2, 2022, 8:58 PM IST

ಬೆಂಗಳೂರು: ಸರ್ಕಾರದ ಎಲ್ಲ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಉಪಯೋಗಿಸುವ ಯಾವುದೇ ಖಾಸಗಿ ವಾಹನಗಳಲ್ಲಿ ಸ್ಥಳೀಯ ಸಂಸ್ಥೆಗಳ ಹೆಸರುಗಳನ್ನು ಚಿಹ್ನೆ ಲಾಂಛನಗಳನ್ನು ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಅಳವಡಿಸಿಕೊಳ್ಳುವುದು ಕಾನೂನು ಉಲ್ಲಂಘನೆಯಾಗಿದೆ.

ಈ ಕುರಿತು ಇಂದು‌ ಮಾಧ್ಯಮಗೋಷ್ಠಿ ನಡೆಸಿದ ಸಾರಿಗೆ ಇಲಾಖೆಯ ನೂತನ‌ ಆಯುಕ್ತ ಟಿ.ಎಂ. ಹೆಚ್. ಕುಮಾರ್, ವಾಹನಗಳ ನಂಬರ್ ಪ್ಲೇಟ್ ಜೊತೆ ಸಂಘ - ಸಂಸ್ಥೆಗಳ ಹೆಸರು, ಡೆಸಿಗ್ನೇಷನ್ ಹಾಕಿದವರ ವಿರುದ್ಧ ಕಾನೂನು ಕ್ರಮ‌ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಖಾಸಗಿ ವಾಹನಗಳ‌ ನಂಬರ್ ಪ್ಲೇಟ್ ಜೊತೆ ಹೆಸರು ಹಾಕಬೇಕಾದರೆ ಕೇಂದ್ರದಿಂದ ಅನುಮತಿ ಕಡ್ಡಾಯ. ನಿಯಮ ಮೀರಿ ಹೆಸರು ಹಾಕಿದರೆ ಅಂತಹ ವಾಹನಗಳ‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.‌ ವಾಹನದ ನಂಬರ್ ಪ್ಲೇಟ್ ಮೇಲೆ ಸಂಘ ಸಂಸ್ಥೆ ಹೆಸರು, ನಿಗಮ ಮಂಡಳಿ ಹೆಸರು ಹಾಕಿರುವವರು ಅದನ್ನು ತೆರವುಗೊಳಿಸಲು 10 ದಿನ ಕಾಲಾವಕಾಶ ನೀಡಲಾಗಿದೆ. ನಂತರ ಕಾರ್ಯಾಚರಣೆ ನಡೆಸಿ ವಾಹನಗಳ‌ ಬೋರ್ಡ್ ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಅನಧಿಕೃತ ನೋಂದಣಿ ಫಲಕಗಳನ್ನು ಅಳವಡಿಸಿಕೊಂಡಿರುವ ವಾಹನವು ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದಲ್ಲಿ, ಸಾರ್ವಜನಿಕರು ಅದರ ನೋಂದಣಿ ಫಲಕ, ವಾಹನವಿರುವ ಸ್ಥಳದ ಸಮೇತ ಭಾವಚಿತ್ರವನ್ನು ತೆಗೆದುಕೊಂಡು 9449863459 ವಾಟ್ಸ್​​​ಆ್ಯಪ್​ ಸಂಖ್ಯೆಗೆ ರವಾನಿಸಿದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ವಹಿಸಲಾಗುತ್ತದೆ ಎಂದರು.

ಇದನ್ನೂ ಓದಿ: ಮನೆಗೆ ತೆರಳುವ ದಾರಿ ಕಾಣದಾಗಿದೆ ಎಂದು ಹಿರಿಯರೊಬ್ಬರಿಂದ ಸಿಎಂಗೆ ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.