ETV Bharat / state

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಸಂಪುಟ ಸಹೋದ್ಯೋಗಿಗಳಲ್ಲಿ ಆತಂಕ - Leadership change in BJP

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದರೆ ನಮ್ಮ ಗತಿಯೇನು ಎನ್ನುವ ಪ್ರಶ್ನೆ ಇದೀಗ ಡಿಸಿಎಂಗಳು ಹಾಗು ಸಂಪುಟದ ಬಹುತೇಕ ಸಚಿವರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಸಂಪುಟ ಸಹೋದ್ಯೋಗಿಗಳಲ್ಲಿ ಆತಂಕ
ಸಂಪುಟ ಸಹೋದ್ಯೋಗಿಗಳಲ್ಲಿ ಆತಂಕ
author img

By

Published : Jul 21, 2021, 8:01 PM IST

Updated : Jul 21, 2021, 9:10 PM IST

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರ ಸಂಪುಟ ಸಹೋದ್ಯೋಗಿಗಳಲ್ಲೂ ಆತಂಕ ಶುರುವಾಗಿದೆ. ಪಕ್ಷನಿಷ್ಠರ ಜೊತೆಗೆ 'ಮಿತ್ರ ಮಂಡಳಿ'ಯಲ್ಲೂ ಗೊಂದಲ ಶುರುವಾಗಿದ್ದು, ಅವರೆಲ್ಲಾ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದರೆ ನಮ್ಮ ಗತಿಯೇನು ಎನ್ನುವ ಪ್ರಶ್ನೆ ಇದೀಗ ಡಿಸಿಎಂಗಳು ಹಾಗು ಸಂಪುಟದ ಬಹುತೇಕ ಸಚಿವರನ್ನು ಕಾಡುತ್ತಿದೆ. ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಇಡೀ ಸಚಿವ ಸಂಪುಟವೇ ಮಾಜಿಯಾಗಲಿದೆ. ಹೊಸದಾಗಿ ಅಧಿಕಾರಕ್ಕೆ ಬರುವ ಮುಖ್ಯಮಂತ್ರಿ ಸಂಪುಟ ರಚನೆ ಮಾಡಲಿದ್ದು ಅದರಲ್ಲಿ ಯಾರಿಗೆ ಅವಕಾಶ ಸಿಗುತ್ತದೆ, ಯಾರಿಗೆ ಸಿಗುವುದಿಲ್ಲ ಎನ್ನುವುದಕ್ಕೆ ಈಗಂತೂ ಯಾರ ಬಳಿಯೂ ಉತ್ತರವಿಲ್ಲ.

ಬಿಜೆಪಿ ಹೈಕಮಾಂಡ್‌ನಿಂದಲೂ ಈ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಆಪ್ತರಿಗೂ ಈ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸಂಪುಟ ಸಹೋದ್ಯೋಗಿಗಳು ಆತಂಕಕ್ಕೆ ಸಿಲುಕಿದ್ದಾರೆ. ಹಾಗಾಗಿಯೇ ಪರ-ವಿರೋಧ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ಗೊಂದಲದಲ್ಲಿ ಡಿಸಿಎಂಗಳು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಮೂವರು ಉಪ ಮುಖ್ಯಮಂತ್ರಿಗಳಿದ್ದಾರೆ. ಮೂವರನ್ನೂ ರಾಜಕೀಯ ಲೆಕ್ಕಾಚಾರದಲ್ಲಿ ಹೈಕಮಾಂಡ್ ನೇರವಾಗಿ ಆಯ್ಕೆ ಮಾಡಿ ಕಳುಹಿಸಿದೆ. ಲಿಂಗಾಯತ ಸಮುದಾಯದಿಂದ ಲಕ್ಷ್ಮಣ ಸವದಿ, ಒಕ್ಕಲಿಗ ಸಮುದಾಯದಿಂದ ಅಶ್ವತ್ಥ ನಾರಾಯಣ್ ಹಾಗು ದಲಿತ ಸಮುದಾಯದಿಂದ ಗೋವಿಂದ ಕಾರಜೋಳ ಅವರಿಗೆ ಅವಕಾಶ ನೀಡಿದೆ.

ಆದರೆ ಹೈಕಮಾಂಡ್ ನಿರೀಕ್ಷೆಯನ್ನು ಈ ಮೂರೂ ಜನ ಡಿಸಿಎಂಗಳು ತಲುಪುವಲ್ಲಿ ಹಿಂದೆಬಿದ್ದಿದ್ದಾರೆ. ಇವರು ಪರ್ಯಾಯ ನಾಯಕತ್ವ ಬೆಳೆಸಿಕೊಳ್ಳುವಲ್ಲಿ ಸಫಲರಾಗಿಲ್ಲ. ಹಾಗಾಗಿ ಯಡಿಯೂರಪ್ಪ ರಾಜೀನಾಮೆ ನಂತರದಲ್ಲಿ ಬರುವ ಹೊಸ ಸಂಪುಟದಲ್ಲಿ ಅವಕಾಶ ಸಿಕ್ಕರೂ ಡಿಸಿಎಂ ಹುದ್ದೆ ಸಿಕ್ಕುವುದು ಅನುಮಾನವೇ ಆಗಿದೆ.

ಬಿಜೆಪಿ ಸಚಿವರಲ್ಲೂ ಕಾಡುತ್ತಿದೆ ಆತಂಕ: ಯಡಿಯೂರಪ್ಪ ಸಂಪುಟದಲ್ಲಿರುವ ಬಿಜೆಪಿ ಸಚಿವರಲ್ಲಿ ಕೆಲವು ಸಚಿವರಿಗೆ ಹುದ್ದೆ ಕೈತಪ್ಪುವ ಆತಂಕವಿದೆ. ಹೇಗೋ ಈಗ ಸಚಿವ ಸ್ಥಾನದ ಅವಕಾಶ ಸಿಕ್ಕಿದೆ. ಒಂದು ವೇಳೆ ನಾಯಕತ್ವ ಬದಲಾದಲ್ಲಿ ರಚನೆಯಾಗುವ ಹೊಸ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡುವ ನಿರ್ಧಾರ ಮಾಡಿದಲ್ಲಿ ನಮ್ಮನ್ನು ಕೇಳುವವರು ಯಾರು? ನಮ್ಮ ಪರ ಹೈಕಮಾಂಡ್‌ ಮಟ್ಟದಲ್ಲಿ ಯಾರು ಮಾತನಾಡುತ್ತಾರೆ? ಎನ್ನುವ ಆತಂಕದಲ್ಲಿದ್ದಾರೆ. ಕೆಲವು ಸಚಿವರ ಇಲಾಖೆಯಲ್ಲಿನ ಪ್ರಗತಿ ತೃಪ್ತಿದಾಯಕವಾಗಿಲ್ಲ, ಅವರಿಗೆ ಕೋಕ್ ನೀಡಲಾಗುತ್ತೆ ಎನ್ನುವ ಮಾತುಗಳಿದ್ದು ಆತಂಕದಲ್ಲಿಯೇ ಇದ್ದಾರೆ.

ಮತ್ತೆ ಕೆಲವರು ಯಡಿಯೂರಪ್ಪ ಪರವಾಗಿ ಗುರುತಿಸಿಕೊಂಡು 'ಯಡಿಯೂರಪ್ಪ ಆಪ್ತ ಬಳಗ'ವೆಂದೇ ಗುರುತಿಸಿಕೊಂಡಿದೆ. ಇದೇ ಅವರಿಗೆ ಸಮಸ್ಯೆಯಾಗಬಹುದು, ಬಿಎಸ್​​ವೈ ಆಪ್ತರನ್ನು ದೂರವಿಡುವ ನಿರ್ಧಾರ ಮಾಡಿದಲ್ಲಿ ನಾವೆಲ್ಲಾ ಅವಕಾಶ ಕಳೆದುಕೊಳ್ಳಬೇಕಾಗಲಿದೆ ಎನ್ನುವ ಆತಂಕದಲ್ಲಿ ಕೆಲ ಹಿರಿಯ ಸಚಿವರೂ ಇದ್ದಾರೆ.

ಆಡಿಯೋ ಬಾಂಬ್: ಇನ್ನು ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ಕೆ‌.ಎಸ್‌ ಈಶ್ವರಪ್ಪ ಹಾಗು ಜಗದೀಶ್ ಶೆಟ್ಟರ್ ಅವರನ್ನು ಹೊಸ ಸಂಪುಟದಿಂದ ಹೊರಗಿಡಲಾಗುತ್ತದೆ ಎನ್ನುವ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನುವ ಆಡಿಯೋ ವೈರಲ್ ನಂತರ ಉಭಯ ಸಚಿವರು ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.

ತವರು ಕ್ಷೇತ್ರಸಲ್ಲಿದ್ದುಕೊಂಡೇ ಆರ್.ಎಸ್.ಎಸ್. ನಾಯಕರ ಸಂಪರ್ಕ ಮಾಡಿ ಲಾಬಿ ನಡೆಸುತ್ತಿರುವ ಈಶ್ವರಪ್ಪ ಸ್ಥಾನ ಉಳಿಸುಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಇನ್ನು ಸಿಎಂ ರೇಸ್ ನಲ್ಲಿರುವ ಜಗದೀಶ್ ಶೆಟ್ಟರ್ ಗುಜರಾತ್ ನಾಯಕರನ್ನು ಭೇಟಿ ಮಾಡಿ ಅಲ್ಲಿಂದ ದೆಹಲಿಗೆ ತೆರಳಿ ಲಾಬಿ ಮಾಡುತ್ತಿದ್ದಾರೆ.

ಮಿತ್ರ ಮಂಡಳಿಗೂ ಆತಂಕ: ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದವರ ಕೊಡುಗೆ ಇದೆ. ಹಾಗಾಗಿ 12 ಜನರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಅದರಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಉಳಿದ 11 ಸಚಿವರಲ್ಲಿ ಕೆಲವರಿಗೆ ಭೀತಿ ಶುರುವಾಗಿದೆ.

ಒಂದು ಬಾರಿ ಅವಕಾಶ ಕೊಟ್ಟಿದ್ದಾಗಿದೆ ಮತ್ತೆ ಅವಕಾಶ ನೀಡುವ ಅಗತ್ಯವಿಲ್ಲ ಎಂದರೆ ಹೇಗೆ? ಒಂದು ವೇಳೆ ಅವಕಾಶ ನೀಡಿದರೂ ಪ್ರಮುಖ ಖಾತೆ ನೀಡುವ ಖಾತರಿ ಇಲ್ಲ ಹೀಗಾಗಿ ಆತಂಕಕ್ಕೆ ಸಿಲುಕಿರುವ ಮಿತ್ರ ಮಂಡಳಿಯ ಬಿ.ಸಿ ಪಾಟೀಲ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವರು ಸಭೆ ಮಾಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗಾಗಿಯೇ ಯಡಿಯೂರಪ್ಪ ಬದಲಾವಣೆ ಬೇಡ ಎನ್ನುವ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಒಟ್ಟಿನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಕೇವಲ ಯಡಿಯೂರಪ್ಪ ಅವರನ್ನು ಮಾತ್ರ ಗೊಂದಲಕ್ಕೆ ಸಿಲುಕಿಸಿಲ್ಲ, ಇಡೀ ಸಚಿವ ಸಂಪುಟವನ್ನೇ ಗೊಂದಲಕ್ಕೆ ಸಿಲುಕಿಸಿದ್ದು, ಸಚಿವರೆಲ್ಲಾ ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಇದನ್ನೂ ಓದಿ: ಸಿಎಂ ಭೇಟಿ ಮಾಡಿದ ಸಿದ್ಧಗಂಗಾ ಶ್ರೀ.. ಬಿಎಸ್​ವೈ ಜೊತೆ ಮಹತ್ವದ ಚರ್ಚೆ

Last Updated : Jul 21, 2021, 9:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.