ETV Bharat / state

ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಗಣ್ಯರು - leader-meet-siddaramaiah-and-enquired-about-his-health

ರಾಜ್ಯದ ವಿವಿಧ ಪಕ್ಷದ ಮುಖಂಡರು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Leaders met siddu
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಾಯಕರು
author img

By

Published : Dec 14, 2019, 3:45 PM IST

ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ವಿವಿಧ ರಾಜಕೀಯ ಪಕ್ಷದ ನಾಯಕರು, ಮಠಾಧಿಪತಿಗಳು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಸಚಿವ ಸಿ.ಟಿ.ರವಿ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಮಾಜಿ ಸಚಿವರಾದ ಹೆಚ್. ವಿಶ್ವನಾಥ್, ರಾಮಲಿಂಗ ರೆಡ್ಡಿ, ಶಿವರಾಜ್ ತಂಗಡಗಿ, ಶಾಸಕರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಮುಖಂಡರಾದ ಮುನಿರತ್ನ, ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತಿತರ ಮುಖಂಡರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಸಚಿವ ಸಿ.ಟಿ.ರವಿ, ರಾಜಕೀಯವಾಗಿ ಅಭಿವೃದ್ಧಿ, ಆಲೋಚನೆಯಲ್ಲಿ ಬೇಧವಿದ್ರೂ ರಾಜಕೀಯ ಹೊರತುಪಡಿಸಿ ನಾವು ಚೆನ್ನಾಗಿದ್ದೇವೆ. ಅವರು ನೂರು ಕಾಲ ಬದುಕಲಿ. ನಮ್ಮ ಪಾರ್ಟಿ ಕೇಡರ್ ಬೇಸ್ ಮೇಲೆ ಇರುವ ಪಕ್ಷ. ಬೇರೆ ಪಾರ್ಟಿಗೂ ನಮ್ಮ ಪಾರ್ಟಿಗೂ ವ್ಯತ್ಯಾಸವಿದೆ. ಹಾಲಿಗೆ ನೀರು ಬೆರೆಸಿದ್ರೂ ಅದು ಹಾಲೇ ಆಗುವುದು. ಹಾಲು ನಮ್ಮ ಕ್ಯಾನ್​ನಲ್ಲಿ ಇರುವವರೆಗೂ ಅದು ನಮ್ಮ ಹಾಲು. ಡೈರಿಗೆ ಹಾಕಿದ ನಂತ್ರ ಅದು ಡೈರಿ ಹಾಲು. ಅದೇ ರೀತಿ ಬಿಜೆಪಿಗೆ ಬರುವವರೆಗೆ ಎಲ್ಲರೂ ಬೇರೆಯವರು. ಬಿಜೆಪಿಗೆ ಬಂದನಂತರ ಅವರು ನಮ್ಮ ಪಾರ್ಟಿಯವರೇ. ನಮ್ಮ ಪಾರ್ಟಿಗೆ ಬಂದ ನಂತರ ನಮಗೆ ಬೇಕಾದ ಹಾಗೆ ನಾವು ಅವರನ್ನು ರೆಡಿ ಮಾಡಿಕೊಳ್ಳುತ್ತೇವೆ ಎಂದರು.

ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಾಯಕರು

ಶ್ರೀರಾಮುಲು ಸಿಎಂ ಅವರಿಂದ ಅಂತರ ಕಾಯ್ದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಶ್ರೀರಾಮುಲು ಅವರು ಭಿನ್ನಾಭಿಪ್ರಾಯ ಇದೆ ಅಂತ ಹೇಳಿಲ್ಲ. ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಮಾಸ್ ಲೀಡರ್. ಅವರಿಗೆ ಯಾವುದೇ ಅಸಮಾಧಾನ ಇಲ್ಲ. ನಾನು ಕೂಡ ಕ್ಯಾಬಿನೆಟ್​ಗೆ ಹೋಗಿರಲಿಲ್ಲ. ಆದರೂ ನನ್ನ ಯಾಕೆ ಯಾರು ಪಶ್ನೆ ಮಾಡಿಲ್ಲ ಎಂದು ಹೇಳಿದ್ರು.

ಶಾಸಕ ಗೋಪಾಲಯ್ಯ ಮಾತನಾಡಿ, ನಾನು ರಾಜಕೀಯವಾಗಿ ಬೆಳೆಯಲು ಸಿದ್ದರಾಮಯ್ಯ ಕೂಡ ಕಾರಣ ಎಂದರು. ಕ್ಯಾಬಿನೆಟ್ ವಿಸ್ತರಣೆ ವಿಚಾರ ಮಾತನಾಡಿದ ಅವರು, ಯಾವಾಗ ಮಂತ್ರಿ ಸ್ಥಾನ ಕೊಡಬೇಕು ಎಂದು ಮುಖ್ಯಮಂತ್ರಿಗಳು ನಿರ್ಧಾರ ಮಾಡ್ತಾರೆ. ಶೂನ್ಯ ಮಾಸದಲ್ಲಿ ಹಲವಾರು ರಾಜ್ಯದ ರಿಸಲ್ಟ್ ಬರುವುದಿಲ್ವಾ? ನಾವು ಅದನ್ನು ಒಪ್ಪಿಕೊಂಡಿಲ್ವಾ? ಅದೇ ರೀತಿ ಕ್ಯಾಬಿನೆಟ್ ವಿಸ್ತರಣೆಗೂ ಶೂನ್ಯ ಮಾಸಕ್ಕೂ ಸಂಬಂಧವಿಲ್ಲ ಎಂದು ವಿವರಿಸಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಿದ್ದರಾಮಯ್ಯನವರು ಆರೋಗ್ಯವಾಗಿದ್ದಾರೆ. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು. ಬಿಜೆಪಿ ಬಣ ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ, ಅದು ಪಕ್ಷದ ಆಂತರಿಕ ವಿಚಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಸಿದ್ದರಾಮಯ್ಯನವರು ಆಸ್ಪತ್ರೆ ಸೇರಿದ್ದಾರೆಂಬ ವಿಚಾರ ಕೇಳಿ ಬೇಸರ ಆಯ್ತು, ಹೀಗಾಗಿ ಬೈರತಿ ಬಸವರಾಜು, ಮುನಿರತ್ನ ಹಾಗೂ ನಾನು ಮೂವರೂ ಒಟ್ಟಿಗೆ ಭೇಟಿ ಮಾಡಬೇಕೆಂದು ಇಂದು ಭೇಟಿ ಮಾಡಿದ್ದೇವೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ. ಅವರು ನಮ್ಮ ನಾಯಕರು, ಅವರಿಗೆ ಆರೋಗ್ಯ, ಆಯಸ್ಸು ಹೆಚ್ಚಾಗಲಿ, ಈ ಹಿಂದಿನಂತೆ ರಾಜಕೀಯ ಚಟುವಟಿಕೆಯಲ್ಲಿ ತೊಡಗಲಿ ಎಂದು ಪ್ರಾರ್ಥಿಸಿದ್ದೇವೆ. ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದರು.

Intro:newsBody:ಸಿದ್ದರಾಮಯ್ಯರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ವಿವಿಧ ಪಕ್ಷದ ಮುಖಂಡರು ಧಾರ್ಮಿಕ ನಾಯಕರು

ಬೆಂಗಳೂರು: ರಾಜ್ಯದ ವಿವಿಧ ಪಕ್ಷದ ಮುಖಂಡರು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ವಿವಿಧ ರಾಜಕೀಯ ಪಕ್ಷದ ನಾಯಕರು ಮಠಾಧಿಪತಿಗಳು ಆರೋಗ್ಯ ವಿಚಾರಿಸಿದರು. ಸಚಿವ ಸಿಟಿ ರವಿ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಮಾಜಿ ಸಚಿವರಾದ ಎಚ್. ವಿಶ್ವನಾಥ್, ರಾಮಲಿಂಗರೆಡ್ಡಿ, ಶಿವರಾಜ್ ತಂಗಡಗಿ, ಶಾಸಕರಾದ ಬೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಗೋಪಾಲಯ್ಯ, ಮುಖಂಡರಾದ ಮುನಿರತ್ನ, ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತಿತರ ಮುಖಂಡರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಸಚಿವ ಸಿ.ಟಿ.ರವಿ ಮಾತನಾಡಿ, ರಾಜಕೀಯವಾಗಿ ಅಭಿವೃದ್ಧಿ, ಆಲೋಚನೆಯಲ್ಲಿ ಬೇಧವಿದ್ರು ರಾಜಕೀಯವನ್ನಾ ಹೊರತುಪಡಿಸಿ ನಾವು ಚೆನ್ನಾಗಿದ್ದೇವೆ. ಅವರು ನೂರು ಕಾಲ ಬದುಕಲಿ. ನಮ್ಮ ಪಾರ್ಟಿ ಕೇಡರ್ ಬೇಸ್ ಮೇಲೆ ಇರುವ ಪಕ್ಷ. ಬೇರೆ ಪಾರ್ಟಿಗೂ ನಮ್ಮ ಪಾರ್ಟಿಗೂ ವ್ಯತ್ಯಾಸವಿದೆ. ಹಾಲಿಗೆ ನೀರು ಬೇರೆಸಿದ್ರೂ ಅದು ಹಾಲೇ ಹಾಗುವುದು. ಹಾಲು ನಮ್ಮ ಕ್ಯಾನ್ ನಲ್ಲಿ ಇರುವವರೆಗೂ ಅದು ನಮ್ಮ ಹಾಲು. ಡೈರಿಗೆ ಹಾಕಿದ ನಂತ್ರ ಅದು ಡೈರಿ ಹಾಲು. ಅದೇ ರೀತಿ ಬಿಜೆಪಿಗೆ ಬರುವವರೆಗೆ ಎಲ್ಲರೂ ಬೇರೆಯವರು. ಬಿಜೆಪಿಗೆ ಬಂದನಂತ್ರ ಅವರು ನಮ್ಮ ಪಾರ್ಟಿಯವರೇ. ನಮ್ಮ ಪಾರ್ಟಿಗೆ ಬಂದ ನಂತ್ರ ನಮಗೆ ಬೇಕಾದ ಹಾಗೆ ನಾವು ರೆಡಿ ಮಾಡಿಕೊಳ್ಳುತ್ತೇವೆ ಎಂದರು.
ಶ್ರೀರಾಮುಲು ನನಗೆ ಭಿನ್ನಾಭಿಪ್ರಾಯ ಇದೆ ಅಂತಾ ಹೇಳಿಲ್ಲ. ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಮಾಸ್ ಲೀಡರ್. ಅವರಿಗೆ ಯಾವುದೇ ಅಸಮಾಧಾನ ಇಲ್ಲ. ನಾನು ಕೂಡ ಕ್ಯಾಬಿನೆಟ್ ಗೆ ಹೋಗಿರಲಿಲ್ಲ ಆದ್ರು ನನ್ನ ಯಾಕೆ ಯಾರು ಪಶ್ನೆ ಮಾಡಿಲ್ಲ ಎಂದು ಕೇಳಿದರು.
ಶಾಸಕ ಗೋಪಾಲಯ್ಯ ಮಾತನಾಡಿ, ನಾನು ಇಷ್ಟು ರಾಜಕೀಯವಾಗಿ ಬೆಳೆಯಲು ಸಿದ್ದರಾಮಯ್ಯ ಕೂಡ ಕಾರಣ. ಅವರು ಜೆಡಿಎಸ್ ನಿಂದ ಕಾಂಗ್ರೆಸ್ ಹೋದ್ರು. ನಾನು ಕೂಡ ಜೆಡಿಎಸ್ ಗೆ ಬಂದವನು ಎಂದರು.
ಕ್ಯಾಬಿನೆಟ್ ವಿಸ್ತರಣೆ ವಿಚಾರ ಮಾತನಾಡಿ, ಯಾವಾಗ ಮಂತ್ರಿ ಸ್ಥಾನ ಕೊಡಬೇಕು ಅಂತಾ ಮುಖ್ಯಮಂತ್ರಿಗಳು ನಿರ್ಧಾರ ಮಾಡ್ತಾರೆ. ಶೂನ್ಯ ಮಾಸದಲ್ಲಿ ಹಲವಾರು ರಾಜ್ಯದ ರಿಸಲ್ಟ್ ಬರುವುದಿಲ್ವಾ. ನಾವು ಅದನ್ನು ಒಪ್ಪಿಕೊಂಡಿಲ್ವಾ? ಅದೇ ರೀತಿ ಕ್ಯಾಬಿನೆಟ್ ವಿಸ್ತರಣೆಗೂ ಶೂನ್ಯ ಮಾಸಕ್ಕೂ ಸಂಬಂಧವಿಲ್ಲ ಎಂದು ವಿವರಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಿದ್ದರಾಮಯ್ಯನವರು ಆರೋಗ್ಯವಾಗಿದ್ದಾರೆ. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು.
ಬಿಜೆಪಿ ಬಣ್ಣ ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ, ಅದು ಪಕ್ಷದ ಆಂತರಿಕ ವಿಚಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.