ETV Bharat / state

ಭಗವಾನ್ ಮುಖಕ್ಕೆ ಮಸಿ ಪ್ರಕರಣ: ವಕೀಲೆ ಮೀರಾ ವಿರುದ್ಧ ಪ್ರಕರಣ ದಾಖಲು - Lawyer meera raghavendra lastest news

ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಮೀರಾ ರಾಘವೇಂದ್ರ ಹಾಗೂ ಅವರ ಪತಿ ರಾಘವೇಂದ್ರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು‌ ಮಾಡಲಾಗಿದೆ.

ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲು

author img

By

Published : Feb 7, 2021, 11:53 AM IST

ಬೆಂಗಳೂರು: ಪ್ರೊ.ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಮೀರಾ ರಾಘವೇಂದ್ರ ಹಾಗೂ ಅವರ ಪತಿ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎಫ್​ಐಆರ್​ ಪ್ರತಿ
ಎಫ್​ಐಆರ್​ ಪ್ರತಿ

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೆ.ಎಸ್. ಭಗವಾನ್ ಸ್ವತಃ ಪ್ರಕರಣ ದಾಖಲು‌ ಮಾಡಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೈಸೂರು ತಲುಪುವಷ್ಟರಲ್ಲಿ ನನ್ನ ಸಂಘಟನೆ ಹುಡುಗರು ನಿನ್ನನ್ನು ಕೊಲ್ಲಲಿದ್ದಾರೆ ಎಂದು ಮೀರಾ, ಭಗವಾನ್​ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಓದಿ: ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದೂರು ದಾಖಲಿಸಿದ ಭಗವಾನ್​

ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲ್ಬುರ್ಗಿ ಜೊತೆಗೆ ನಿನ್ನನ್ನೂ ಕಳಿಸುವೆ ಎಂದು ಬೆದರಿಕೆ ಹಾಕಿದ ಆರೋಪ ಕೂಡ ಮಾಡಲಾಗಿದೆ‌‌. ಐಪಿಸಿ ಸೆಕ್ಷನ್ 506, 341, 34 ಹಾಗೂ 504ರಡಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.