ಬೆಂಗಳೂರು: ಉದ್ದೇಶಪೂರ್ವಕವಾಗಿ ಎಸ್ಐಟಿ ಅಧಿಕಾರಿಗಳು ಹಾಗೂ ಪೊಲೀಸರು ಸಿಡಿ ಯುವತಿಯ ವಿಡಿಯೋವನ್ನು ಮಾಧ್ಯಮಗಳಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿ ತನಿಖಾಧಿಕಾರಿಗಳ ವಿರುದ್ಧ ದೂರು ನೀಡಲು ವಕೀಲ ಜಗದೀಶ್ ನಿರ್ಧರಿಸಿದ್ದಾರೆ.
ಎಸ್ಐಟಿ ಆರೋಪಿಯ ಪರವಾಗಿ ತನಿಖೆ ಮಾಡುತ್ತಿದೆ. ಸಂತ್ರಸ್ತೆಯ ವಿಡಿಯೋ ಮಾಡಬಾರದು ಎಂದು ಸುಪ್ರೀಂಕೋರ್ಟ್ನ ಆದೇಶವಿದೆ. ಆದರೆ, ನಿನ್ನೆ ನ್ಯಾಯಾಲಯದಿಂದ ಸಂತ್ರಸ್ತೆ ಹೊರಬರುವಾಗ ಎಸ್ಐಟಿ ಅಧಿಕಾರಿಗಳೇ ವಿಡಿಯೋ ಮಾಡಿದ್ದಾರೆ. ಆದರೂ ಪೊಲೀಸರೇ ವಿಡಿಯೋ ಮಾಡಿ ಮಾಧ್ಯಮಕ್ಕೆ ನೀಡಿದ್ದಾರೆ. ಹೀಗಾಗಿ ಮ್ಯಾಜಿಸ್ಟ್ರೇಟ್ಗೆ ದೂರು ನೀಡಲು ಯುವತಿ ಪರ ವಕೀಲರು ಮುಂದಾಗಿದ್ದಾರೆ.
ಓದಿ: ಸಿಡಿ ಪ್ರಕರಣ: ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಗೆ ಮೆಡಿಕಲ್ ಟೆಸ್ಟ್, ಜಾರಕಿಹೊಳಿಗೆ ಟೆನ್ಶನ್!
ಎಫ್ಐಆರ್ ದಾಖಲಾದರೂ ಆರೋಪಿ ರಮೇಶ್ ಜಾರಕಿಹೊಳಿಯನ್ನು ಬಂಧನ ಮಾಡಿಲ್ಲ. ಯಾಕೆ ಆರೋಪಿಯನ್ನು ಬಂಧನ ಮಾಡಲು ಎಸ್ಐಟಿ ಹಿಂದೇಟು ಹಾಕುತ್ತಿದೆ. ಹೀಗೆ ಹಲವಾರು ಪ್ರಶ್ನೆಗಳ ಸಮೇತ ವಕೀಲರು ದೂರು ನೀಡಲು ತೀರ್ಮಾನಿಸಿದ್ದಾರೆ.