ETV Bharat / state

ಹೈಕೋರ್ಟ್​ನಿಂದ ಪ್ರಕರಣಗಳ ಮಾಹಿತಿ ನೀಡುವ ಟೆಲಿಗ್ರಾಮ್ ಚಾನೆಲ್ ಆರಂಭ: ಸೇವೆ ಬಳಸಿಕೊಳ್ಳಲು ಸಿಜೆ ಕರೆ

'ಕರ್ನಾಟಕ ಹೈಕೋರ್ಟ್ ವರ್ಚುಯಲ್ ಕೇಸ್ ಇನ್ಫಾರ್ಮೇಷನ್ ಸರ್ವೀಸಸ್' ಹೆಸರಿನ ಟೆಲಿಗ್ರಾಮ್ ಚಾನೆಲ್ (HCKChatBot) ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಅವರು ಉದ್ಘಾಟಿಸಿದ್ದಾರೆ.

high-court
ಹೈಕೋರ್ಟ್
author img

By

Published : Jul 9, 2021, 4:58 PM IST

ಬೆಂಗಳೂರು: ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ಒದಗಿಸಲು 'ಕರ್ನಾಟಕ ಹೈಕೋರ್ಟ್ ವರ್ಚುಯಲ್ ಕೇಸ್ ಇನ್ಫಾರ್ಮೇಷನ್ ಸರ್ವೀಸಸ್' ಹೆಸರಿನ ಟೆಲಿಗ್ರಾಮ್ ಚಾನೆಲ್ (HCKChatBot) ಪ್ರಾರಂಭಿಸಿದೆ. ‌

ಇ-ಕೋರ್ಟ್ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆಯ ಸ್ಥಿತಿ ಹಾಗೂ ದೈನಂದಿನ ಆದೇಶಗಳು ಈ ಚಾನೆಲ್ ನಲ್ಲಿ ಲಭ್ಯವಾಗಲಿವೆ. ಹೈಕೋರ್ಟ್‌ನ ಈ ಚಾನೆಲ್‌ನಲ್ಲಿ ಈಗಾಗಲೇ 6500 ಸದಸ್ಯರಿದ್ದರೆ, ಜಿಲ್ಲಾ ನ್ಯಾಯಾಲಯಗಳ ಚಾನೆಲ್ ಗಳಲ್ಲಿ 5 ಸಾವಿರಕ್ಕೂ ಅಧಿಕ ಚಂದಾದಾರರಿದ್ದಾರೆ.

ಚಾನೆಲ್ ಉದ್ಘಾಟಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರು, ‘ವಕೀಲರು, ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ಈ ಸೇವೆ ಉಪಯೋಗವಾಗಲಿದೆ. ಡಿಜಿಟಲ್ ಯುಗದಲ್ಲಿ ನೈಜ ಸಮಯದಲ್ಲಿ ಎಲ್ಲಾ ವಿಚಾರಣೆಗಳನ್ನು ಜನರು ನೋಡಬಹುದಾಗಿದೆ. ಈ ಸೌಲಭ್ಯವನ್ನು ವಕೀಲರು ಹಾಗೂ ಇತರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹೆಚ್​ಡಿಕೆ-ಸುಮಲತಾ ಬಳಸುತ್ತಿರುವ ಭಾಷೆ ಸರಿಯಿಲ್ಲ, ನೋಡಿ ಮಾತನಾಡಿ: ಕೆ.ಎಸ್.ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.