ಬೆಂಗಳೂರು: ಕಳ್ಳರಿಗೆ ಕಳ್ಳತನ ಮಾಡುವುದಷ್ಟೇ ಮಾತ್ರ ಗೊತ್ತು. ಬಡವ - ಶ್ರೀಮಂತ ಅಂತಾ ಬೇದ ಭಾವ ಮಾಡೊದಿಲ್ಲ. ಪೊಲೀಸರು ಅಂತಾನೂ ನೋಡೋದಿಲ್ಲ. ಇದಕ್ಕೆ ಪೂರಕ ಎಂಬಂತೆ ಹಾಡಹಾಗಲೇ ಪಾರ್ಕ್ ಮಾಡಲಾಗಿದ್ದ ಪೊಲೀಸರ ಕಾರಿನ ಗ್ಲಾಸ್ ಮುರಿದು ಕಳ್ಳತನ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಎಂಬುವರು ಜ. 31ರಂದು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿ ಕಾರ್ ಪಾರ್ಕ್ ಮಾಡಿ ವೈಯಕ್ತಿಕ ಕೆಲಸದ ನಿಮಿತ್ತ ಆನಂದ್ ರಾವ್ ಸರ್ಕಲ್ ಕಡೆ ಹೋಗಿದ್ದರು.
ಇದನ್ನು ಗಮನಿಸಿದ ಕಳ್ಳರು ಸಂಜೆ ಏಳು ಗಂಟೆಗೆ ಬರುವಾಗ ಕಾರಿನ ಎಡಭಾಗದಲ್ಲಿ ಗಾಜು ಒಡೆದು ಕಾರಿನಲ್ಲಿದ್ದ ಲ್ಯಾಪ್ ಟಾಪ್, ಮೂರು ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಹಾಗೂ 50 ಸಾವಿರ ನಗದು ದೋಚಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.