ಬೆಂಗಳೂರು : ಉದ್ಯಾನ ನಗರಿಯ ಆಕರ್ಷಕ ತಾಣ ಲಾಲ್ಬಾಗ್. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಇಲ್ಲಿ ಫ್ಲವರ್ ಶೋ ನಡೆಸಲಾಗುತ್ತೆ. ಈ ಬಾರಿಯ ಹೊಸದೊಂದು ಕಾನ್ಸೆಪ್ಟ್ ಹೊತ್ತು ಬಂದಿದೆ.
ಲಾಲ್ಬಾಗ್ ಮಧ್ಯ ಭಾಗದ ಗಾಜಿನ ಮನೆಯಲ್ಲಿ ಮಿನಿ ಫ್ಲವರ್ ಮೈಸೂರು ನಿರ್ಮಾಣವಾಗಿದೆ. ಸ್ವಾತಂತ್ರ್ಯೋತ್ಸವದ ನಿಮಿತ್ಯ 210ನೇ ಫಲ ಪುಷ್ಪ ಪ್ರದರ್ಶನವನ್ನ ಜಯಚಾಮರಾಜ ಒಡೆಯರ್‌ಗೆ ಸಮರ್ಪಿಸಲಾಗಿದೆ. ಮೈಸೂರು ಅರಸ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆಗಾಗಿ ಒಡೆಯರ್ ಅವರ ಸಾಧನೆಗಳು ಹೂಗಳಲ್ಲಿ ಅರಳಲಿವೆ. ಫ್ಲವರ್ ಶೋಗೆ ಮೈಸೂರಿನ ರಾಜ ಮಾತೆ ಪ್ರಮೋದಾ ದೇವಿ ಚಾಲನೆ ನೀಡಿದರು.
ಮೈಸೂರಿನ ಒಡೆಯರ್ ವೃತ್ತದ ಆಕರ್ಷಕ ಗೋಪುರವನ್ನ 5.5 ಲಕ್ಷ ಗುಲಾಬಿ ಹೂಗಳನ್ನು ಬಳಸಿ ನಿರ್ಮಿಸಲಾಗಿದೆ. ಜತೆಗೆ ವೃತ್ತದ ಮುಂಭಾಗ ಸುಂದರ ಹೂವಿನ ವನವಿದ್ದು ನೋಡುಗರನ್ನ ಮತ್ತಷ್ಟು ರಂಜಿಸುತ್ತದೆ. ಸಂಗೀತದ ವಾದ್ಯಗಳು, ದರ್ಬಾರ್ ಹಾಲ್, ಸಿಂಹಾಸನ, ಅಂಬಾರಿ ಆನೆ ಫ್ಲವರ್ ಶೋ ಪ್ರಮುಖ ಆಕರ್ಷಣೆಗಳಾಗಿವೆ. ಗ್ಲಾಸಿಮಿಯಾ, ಸೇವಂತಿಗೆ, ಸೈಕ್ಲೋಮನ್, ಗುಲಾಬಿ, ಜಾಜಿ ಮಲ್ಲಿಗೆ, ಮೈಸೂರು ಮಲ್ಲಿಗೆ ಸೇರಿದಂತೆ 92 ಬಗೆಯ ಹೂಗಳನ್ನ ಪ್ರದರ್ಶನದಲ್ಲಿ ಬಳಕೆ ಆಗಿವೆ.