ಬೆಂಗಳೂರು: ಭೂಗತ ಪಾತಾಕಿ ರವಿ ಪೂಜಾರಿ ಹಾಗೂ ಬನ್ನಂಜೆ ರಾಜಾನ ಸಹಚರ ಮನೀಶ್ ಶೆಟ್ಟಿ ಕೊಲೆ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವುದರಲ್ಲಿ ಕೇಂದ್ರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗೆ ಹತ್ಯೆಗೆ ಕಾರಣವೇನು ಅನ್ನೋದರ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಪ್ರಾಥಮಿಕವಾಗಿ ಉಡುಪಿಯ ಹಿರಿಯಡ್ಕ ಸಮೀಪ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಮಂಗಳೂರಿನ ರೌಡಿ ಶೀಟರ್ ಕಿಶೋರ್ ಅಲಿಯಾಸ್ ಕಿಶನ್ ಹತ್ಯೆ ನಡೆದಿತ್ತು. ಇದೇ ಸೇಡಿನಿಂದ ಕೊಲೆ ನಡೆದಿರುವ ವಿಚಾರ ಬಯಲಾಗಿದೆ.
ಮಂಗಳೂರು ಹಾಗೂ ಉಡುಪಿಯಲ್ಲಿ ಕಿಶನ್ ತನ್ನದೇ ಪ್ರಾಬಲ್ಯ ಸ್ಥಾಪಿಸಿದ್ದ. ಹಾಗೆ ರಿಯಲ್ ಎಸ್ಟೇಟ್ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ, ಹೀಗಾಗಿ ಮನೀಶ್ ಶೆಟ್ಟಿಗೆ ಅಡ್ಡವಾಗಿ ಬಂದ ಕಾರಣ ತನ್ನ ಸಹಚರರ ಮೂಲಕ ಕಿಶನ್ ನನ್ನು ಕೊಲೆ ಮಾಡಿಸಲಾಗಿತ್ತು. ರವಿ ಪೂಜಾರಿ ಬಂಧನದ ಬಳಿಕ ಹಾಗೂ ಮುತ್ತಪ್ಪ ರೈ ಸಾವಿನ ನಂತರ ಮನೀಶ್ ಶೆಟ್ಟಿ ಮೆರದಾಟ ಮೀತಿ ಮೀರಿತ್ತು ಎನ್ನಲಾಗಿದೆ. ಹೀಗಾಗಿ ಈತನನ್ನ ಮುಗಿಸಲು ವಿಕ್ಕಿ ಶೆಟ್ಟಿ ಗ್ಯಾಂಗ್ ಫ್ಲಾನ್ ಮಾಡಿ ಶಶಿಕಿರಣ ,ಅಕ್ಷಯ್, ನಿತ್ಯ, ಗಣೇಶಗೆ ಸುಫಾರಿ ಕೊಟ್ಟಿದ್ದರು ಎನ್ನಲಾಗಿದೆ.
ಇನ್ನು ತನಿಖೆ ವೇಳೆ ಹಂತಕರ ಸ್ಕೆಚ್ ಬಯಲು: ಮನೀಶ್ ಶೆಟ್ಟಿಯನ್ನ ಕೊಲೆ ಮಾಡುವ ಮೊದಲು ಹಂತರು ಗಾಂಧಿನಗರ ಬಳಿಯಿರುವ ಲಾಡ್ಜ್ ನಲ್ಲಿ ಹತ್ಯೆಗೆ ಫ್ಲಾನ್ ರೂಪಿಸಿದ್ದಾರೆ. ತದ ನಂತರ ಮೂವರು ಆರೋಪಿಗಳು ಒಂದೇ ಬೈಕಿನಲ್ಲಿ ಬಂದು, ಆರೋಪಿ ನಿತ್ಯಾ ಸಿಂಗಲ್ ಬ್ಯಾರಲ್ ಗನ್ ಬೆನ್ನ ಹಿಂದೆ ಬ್ಯಾಟ್ ರೀತಿ ಇಟ್ಟು ಕೊಂಡಿದ್ದಾನೆ. ತದ ನಂತರ ಅಕ್ಷಯ್ ಸುಮಾರು ಏಳು ಗಂಟೆಗೆ ಬಾರ್ನ ಮುಂಭಾಗವೇ ಮಾರಕಾಸ್ತ್ರದೊಂದಿಗೆ ಅವಿತಿದ್ದ. ಮೊದಲು ನಿತ್ಯಾ ಲೇಡಿಸ್ ಡುಯೆಟ್ ಬಾರ್ ಬಳಿ ನಿಂತಿದ್ದ ಮನೀಷ್ ಮೇಲೆ ಫೈರಿಂಗ್ ಮಾಡ್ತಾನೆ. ತದನಂತರ ಮನೀಶ್ ಎರಡು ಹೆಜ್ಜೆ ಇಡುವಾಗಲೇ ಅಕ್ಷಯ್ ಮಾರಕಾಸ್ತ್ರಗಳಿಂದ ನಾಲ್ಕು ಬಾರಿ ಕುತ್ತಿಗೆಗೆ ಅಟ್ಯಾಕ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಸದ್ಯ ಕೇಂದ್ರ ವಿಭಾಗ ಪೊಲೀಸರು ಪ್ರಕರಣದಲ್ಲಿ ವಿಕ್ಕಿ ಶೆಟ್ಟಿ ಗ್ಯಾಂಗ್ ಕೈವಾಡ ಇರುವ ಕಾರಣ ಇನ್ನಷ್ಟು ಆರೋಪಿಗಳಿಗೆ ಶೋಧ ಮುಂದುವರೆಸಿದ್ದಾರೆ. ಹಾಗೆ ಬಂಧಿತ ಆರೋಪಿಗಳಿಂದ ಹಲವಾರು ಮಾಹಿತಿ ಕಲೆಹಾಕಿದ್ದಾರೆ.