ETV Bharat / state

ಗೃಹಿಣಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಕೋಟ್ಯಂತರ ರೂ. ವಸೂಲಿ ಮಾಡಿದ್ದ ಚಾಲಾಕಿ ಲೇಡಿ ಅಂದರ್​ - ಬೆಂಗಳೂರು ಲೇಟೆಸ್ಟ್ ನ್ಯೂಸ್

ತನ್ನ ಹೆಂಡತಿ ಶೀತಲ್ (ಹೆಸರು ಬದಲಾಯಿಸಲಾಗಿದೆ)ರಿಂದ ಮಾಜಿ ಗೆಳೆಯ ಹಾಗೂ ಆತನ ಸ್ನೇಹಿತೆ ವಿಡಿಯೋ ಇದೆ ಎಂದು ಬೆದರಿಸಿ ಬ್ಲ್ಯಾಕ್​​ಮೇಲ್ ಮಾಡಿ ಕೋಟ್ಯಂತರ ರೂಪಾಯಿ‌ ವಸೂಲಿ ಮಾಡಿದ್ದರು ಎಂದು ಪತಿ ಆರೋಪಿಸಿದ್ದರು. ಸದ್ಯ ಈ ಪ್ರಕರಣದ ಆರೋಪಿ ಮಹಿಳೆಯನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Lady arrested who put threat to another lady by using privet videos
ಖಾಸಗಿ ವೀಡಿಯೋ ಇಟ್ಟುಕೊಂಡು ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದ್ದ ಖತರ್​ನಾಕ್ ಲೇಡಿ ಅರೆಸ್ಟ್
author img

By

Published : Nov 15, 2020, 10:24 AM IST

ಬೆಂಗಳೂರು: ಮಾಜಿ ಗೆಳೆಯನೊಂದಿಗೆ ಕಳೆದ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಗೃಹಿಣಿಯಿಂದ ಕೋಟಿಗಟ್ಟಲೇ ವಂಚಿಸಿದ್ದ ಖತರ್​ನಾಕ್ ಮಹಿಳೆಯನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತನ್ನ ಹೆಂಡತಿಯಿಂದ 1.25 ಕೋಟಿ ರೂಪಾಯಿ ಹಣ ವರ್ಗಾಯಿಸಿಕೊಂಡಿರುವುದಾಗಿ ಪತಿ ನೀಡಿದ ದೂರಿನ ಮೇರೆಗೆ ವಂಚಕಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ತನ್ನ ಹೆಂಡತಿ ಶೀತಲ್ (ಹೆಸರು ಬದಲಾಯಿಸಲಾಗಿದೆ)ರಿಂದ ಮಾಜಿ ಗೆಳೆಯ ಹಾಗೂ ಆತನ ಸ್ನೇಹಿತೆ ಖಾಸಗಿ ವಿಡಿಯೋ ಇದೆ ಎಂದು ಬೆದರಿಸಿ ಬ್ಲ್ಯಾಕ್​​ಮೇಲ್ ಮಾಡಿ ಕೋಟ್ಯಂತರ ರೂಪಾಯಿ‌ ವಸೂಲಿ ಮಾಡಿದ್ದರು ಎಂದು ಸಂತ್ರಸ್ತೆಯ ಪತಿ ಆರೋಪಿಸಿದ್ದರು.

ಘಟನೆ ಹಿನ್ನೆಲೆ: ಮದುವೆ‌ ಮುನ್ನ ಶೀತಲ್ ತನ್ನ ಕಾಲೇಜು ದಿನಗಳಲ್ಲಿ ಮಹೇಶ್ ಎಂಬುವನನ್ನು ಪ್ರೀತಿಸುತ್ತಿದ್ದಳು. ಅನಿವಾರ್ಯ ಕಾರಣಗಳಿಂದ ಶೀತಲ್ ಉದ್ಯಮಿವೋರ್ವನ ಜೊತೆ ಮದುವೆಯಾಗಿದ್ದರಿಂದ, ಇವರಿಬ್ಬರ ಸಂಪರ್ಕ ತಪ್ಪಿತ್ತು. ಕಳೆದ ವರ್ಷ ಜುಲೈನಲ್ಲಿ ಮಹೇಶ್ ಮಾಜಿ ಗೆಳತಿ ಶೀತಲ್​​ಗೆ ಸಂದೇಶ ರವಾನಿಸಿದ್ದ. ‌ಕಾಲ‌ ಕ್ರಮೇಣ ಇಬ್ಬರು ಪರಸ್ಪರ ಚಾಟ್ ಮಾಡಿಕೊಂಡಿದ್ದಾರೆ. ನಂತರ ಒಮ್ಮೆ‌ ಮುಖಾಮುಖಿಯಾಗಿದ್ದರು. ಇದಾದ ಬಳಿಕ ಆರೋಪಿ (ಮಹಿಳೆ), ಮೆಸೇಜ್ ಮಾಡಿ ಶೀತಲ್ ಅನ್ನು ಪರಿಚಯ ಮಾಡಿಕೊಂಡಿದ್ದಳು.

ನಿನ್ನ ಮಾಜಿ ಪ್ರಿಯಕರ ನನ್ನ ಸ್ನೇಹಿತನಾಗಿದ್ದಾನೆ ಎಂದು ಪರಿಚಯಿಸಿಕೊಂಡು ಶೀತಲ್​​ನ ಗೆಳತಿಯಾಗಿದ್ದಾಳೆ‌. ಶೀತಲ್​ಗೆ ಫೋಟೋ ಕಳುಹಿಸುವಂತೆ ಆರೋಪಿ ಕೇಳಿಕೊಂಡಿದ್ದಾಳೆ. ಆದ್ರೆ ಫೋಟೋ ನೀಡಲು ಶೀತಲ್ ನಿರಾಕರಿಸಿದ್ದಳು. ಅಲ್ಲಿಂದ ಬ್ಲ್ಯಾಕ್​​ಮೇಲ್ ಶುರುವಾಗಿತ್ತು. ಎಕ್ಸ್ ಬಾಯ್ ಫ್ರೆಂಡ್ ಮಹೇಶ್ ಜೊತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೋಗಳು ನನ್ನ ಬಳಿಯಿವೆ. ಸೋಷಿಯಲ್ ಮೀಡಿಯಾದಲ್ಲಿ ಹಾಕಬಾರದೆಂದರೆ ಹಣ‌ ನೀಡುವಂತೆ ಪೀಡಿಸಿ ಹಂತ ಹಂತವಾಗಿ ಒಂದೂವರೆ ವರ್ಷದಿಂದ ಸುಮಾರು 1.25 ಕೋಟಿ‌ ರೂ. ವಸೂಲಿ‌ ಮಾಡಿದ್ದಳು ಎಂದು ಪೊಲೀಸರಿಗೆ ದೂರುದಾರರು ತಿಳಿಸಿದ್ದರು.

ಸದ್ಯ ಆ ವಂಚಕಿಯನ್ನು ಸೆರೆಹಿಡಿಯುವಲ್ಲಿ ವೈಟ್ ಫೀಲ್ಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.