ETV Bharat / state

ಸಿಡಿ ಪ್ರಕರಣದಲ್ಲಿ ಯುವತಿ ಸೇರಿ ಮೂವರು ವಶಕ್ಕೆ?

author img

By

Published : Mar 14, 2021, 5:07 PM IST

Updated : Mar 14, 2021, 5:24 PM IST

ಸಿಡಿ ಪ್ರಕರಣದಲ್ಲಿ ಯುವತಿ ಸೇರಿ ಮೂವರು ವಶಕ್ಕೆ.!?

17:04 March 14

ಸಿಡಿ ಪ್ರಕರಣದಲ್ಲಿ ಯುವತಿ ಸೇರಿ ಮೂವರು ವಶಕ್ಕೆ?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತೆ ಸೇರಿದಂತೆ ಮೂವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ವಶಕ್ಕೆ‌ ಪಡೆದಿದೆ ಎನ್ನಲಾಗಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಸಿಡಿಯಲ್ಲಿರುವ ಯುವತಿ ಹಾಗೂ ಕಿಂಗ್ ಪಿನ್ ಎನ್ನಲಾದ ಇಬ್ಬರು ಸೇರಿದಂತೆ‌ ಮೂವರನ್ನು ಹೈದರಬಾದ್​ನಲ್ಲಿ ವಶಕ್ಕೆ‌ ಪಡೆದಿರುವ ಸಾಧ್ಯತೆಯಿದೆ. ಈ ಮೂವರನ್ನು ಸದ್ಯ ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  

ಇಂದು ಸಂಜೆ 7 ಗಂಟೆ ಸುಮಾರಿಗೆ ಮಡಿವಾಳದ ಟೆಕ್ನಿಕಲ್ ಸೆಂಟರ್​ಗೆ ಕರೆ ತರುವ ಸಾಧ್ಯತೆಯಿದೆ. ಯುವತಿಯ ಭದ್ರತೆಗಾಗಿ ಮೂವರು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್​ಆರ್​ಪಿ ತುಕಡಿ ನಿಯೋಜನೆಗೆ ಸಿದ್ಧತೆ ನಡೆಸಿದೆ.

Last Updated : Mar 14, 2021, 5:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.