ಬೆಂಗಳೂರು: ಭೂಗತ ಜಗತ್ತಿನ ನಂಟು ಹೊಂದಿದ್ದ ಲೇಡಿಸ್ ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ನಗರ ಕೇಂದ್ರ ವಿಭಾಗದ ವಿಶೇಷ ಪೊಲೀಸ್ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ.
ಬಂಧನ ಬಳಿಕ ಮಹಜರಿಗೆ ಕರೆದುಕೊಂಡು ಹೋಗಿದ್ದಾಗ ನಾಲ್ವರು ಆರೋಪಿಗಳ ಪೈಕಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದ ಇಬ್ಬರು ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸದ್ಯ ಇಬ್ಬರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಶಶಿಕಿರಣ ಹಾಗೂ ಬಂಟ್ವಾಳದ ಅಕ್ಷಯ್ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ಅವರಿಗೆ ಗುಂಡು ಹಾರಿಸಿದ್ದಾರೆ. ಇದೀಗ ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಕರಣ ಮತ್ತಿಬ್ಬರು ಆರೋಪಿಗಳಾದ ನಿತ್ಯ ಹಾಗೂ ಗಣೇಶ್ ಪೊಲೀಸರ ವಶದಲ್ಲಿದ್ದಾರೆ. ಕೃತ್ಯ ಎಸಗಿ ಗಾಂಧಿನಗರದ ಲಾಡ್ಜ್ವೊಂದರಲ್ಲಿ ಉಳಿದುಕೊಂಡಿದ್ದ ಆರೋಪಿಗಳು ಖಚಿತ ಮಾಹಿತಿ ಮೇರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮನೀಶ್ ಶೆಟ್ಟಿ ಕೊಲೆಗೆ ನಾಲ್ಕು ತಿಂಗಳಿಂದ ಸಂಚು ರೂಪಿಸುತ್ತಿದ್ದರು. ಕಳೆದ ಎರಡು ದಿನಗಳ ಬಿಗ್ರೇಡ್ ರಸ್ತೆಯಲ್ಲಿರುವ ಲೇಡಿಸ್ ಬಾರ್ ಕಾರಿನಲ್ಲಿ ಮನೀಶ್ ಶೆಟ್ಟಿ ಬಂದಿದ್ದಾನೆ. ಈ ವೇಳೆ, ಮೋಟಾರ್ ಸೈಕಲ್ ನಲ್ಲಿ ಗಣೇಶ್ ಹಾಗೂ ನಿತ್ಯ ಬಂದಿದ್ದಾರೆ. ಗನ್ ನಿಂದ ನಿತ್ಯ ಪೈರ್ ಮಾಡುತ್ತಿದ್ದಂತೆ ಅಲ್ಲೇ ಇದ್ದ ಶಶಿಕಿರಣ್ ಮಚ್ಚಿನಿಂದ ಮನೀಶ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಅದೇ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ.
ಕೊಲೆ ಪ್ರಕರಣ ಬಳಿಕ 9 ವಿಶೇಷ ತಂಡ ರಚಿಸಿ ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದಾಗ ಆರೋಪಿಗಳು ಗಾಂಧಿನಗರ ಲಾಡ್ಜ್ ಉಳಿದು ಕೊಂಡಿರುವುದು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.