ಬೆಂಗಳೂರು : ಅರಣ್ಯ ಇಲಾಖೆಯ 2019-20 ರ ಸಿಬ್ಬಂದಿ ವರದಿ ಪ್ರಕಾರ, ಇಲಾಖೆಯಲ್ಲಿ ಶೇ. 12.24 ರಷ್ಟು ಮಾತ್ರ ಮಹಿಳಾ ಸಿಬ್ಬಂದಿಗಳಿದ್ದು, ಶೇ. 87.75 ರಷ್ಟು ಪುರುಷ ಸಿಬ್ಬಂದಿ ಇದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು 12,128 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 7,855 ಪುರುಷ ಸಿಬ್ಬಂದಿ, 1,096 ಮಹಿಳಾ ಸಿಬ್ಬಂದಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯ 1,407 ಮತ್ತು ಪರಿಶಿಷ್ಟ ಪಂಗಡದ 836 ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಒಟ್ಟು 3,177 ಹುದ್ದೆಗಳು ಖಾಲಿ ಉಳಿದಿವೆ.
ಅರಣ್ಯ ಇಲಾಖೆಯ 4 ವರ್ಗಗಳಲ್ಲಿ ಇರುವ ಸಿಬ್ಬಂದಿ ವಿವರ:
1 | ಎ | 5 | 511 | 360 | 25 | 385 | 126 | 6.5% |
2 | ಬಿ | 9 | 856 | 581 | 142 | 723 | 133 | 19.6% |
3 | ಸಿ | 28 | 8,252 | 5,360 | 645 | 6,035 | 2,217 | 11% |
4 | ಡಿ | 8 | 2,509 | 1,524 | 284 | 1,808 | 701 | 15.7% |
ಅರಣ್ಯ ಇಲಾಖೆಯ ಮಾನವಸಂಪನ್ಮೂಲ ವಿಭಾಗದ ಅಂಕಿ ಅಂಶಗಳ ಪ್ರಕಾರ, ಬಿ ವರ್ಗದಲ್ಲಿ ಶೇ 19.6 ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಎ ವರ್ಗದಲ್ಲಿ ಕೇವಲ ಶೇ. 6.5% ರಷ್ಟು ಮಾತ್ರ ಮಹಿಳಾ ಸಿಬ್ಬಂದಿ ಇದ್ದಾರೆ.
ತೆಲಂಗಾಣ ರಾಜ್ಯ ಆಗಲಿ ಸ್ಫೂರ್ತಿ :
ತೆಲಂಗಾಣ ಅರಣ್ಯ ಇಲಾಖೆಯ ಸಿಬ್ಬಂದಿ ವಿವರದ ಪ್ರಕಾರ 2,362 ಅರಣ್ಯ ಬೀಟ್ ಆಫೀಸರ್ ಹುದ್ದೆಗಳ ಪೈಕಿ, 995 ಮಹಿಳಾ ಸಿಬ್ಬಂದಿ ಇದ್ದಾರೆ. ಒಟ್ಟು 254 ರೇಂಜ್ ಆಫೀಸರ್ಗಳ ಪೈಕಿ, 49 ಮಹಿಳಾ ಸಿಬ್ಬಂದಿ ಹಾಗೂ ಉನ್ನತ ಹುದ್ದೆಗಳಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ. ಹೀಗಾಗಿ, ರಾಜ್ಯದ ಆರಣ್ಯ ಇಲಾಖೆಯಲ್ಲೂ ಇದೇ ರೀತಿ ಮಹಿಳಾ ಸಿಬ್ಬಂದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ.