ETV Bharat / state

ಪಠ್ಯ ಪುಸ್ತಕದಲ್ಲಿ ಬದಲಾವಣೆ ಸಹಜ, ಇದ್ರಲ್ಲಿ ರಾಜಕೀಯ ಬೆರೆಸುವುದು ಬೇಡ: ಕುಮಾರ್ ಬಂಗಾರಪ್ಪ - ಟಿಪ್ಪು ವಿಷಯ ಕೈ ಬಿಡುವ ಚಿಂತನೆಗೆ ಕುಮಾರ್ ಬಂಗಾರಪ್ಪ ಸಮರ್ಥನೆ

ನಾವು ಹಿಂದೆ ಓದಿರುವ ತಿರುಕನ ಕನಸು, ಚಂದಮಾಮನ ಕಥೆಗಳು ಇಂದಿನ ಪಠ್ಯದಲ್ಲಿ ಇಲ್ಲ. ಬದಲಾವಣೆ ನಿರಂತರವಾಗಿ ನಡೆಯಲಿದೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಅಭಿಪ್ರಾಯಪಟ್ಟರು.

ಕುಮಾರ್ ಬಂಗಾರಪ್ಪ
author img

By

Published : Oct 30, 2019, 8:30 PM IST

ಬೆಂಗಳೂರು: ಪಠ್ಯಪುಸ್ತಕಗಳಲ್ಲಿ ಬದಲಾವಣೆ ನಿರಂತರವಾಗಿ ನಡೆಯುತ್ತಿರುತ್ತದೆ. ನಾವು ಹಿಂದೆ ಓದಿರುವ ಪಠ್ಯ ಇಂದು ಇಲ್ಲ. ಹಾಗಾಗಿ ಸರ್ಕಾರದ ನಿಲುವನ್ನು ರಾಜಕೀಯಗೊಳಿಸದೇ ಮುಂದೆ ಹೋಗುವುದು ಒಳಿತು ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ

ಶಾಸಕರ ಭವನದೆದುರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಓದಿದ್ದ ತಿರುಕನ ಕನಸು, ಚಂದಮಾನ ಕಥೆಗಳು ಇಂದಿನ ಪಠ್ಯದಲ್ಲಿಲ್ಲ. ಬದಲಾವಣೆ ನಿರಂತರವಾಗಿ ನಡೆಯಲಿದೆ. ಹಾಗಾಗಿ ಟಿಪ್ಪು ವಿಷಯವನ್ನು ಪಠ್ಯದಿಂದ ತೆಗೆದುಹಾಕಲಾಗುತ್ತದೆ. ಸ್ವಾಮಿ ವಿವೇಕಾನಂದರ ಪಠ್ಯ ಹಾಕಿದ್ದಾರೆ, ರಾಮಕೃಷ್ಣ ಪರಮಹಂಸ ಪಠ್ಯ ಹಾಕಿದ್ದಾರೆ ಎನ್ನುವುದು ಸರಿಯಲ್ಲ. ಇದನ್ನು ನಾವೆಲ್ಲಾ ಓದಿದ್ದೇವೆ. ಇದನ್ನೇ ಈಗ ಕೇಸರೀಕರಣ ಎಂದು ಆರೋಪಿಸುತ್ತಾರೆ. ಇಂತಹ ವಿಷಯವನ್ನೆಲ್ಲಾ ಬಿಟ್ಟು ಮುಂದೆ ಹೋಗುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದ್ರು.

ಇತಿಹಾಸ ಸಂಶೋಧಕರ ನಿಲುವು ಒಪ್ಪಬೇಕು:

ಟಿಪ್ಪು, ನಮ್ಮ ರಾಜ್ಯದಲ್ಲಿ ಆಡಳಿತ ಮಾಡಿದಾತ. ಬ್ರಿಟಿಷರ ವಿರುದ್ಧ ಹೋರಾಡಿದವರು. ಅದನ್ನು ಇತಿಹಾಸದ ಪುಟದಿಂದ ಕಿತ್ತು ಹಾಕಲು ಯಾರೇ ಬಂದರೂ ಆಗಲ್ಲ. ಇತಿಹಾಸದಲ್ಲಿ ಯಾರಿಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎನ್ನುವುದು ಅವರವರಿಗೆ ಬಿಟ್ಟ ವಿಚಾರವಾಗಿದೆ. ಬ್ರಿಟಿಷರು ಅವರಿಗೆ ಬೇಕಾದ ರೀತಿ ಟಿಪ್ಪು ಇತಿಹಾಸವನ್ನು ಬರೆದುಕೊಂಡು ಹೋಗಿದ್ದಾರೆ. ಹಾಗಾಗಿ ನಮ್ಮ ಇತಿಹಾಸ ಸಂಶೋಧಕರು ಅಂತಿಮವಾಗಿ ಏನು ಹೇಳುತ್ತಾರೋ ಅದನ್ನು ಒಪ್ಪಿಕೊಂಡು ಹೋಗುವುದು ಒಳ್ಳೆಯದು ಎಂದು ಸಲಹೆ ಕೊಟ್ಟರು.

Intro:

ಬೆಂಗಳೂರು: ಪಠ್ಯಪುಸ್ತಕಗಳಲ್ಲಿ ಬದಲಾವಣೆ ನಿರಂತರವಾಗಿ ನಡೆಯುತ್ತಿರುತ್ತದೆ ನಾವು ಓದಿದ ಪಠ್ಯ ಇಂದು ಇಲ್ಲ ಹಾಗಾಗಿ ಇದನ್ನು ರಾಜಕೀಯಗೊಳಿಸದೇ ಮುಂದೆ ಹೋಗುವುದು ಒಳಿತು ಎಂದು ಟಿಪ್ಪು ವಿಷಯ ಪಠ್ಯದಿಂದ ತೆಗೆದುಹಾಕುವ ಕುರಿತು ಸರ್ಕಾರದ ಚಿಂತನೆಯನ್ನು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಓದಿದ್ದ ತಿರುಕನ ಕನಸು, ಚಂದಮಾನ ಕಥೆಗಳು ಇಂದಿನ ಪಠ್ಯದಲ್ಲಿ ಇಲ್ಲ, ಬದಲಾವಣೆ ನಿರಂತವಾಗಿ ನಡೆಲಿದೆ ಹಾಗಾಗಿ ಟಿಪ್ಪು ವಿಷಯವನ್ನು ಪಠ್ಯದಿಂದ ತೆಗೆದುಹಾಕಲಾಗುತ್ತದೆ, ಸ್ವಾಮಿ ವಿವೇಕಾನಂದರ ಪಠ್ಯ ಹಾಕಿದ್ದಾರೆ, ರಾಮಕೃಷ್ಟ ಪರಮಹಂಸ ಪಠ್ಯ ಹಾಕಿದ್ದಾರೆ ಎನ್ನುವುದು ಸರಿಯಲ್ಲ.ಇದನ್ನು ನಾವೆಲ್ಲಾ ಓದಿದ್ದೇವೆ ಈಗ ಕೇಸರೀಕರಣ ಎಂದು ಆರೋಪಿಸುತ್ತಾರೆ ಇಂತಹ ವಿಷಯವನ್ನೆಲ್ಲಾ ಬಿಟ್ಟು ಮುಂದೆ ಹೋಗುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ ಎಂದು ಪಠ್ಯ ಪುಸ್ತಕ ಪರಿಷ್ಕರಣೆ ಪರ ಬ್ಯಾಟಿಂಗ್ ಮಾಡಿದರು.

ಇತಿಹಾಸಗಳ ಅಧ್ಯಯನ ನಿರಂತರವಾಗಿ ನಡೆಯಬೇಕು, ರಾಜಮಹಾರಾಜರು ಬಂದು ಹೋಗಲಿದ್ದಾರೆ, ಅದಕ್ಕಾಗಿಯೇ ಒಂದು ಇಲಾಖೆ ಇದೆ, ಯಾವುದೋ ಒಂದು ವಿಚಾರ ಒಂದು ವಿಷಯವಾಗಿ ಇರಬಾರದು ಎನ್ನುವುದು ಸರ್ಕಾರದ, ಪಕ್ಷದ ನಿಲುವಾಗಿದೆ ಅದು ಕೇವಲ ಟಿಪ್ಪುಗೆ ಸೀಮಿತ ಅಲ್ಲ, ಒಂದೊಂದು ಸರ್ಕಾರ ಒಂದೊಂದು ಜಾತಿ,ಧರ್ಮ, ವಾದವನ್ನು ಇಟ್ಟುಕೊಂಡು ಹೋದಾಗ ವ್ಯವಸ್ಥೆಯನ್ನು ಹಾಳು ಮಾಡಲಿವೆ, ಇತಿಹಾಸ ಎನ್ನುವುದು ದೇಶದ ದೃಷ್ಟಿಯಿಂದ ನೋಡುವ ವಿಚಾರವೇ ಹೊರತು ಒಂದು ಜಾತಿ,ಧರ್ಮಕ್ಕೆ ಸೀಮಿತವಾಗುವ ವಿಷಯವಾಗಾರದು ಎಂದು ಅಭಿಪ್ರಾಯಪಟ್ಟರು.

ಇತಿಹಾಸವನ್ನು ತಿರುಚಲು ಯಾರಿಂದಲೂ ಸಾದ್ಯವಿಲ್ಲ, ಇತಿಹಾಸ ಇತಿಹಾಸವೇ, ಟಿಪ್ಪು, ಮೈಸೂರು ಮಹಾರಾಜರು, ಬ್ರಿಟೀಷರ ಇತಿಹಾಸ ಇದೆ ಈ ಸಂಬಂಧ ವಾದಗಳು ಬೇರೆ ಬೇರೆ ಇದೆ, ಬ್ರಿಟೀಷ್ ಪುಸ್ತಕದಲ್ಲಿ ಟಿಪ್ಪು ಇತಿಹಾಸ ಬೇರೆ ಇದೆ, ನಮ್ಮ ಇತಿಹಾಸಗಳು ಬೇರೆ, ಬರವಣಿಗೆ ಬೇರೆ ಇವೆ, ದಾಖಲಾತಿಗಳು ಬೇರೆ ಇವೆ, ಇದನ್ನು ಸರಿಪಮಾಡುವ ಸಂದರ್ಭದಲ್ಲಿ ಇದೆಲ್ಲವೂ ಬರಬಹುದು ಇದನ್ನು ರಾಜಕೀಯಕರಣಗೊಳಿಸಬಾರದು ಎಂದರು.

ಇತಿಹಾಸ ಸಂಶೋಧಕರ ನಿಲುವು ಒಪ್ಪಬೇಕು:

ಟಿಪ್ಪು, ನಮ್ಮ ರಾಜ್ಯದ ಆಡಳಿತ ಮಾಡಿದ ರಾಜ, ಬ್ರಿಟೀಷರ ವಿರುದ್ಧ ಹೋರಾಟಡಿದವರು, ಅದನ್ನು ಇತಿಹಾಸದ ಪುಟದಿಂದ ಕಿತ್ತಾಕಲು ಯಾರೇ ಬಂದರೂ ಆಗಲ್ಲ, ಇತಿಹಾಸದಲ್ಲಿ ಯಾರಿಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎನ್ನುವುದು ಅವರವರಿಗೆ ಬಿಟ್ಟ ವಿಚಾರ. ಬ್ರಿಟೀಷರು ಅವರಿಗೆ ಬೇಕಾದರ ರೀತಿ ಟಿಪ್ಪು ಇತಿಹಾಸವನ್ನು ಬರೆದುಕೊಂಡು ಹೋಗಿದ್ದಾರೆ.ಪ್ರಪಂಚದಾದ್ಯಂತ ಭಾರತದ ಬಗ್ಗೆ ಏನು ಹೇಳಬೇಕೋ ಹಾಗೆ ಹೇಳಿಕೊಂಡು ಹೋಗಿದ್ದಾರೆ ಆದರೆ ನಡೆದಿದ್ದೇ ಬೇರೆ, ಅದನ್ನು ಇವತ್ತೀಗೂ ನಾವು ಒಪ್ಪಲ್ಲ, ಅವರು ಹೇಳಿದ್ದೇ ಬೇರೆ ಮಾಡಿದ್ದೇ ಬೇರೆ, ಆಗಿದ್ದೇ ಬೇರೆ, ಹಾಗಾಗಿ ನಮ್ಮ ಇತಿಹಾಸ ಸಂಶೋಧಕರ ಅಂತಿಮವಾಗಿ ಏನು ಹೇಳುತ್ತಾರೋ ಅದರ ಒಪ್ಪಿಕೊಂಡು ಹೋಗುವುದು ಒಳ್ಳೆಯದು ಎಂದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.