ಬೆಂಗಳೂರು: ಕರ್ನಾಟಕದ ಕೆಲವೊಂದು ಜಿಲ್ಲೆಗಳು ಈಗಾಗಲೇ ಅನ್ಲಾಕ್ ಆಗಿದ್ದು, ಜನಜೀವನ ಈ ಹಿಂದಿನಂತೆ ಪುನಾರಂಭಗೊಳ್ಳುತ್ತಿದೆ. ಇದರ ಮಧ್ಯೆ ಕರ್ನಾಟಕ ಸರ್ಕಾರ ಅಂತಾರಾಜ್ಯ ಸಾರಿಗೆ ಮತ್ತೆ ಪುನಾರಂಭ ಮಾಡಲು ಮುಂದಾಗಿದ್ದು, ಅದರ ಪ್ರಥಮ ಹೆಜ್ಜೆಯಾಗಿ ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶಕ್ಕೆ ಬಸ್ ಸೇವೆ ಮರು ಆರಂಭ ಮಾಡಿದೆ.
-
Karnataka State Road Transport Corporation will restart bus ops to Andhra Pradesh & Telangana as per guidelines of respective States from 22nd June based on traffic density & need with 50% seating capacity. Services to Andhra Pradesh will be from 6 am so as to reach within 6 pm. pic.twitter.com/v3RHpRozTr
— ANI (@ANI) June 21, 2021 " class="align-text-top noRightClick twitterSection" data="
">Karnataka State Road Transport Corporation will restart bus ops to Andhra Pradesh & Telangana as per guidelines of respective States from 22nd June based on traffic density & need with 50% seating capacity. Services to Andhra Pradesh will be from 6 am so as to reach within 6 pm. pic.twitter.com/v3RHpRozTr
— ANI (@ANI) June 21, 2021Karnataka State Road Transport Corporation will restart bus ops to Andhra Pradesh & Telangana as per guidelines of respective States from 22nd June based on traffic density & need with 50% seating capacity. Services to Andhra Pradesh will be from 6 am so as to reach within 6 pm. pic.twitter.com/v3RHpRozTr
— ANI (@ANI) June 21, 2021
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಈ ಮಹತ್ವದ ನಿರ್ಧಾರ ಹೊರಡಿಸಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಕೋವಿಡ್ ಮಾರ್ಗಸೂಚಿ ನಿಯಮದೊಂದಿಗೆ ಬಸ್ ಸೇವೆ ನಾಳೆಯಿಂದ ಆರಂಭಗೊಳ್ಳಿಸುತ್ತಿದೆ. ಬಸ್ನಲ್ಲಿ ಶೇ 50ರಷ್ಟು ಆಸನ ಭರ್ತಿಗೆ ಸೂಚನೆ ನೀಡಲಾಗಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಮಾತ್ರ ಸೇವೆ ಲಭ್ಯವಿರಲಿದೆ. ಬಸ್ನಲ್ಲಿ ಪ್ರಯಾಣ ಮಾಡುವವರು ಕೋವಿಡ್ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ.
ಇದನ್ನೂ ಓದಿರಿ: Telangana Unlock: ಕರ್ನಾಟಕ, ಆಂಧ್ರಪ್ರದೇಶಕ್ಕೆ ಬಸ್ ಸೇವೆ ಪುನಾರಂಭ
ತೆಲಂಗಾಣದಲ್ಲಿ ಈಗಾಗಲೇ ಕೋವಿಡ್ ಲಾಕ್ಡೌನ್ ಸಂಪೂರ್ಣವಾಗಿ ತೆರವು ಮಾಡಲಾಗಿದ್ದು, ಎಲ್ಲಾ ಸೇವೆಗಳು ಆರಂಭಗೊಂಡಿವೆ. ಜತೆಗೆ ಅಂತಾರಾಜ್ಯ ಬಸ್ ಸೇವೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಇಂದಿನಿಂದ ಸಂಚಾರ ಸೇವೆ ಪುನಾರಂಭವಾಗಿದೆ. ತೆಲಂಗಾಣದಿಂದ ಆಂಧ್ರಕ್ಕೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಸ್ ಸೇವೆ ಇರಲಿದೆ. ಇತ್ತ ಕರ್ನಾಟಕಕ್ಕೂ ಬಸ್ ಸೇವೆ ಆರಂಭಗೊಂಡಿದ್ದು, ಕರ್ನಾಟಕ ಕೋವಿಡ್ ನಿಯಮದ ಅನುಸಾರವಾಗಿ ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಇಂದಿನಿಂದಲೇ ಟಿಎಸ್ಆರ್ಟಿಸಿ ಬಸ್ ಸಂಚಾರ ಪುನಾರಂಭವಾಗಿದೆ. ಬೆಳಗ್ಗೆ 5 ಗಂಟೆಯಿಂದ ಸಂಜೆ 7ರ ವರೆಗೆ ಬಸ್ಗಳು ಸಂಚರಿಸಲಿವೆ.