ETV Bharat / state

ಏಪ್ರಿಲ್​ 14ರ ನಂತರದ ಕೆಎಸ್​ಆರ್​ಟಿಸಿ ಟಿಕೆಟ್​ ರಿಸರ್ವೇಶನ್ ಕ್ಯಾನ್ಸಲ್ - ಲಾಕ್​ಡೌನ್​ ಮಂದುವರಿಕೆ

ಲಾಕ್​ಡೌನ್​ ಏಪ್ರಿಲ್​ 30ರ ವರೆಗೆ ಮುಂದುವರೆಯುವುದಾಗಿ ಘೋಷಣೆಯಾದ ಹಿನ್ನೆಲೆ ಕೆಎಸ್​ಆರ್​ಟಿಸಿ, ಸರ್ಕಾರದ ಮುಂದಿನ ಆದೇಶದವರೆಗೂ ರಿಸರ್ವೇಷನ್ ಅನ್ನು ರದ್ದುಗೊಳಿಸಿದೆ.

KSRTC
ಕೆಎಸ್​ಆರ್​ಟಿಸಿ
author img

By

Published : Apr 12, 2020, 10:22 AM IST

ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಇಡೀ ಭಾರತವನ್ನೇ ಏಪ್ರಿಲ್ 14 ರ ವರೆಗೆ ಲಾಕ್ ಡೌನ್ ಮಾಡಲಾಗಿತ್ತು. ಹೇಗಿದ್ದರೂ ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತೆ, ಎಂದಿನಂತೆ ಬಸ್ಸುಗಳ ಸಂಚಾರ ಇರುತ್ತೆ ಅನ್ನೋ ಕಾರಣಕ್ಕೆ ಕೆಎಸ್​ಆರ್​ಟಿಸಿ ಮುಂಗಡ ಕಾಯ್ದಿರಿಸುವ ಟಿಕೆಟ್​ ಬುಕ್ಕಿಂಗ್ ತೆರೆದಿತ್ತು. ಅಂತರಾಜ್ಯ ಸೇರಿದಂತೆ ಹಲವು ಜಿಲ್ಲೆಗಳಿಂದ ಟಿಕೆಟ್​ ರಿಸರ್ವೇಷನ್ ಮಾಡಿದ್ದರು.

ಆದರೆ ನಿನ್ನೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ ನಡೆಸಿದ ಬಳಿಕ ಲಾಕ್ ಡೌನ್ ಅನ್ನು ಏಪ್ರಿಲ್ 30ರ ವರೆಗೆ ಮುಂದುವರಿಯುವುದಾಗಿ ಘೋಷಿಸಲಾಯಿತು.‌‌ ಈ ನಿಟ್ಟಿನಲ್ಲಿ ಕೆಎಸ್​ಆರ್​ಟಿಸಿಯು ಮುಂದಿನ ಆದೇಶದವರೆಗೂ ರಿಸರ್ವೇಷನ್ ಅನ್ನು ರದ್ದುಗೊಳಿಸಿದೆ.

ಇನ್ನು ಏಪ್ರಿಲ್ 14 ರಿಂದ ಮುಂಗಡ ಟಿಕೆಟ್​ 5,200 ಟಿಕೆಟ್​ಗಳು ಬುಕ್ಕಿಂಗ್ ಆಗಿದ್ದು, ಇದರಲ್ಲಿ 4,600 ಟಿಕೆಟ್​ಗಳು ಏಪ್ರಿಲ್ 15ಕ್ಕೆ ಬುಕ್ಕಿಂಗ್ ಆಗಿವೆ. ಸದ್ಯ ಬುಕ್ಕಿಂಗ್ ಆಗಿರುವ ಎಲ್ಲಾ ಟಿಕೆಟ್​ ಗಳನ್ನು ರದ್ದುಗೊಳಿಸಿ ಹಣ‌ ವಾಪಸ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಟಿಕೆಟ್ ಬುಕ್ಕಿಂಗ್​ನಲ್ಲಿ ಬೆಂಗಳೂರಿಗೆ ಬರುವ ಮತ್ತು ಹೋಗುವ ಅಂತರರಾಜ್ಯ ಪ್ರಯಾಣಿಕರೇ ಹೆಚ್ಚು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.