ETV Bharat / state

ಕೆಎಸ್ಆರ್​ಟಿಸಿ ಸಿಬ್ಬಂದಿ ರಜೆಗೆ ಕತ್ತರಿ... ಪ್ರವಾಹ ಪರಿಸ್ಥಿತಿಗೆ ನೆರವಾಗುವಂತೆ ಸೂಚನೆ - Chief Minister's Secretary

ಪ್ರವಾಹ ಪೀಡಿತ ಸ್ಥಳಗಳಲ್ಲಿ ಘಟಕದ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಭಾಯಿಸಬೇಕು ಹಾಗೂ ರಜೆ ಮೇಲೆ ಯಾವ ಸಿಬ್ಬಂದಿಯೂ ತೆರಳಬಾರದು ಎಂದು ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಶಿವಯೋಗಿ ಕಳಸದ, ಕೆಎಸ್ಆರ್​ಟಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದ್ದಾರೆ.

ಕೆಎಸ್ಆರ್​ಟಿಸಿ ಸಿಬ್ಬಂದಿ ರಜೆ ಹಾಕುವಂತಿಲ್ಲ.. ಪ್ರವಾಹ ಪರಿಸ್ಥಿತಿ ನಿಭಾಯಿಸಲು ನೆರವಾಗಬೇಕು: ಶಿವಯೋಗಿ ಕಳಸದ ಸೂಚನೆ
author img

By

Published : Aug 9, 2019, 9:03 PM IST

ಬೆಂಗಳೂರು: ಪ್ರವಾಹ ಪೀಡಿತ ಸ್ಥಳಗಳಲ್ಲಿ ಘಟಕದ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಭಾಯಿಸಬೇಕು ಹಾಗೂ ರಜೆ ಮೇಲೆ ಯಾವ ಸಿಬ್ಬಂದಿಯೂ ತೆರಳಬಾರದು ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ, ಕೆಎಸ್ಆರ್​ಟಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದ್ದಾರೆ.

ಶಾಂತಿನಗರದಲ್ಲಿರುವ ಕೆಎಸ್ಆರ್​ಟಿಸಿ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ, ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಮೈಸೂರು, ಮಂಗಳೂರು, ಪುತ್ತೂರು, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಕೇಂದ್ರೀಯ ವಿಭಾಗ ಮತ್ತು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ/ವಿಭಾಗೀಯ ಸಂಚಲನಾಧಿಕಾರಿಗಳಿಗೆ, ಖುದ್ದು ದೂರವಾಣಿ ಕರೆ ಮಾಡಿ ಪ್ರವಾಹ ಪೀಡಿತ ಸ್ಥಳಗಳಲ್ಲಿನ ಬಸ್ ಕಾರ್ಯಾಚರಣೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದ್ರು.

ಈಗಾಗಲೇ ಪರಿಹಾರ ವಸ್ತುಗಳನ್ನು ಸಾಗಿಸಲು ಉಚಿತವಾಗಿ ಬಸ್​ಗಳನ್ನು ಒದಗಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ನೀಡಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಮುಂದಿನ ಆದೇಶದವರೆಗೆ ವ್ಯವಸ್ಥೆ ಮುಂದುವರಿಸಲು ಸೂಚಿಸಿದರು. ವಿಭಾಗ ಮಟ್ಟದಲ್ಲಿ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕ ವಹಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಹಾಗೂ ಬದಲಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವಾಗ ಸೂಕ್ತ ಮುಂಜಾಗೃತ ಕ್ರಮವಹಿಸುವಂತೆ ತಿಳಿಸಿದ್ರು.

ವಿಭಾಗಗಳ ಮಟ್ಟದಲ್ಲಿಯೂ 24*7 ನಿಯಂತ್ರಣ ಕೊಠಡಿ ಸ್ಥಾಪಿಸಿ, ವಿಪತ್ತು ನಿರ್ವಹಣಾ ತಂಡವನ್ನು ರಚಿಸಬೇಕು. ಕಾರ್ಯಾಚರಣೆಯ ಮೇಲೆ ನಿಗಾವಹಿ, ಪ್ರತಿ ಮೂರು ಗಂಟೆಗಳಿಗೊಮ್ಮೆ ವಿಭಾಗದಿಂದ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸುವಂತೆಯೂ ಕಳಸದ ಸೂಚಿಸಿದರು. ವಾರಾಂತ್ಯದ ಧೀರ್ಘಾವಧಿ ರಜೆ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ನೀಡುವುದು. ಬಸ್​ಗಳ ಕಾರ್ಯಾಚರಣೆಗೂ ಮೊದಲು ಸದರಿ ಮಾರ್ಗದಲ್ಲಿನ ರಸ್ತೆ, ಮಳೆ, ಸೇತುವೆ, ನೀರಿನ ಹರಿವು ಮುಂತಾದವುಗಳ ಬಗ್ಗೆ ಕೂಲಂಕಷ ಮಾಹಿತಿಯನ್ನು ಕ್ರೋಢಿಕರಿಸಿ, ನಂತರ ಬಸ್​ಗಳನ್ನ ಕಾರ್ಯಾಚರಣೆಗಿಳಿಸಲು ಅವರು ಸೂಚಿಸಿದರು.

ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ಚಿನ ಗಮನವಹಿಸಿ, ಪರಿಹಾರ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಲು ಅಗತ್ಯ ಕ್ರಮ, ವಾರಾಂತ್ಯ ಹೆಚ್ಚುವರಿ ಕಾರ್ಯಾಚರಣೆ, ಅನುಸೂಚಿ ರದ್ದತಿಯಾದಲ್ಲಿ ಪ್ರಯಾಣಿಕರಿಗೆ ಪ್ರಯಾಣ ದರದ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರನ್ನೊಳಗೊಂಡ ಯಾವುದೇ ಬಸ್​ ಪ್ರವಾಹ ಅತವಾ ಮಳೆಗೆ ಸಿಲುಕಿದಲ್ಲಿ ತಕ್ಷಣ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿ ತುರ್ತು ಅಗತ್ಯ ಕ್ರಮ ವಹಿಸಸುವುದು. ಕೇಂದ್ರ ಕಚೇರಿ ಅಥವಾ ವಿಭಾಗ ಮಟ್ಟದಲ್ಲಿ ಭದ್ರತಾ ಜಾಗೃತಾಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಿ, ಪರಿಸ್ಥಿತಿಯನ್ನು ಅವಲೋಕಿಸಿ ಮಾಹಿತಿ ಒದಗಿಸಬೇಕು ಎಂದು ಸೂಚನೆ ಶಿವಯೋಗಿ ಕಳಸದ್​ ಅಧಿಕಾರಿ ಮತ್ತು ಸಿಬ್ಬಂದಿಗೆ ನಿರ್ದೇಶನಗಳನ್ನು ನೀಡಿದರು.

Intro:

ಬೆಂಗಳೂರು:ಪ್ರವಾಹ ಪೀಡಿತ ಸ್ಥಳಗಳಲ್ಲಿ ವಿಭಾಗ/ಘಟಕ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಭಾಯಿಸಬೇಕು ಹಾಗು ರಜೆ ಮೇಲೆ ಯಾವ ಸಿಬ್ಬಂದಿಯೂ ತೆರಳಬಾರದು ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ ಕೆಎಸ್ಆರ್ ಟಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದ್ದಾರೆ.

ಶಾಂತಿನಗರದಲ್ಲಿರುವ ಕೆಎಸ್ಆರ್ ಟಿಸಿ ಕೇಂದ್ರ ಕಛೇರಿಯ ನಿಯಂತ್ರಣ ಕೊಠಡಿಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ ಭೇಟಿ ನೀಡಿದರು. ಕೇಂದ್ರ ಕಛೇರಿಯ ನಿಯಂತ್ರಣ ಕೊಠಡಿಯಲ್ಲಿ ಮೈಸೂರು (ಗ್ರಾಮಾಂತರ), ಮಂಗಳೂರು, ಪುತ್ತೂರು, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಕೇಂದ್ರೀಯ ವಿಭಾಗ ಮತ್ತು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ/ವಿಭಾಗೀಯ ಸಂಚಲನಾಧಿಕಾರಿಗಳಿಗೆ, ಖುದ್ದು ದೂರವಾಣಿ ಕರೆ ಮಾಡಿ ಪ್ರವಾಹ ಪೀಡಿತ ಸ್ಥಳಗಳಲ್ಲಿನ ಬಸ್ ಕಾರ್ಯಚರಣೆ, ಪರಿಹಾರ ಕ್ರಮಗಳ ಬಗ್ಗೆ ಮಾಹಿತಿಗಳನ್ನು ಪಡೆದರು.

ಈಗಾಗಲೇ ಉಚಿತವಾಗಿ ಬಸ್ಸುಗಳಲ್ಲಿ ಪರಿಹಾರ ವಸ್ತುಗಳನ್ನು ಸಾಗಿಸಲು ಅನುಮತಿಸಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ನೀಡಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಮುಂದಿನ ಆದೇಶದವರೆಗೆ ವ್ಯವಸ್ಥೆ ಮಾಡಲು ವ್ಯವಸ್ಥಾಪಕ ನಿರ್ದೇಶಕರು ಕಳಸದ ಸೂಚಿಸಿದರು.

ವಿಭಾಗ ಮಟ್ಟದಲ್ಲಿ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕವಹಿಸಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಮಾಡುವುದು, ಬದಲಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವಾಗ ಸೂಕ್ತ ಮುಂಜಾಗೃತ ಕ್ರಮವಹಿಸಲು ತಿಳಿಸಿದರು.ವಿಭಾಗಗಳ ಮಟ್ಟದಲ್ಲಿಯೂ 24*7 ನಿಯಂತ್ರಣ ಕೊಠಡಿ ಸ್ಥಾಪಿಸಿ, ವಿಪತ್ತು ನಿರ್ವಹಣಾ ತಂಡವನ್ನು ರಚಿಸಿ, ಕಾರ್ಯಾಚರಣೆಯ ಮೇಲೆ ನಿಗಾವಹಿಸಲು ಸೂಚಿಸಿದರು. ಪ್ರತಿ ಮೂರು ಗಂಟೆಗಳಿಗೊಮ್ಮೆ ವಿಭಾಗದಿಂದ ಕೇಂದ್ರ ಕಛೇರಿಯ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಲು ಸೂಚಿಸಿದರು.

ವಾರಾಂತ್ಯದ ಧೀರ್ಘಾವಧಿ ರಜೆ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಕಾರ್ಯಚರಿಸುವುದು. ಬಸ್ಸುಗಳ ಕಾರ್ಯಾಚರಣೆಗೂ ಮೊದಲು ಸದರಿ ಮಾರ್ಗದಲ್ಲಿನ ರಸ್ತೆ, ಮಳೆ, ಸೇತುವೆ, ನೀರಿನ ಹರಿವು ಮುಂತಾದವುಗಳ ಬಗ್ಗೆ ಕೂಲಂಕುಷ ಮಾಹಿತಿಯನ್ನು ಕ್ರೋಡೀಕರಿಸಿ, ನಂತರ ಬಸ್ಸುಗಳನ್ನು ಕಾರ್ಯಚರಣೆಗೊಳಿಸಲು ಸೂಚಿಸಿದರು.

ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ಚಿನ ಗಮನವಹಿಸಿ, ಪರಿಹಾರ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಲು ಅಗತ್ಯ ಕ್ರಮ, ವಾರಾಂತ್ಯ ಹೆಚ್ಚುವರಿ ಕಾರ್ಯಾಚರಣೆ, ಅನುಸೂಚಿ ರದ್ದತಿಯಾದ್ದಲ್ಲಿ ಪ್ರಯಾಣಿಕರಿಗೆ ಪ್ರಯಾಣದರದ ಸಂಫೂರ್ಣ ಮೊತ್ತವನ್ನು ಹಿಂದಿರುಗಿಸಲು ಅಗತ್ಯಕ್ರಮ ಕೈಗೊಳ್ಳಬೇಕು,ಪ್ರಯಾಣಿಕರನ್ನೊಳಗೊಂಡ ಯಾವುದೇ ಬಸ್ಸು, ಪ್ರವಾಹ/ ಮಳೆಗೆ ಸಿಲುಕಿದಲ್ಲಿ, ತಕ್ಷಣ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿ ತುರ್ತು ಅಗತ್ಯ ಕ್ರಮ ವಹಿಸಬೇಕು.ಕೇಂದ್ರ ಕಛೇರಿ/ವಿಭಾಗ ಮಟ್ಟದಲ್ಲಿ ಭದ್ರತಾ ಜಾಗೃತಾಧಿಕಾರಿಗಳು ಹೆಚ್ಚಿನ ಜಾಗ್ರತೆವಹಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಮಾಹಿತಿ ಒದಗಿಸಬೇಕು ಎಂದು ಸೂಚನೆ ನೀಡಿದರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.