ETV Bharat / state

ಮಾಲಿನ್ಯ ನಿಯಂತ್ರಣಕ್ಕೆ ಕೆಎಸ್​ಆರ್​ಟಿಸಿ ಪ್ಲಾನ್​: ಈ ವಿನೂತನ ವಾಹನದಿಂದ ಅನಿರೀಕ್ಷಿತ ತಪಾಸಣೆ!

ಹೊಗೆ ತಪಾಸಣೆ ಯಂತ್ರವು ಹಲವು ಸಂಕೀರ್ಣ ಸೌಲಭ್ಯಗಳುಳ್ಳ ಏಕೈಕ ಯಂತ್ರವಾಗಿದೆ. ಎಲ್ಇಡಿ ರಿಮೋಟ್ ಕಂಟ್ರೋಲ್, ಯುಎಸ್ಇ ಇಂಟರ್ ಫೇಸ್​ಗಳನ್ನು ಗಣಕಯಂತ್ರಕ್ಕೆ ಸಂಪರ್ಕಿಸಲು ಸೌಲಭ್ಯ ಕಲ್ಪಿಸಲಾಗಿದೆ. ಆಟೋಮೆಟಿಕ್ ಜೀರೋ ಕ್ಯಾಲಿಬ್ರೇಷನ್ ಸೌಲಭ್ಯದೊಂದಿಗೆ ಪ್ರತಿ ಆಕ್ಸಿಲರೇಷನ್ ಪರೀಕ್ಷೆ ಮಾಡುವಾಗಲೂ ಸಹ ಕಾರ್ಯೋನ್ಮುಖವಾಗುತ್ತದೆ.

ಮಾಲಿನ್ಯ ನಿಯಂತ್ರಣಕ್ಕೆ ಕೆಎಸ್​ಆರ್​ಟಿಸಿ ಪ್ಲಾನ್​
author img

By

Published : Oct 31, 2019, 4:24 PM IST

ಬೆಂಗಳೂರು: ಕೆಎಸ್​ಆರ್​ಟಿಸಿ ವಾಹನಗಳು ಸಂಚಾರಿಸುವಾಗ ದಿಢೀರ್ ಭೇಟಿ ನೀಡಿ ಟಿಕೆಟ್ ಪರಿಶೀಲನೆ ನಡೆಸುತ್ತಿದ್ದ ಅಧಿಕಾರಿಗಳು ಈಗ ಅನಿರೀಕ್ಷಿತ ಹೊಗೆ ತಪಾಸಣೆ ಮಾಡುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೂ ಮುಂದಾಗಿದೆ.

ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಅನಿರೀಕ್ಷಿತ ಹೊಗೆ ತಪಾಸಣೆ ನಡೆಸುವ ನೂತನ ಪ್ರಕೃತಿ ವಾಹನಕ್ಕೆ ಶಾಂತಿನಗರದಲ್ಲಿರುವ ಕೆಎಸ್ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಚಾಲನೆ ನೀಡಿದರು.

ಈ ವಾಹನವು ಕೆಎಸ್ಆರ್​ಟಿಸಿ ಬಸ್​ಗಳು ಸಂಚರಿಸುವ ಮಾರ್ಗದಲ್ಲಿ ತೆರಳಿ, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್​ಗಳು ಹೊರಸೂಸುವ ಹೊಗೆ ಹಾಗು ಶಬ್ದ ತಪಾಸಣೆ ನಡೆಸಲಿದೆ. ಲೋಪದೋಷಗಳು ಕಂಡುಬಂದಲ್ಲಿ ಕೂಡಲೇ ಅವುಗಳ ದುರಸ್ತಿಗೆ ಶಿಫಾರಸ್ಸು ಮಾಡಲಿದೆ.

ಹೊಗೆ ತಪಾಸಣೆ ಯಂತ್ರವು ಹಲವು ಸಂಕೀರ್ಣ ಸೌಲಭ್ಯಗಳುಳ್ಳ ಏಕೈಕ ಯಂತ್ರವಾಗಿದೆ. ಎಲ್ಇಡಿ ರಿಮೋಟ್ ಕಂಟ್ರೋಲ್, ಯುಎಸ್ಇ ಇಂಟರ್ ಫೇಸ್​ಗಳನ್ನು ಗಣಕಯಂತ್ರಕ್ಕೆ ಸಂಪರ್ಕಿಸಲು ಸೌಲಭ್ಯ ಕಲ್ಪಿಸಲಾಗಿದೆ. ಆಟೋಮೆಟಿಕ್ ಜೀರೋ ಕ್ಯಾಲಿಬ್ರೇಷನ್ ಸೌಲಭ್ಯದೊಂದಿಗೆ ಪ್ರತಿ ಆಕ್ಸಿಲರೇಷನ್ ಪರೀಕ್ಷೆ ಮಾಡುವಾಗಲೂ ಸಹ ಕಾರ್ಯೋನ್ಮುಖವಾಗುತ್ತದೆ.

ಈ ಯಂತ್ರವು 230 ವೋಲ್ಟ್ಸ್ ಎಸಿಯಲ್ಲಿ ಹಾಗು 10-36 ವೋಲ್ಟ್ಸ್ ಡಿಸಿ ಪವರ್​ನಲ್ಲಿ ಯಲ್ಲಿ ಕಾರ್ಯನಿರ್ವಹಿಸಲಿದೆ. ಹೊಗೆ ಪರೀಕ್ಷಣಾ ಯಂತ್ರವು 400-4500 ಆರ್.ಪಿ.ಎಂ ಉಳ್ಳ ಸಿಆರ್​ಡಿಐ ಮತ್ತು ಡಿಡಿಐಎಸ್ ವಾಹನಗಳನ್ನು ಪರೀಕ್ಷಿಸಲು ಅನುಕೂಲವಾಗುವಂತಹ ಮ್ಯಾಗ್ನೆಟಿಕ್ ಸೆನ್ಸಾರ್ ಹೊಂದಿದೆ.

Intro:

ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಅನಿರೀಕ್ಷಿತ ಭೇಟಿ ನೀಡಿ ಟಿಕೆಟ್ ಪರಿಶೀಲನೆ ನಡೆಸುತ್ತಿದ್ದ ಕೆಎಸ್ಆರ್ ಟಿಸಿ ಇದೀಗ ಅನಿರೀಕ್ಷಿತ ಹೊಗೆ ತಪಾಸಣೆ ಮಾಡುವ ಮೂಲಕ
ಮಾಲಿನ್ಯ ನಿಯಂತ್ರಣಕ್ಕೂ ಮುಂದಾಗಿದೆ.

ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಅನಿರೀಕ್ಷಿತ ಹೊಗೆ ತಪಾಸಣೆ ನಡೆಸುವ ನೂತನ ಪ್ರಕೃತಿ ವಾಹನಕ್ಕೆ ಶಾಂತಿನಗರದಲ್ಲಿರುವ ಕೆಎಸ್ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಚಾಲನೆ ನೀಡಿದರು.

ಬಸ್ ಡಿಪೋದಲ್ಲಿ ಕಾಲ ಕಾಲಕ್ಕೆ ಮಾಲಿನ್ಯ ತಪಾಸಣೆ ಮಾಡಿದ್ದರೂ ಈ ವಾಹನವು ಕೆಎಸ್ಆರ್ ಟಿಸಿ ಬಸ್ಸುಗಳು ಸಂಚರಿಸುವ ಮಾರ್ಗದಲ್ಲಿ ತೆರಳಿ ಅಲ್ಲಲ್ಲಿ ಅನಿರೀಕ್ಷಿತವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಹೊರಸೂಸುವ ಹೊಗೆ ತಪಾಸಣೆ ಹಾಗು ಶಬ್ದ ತಪಾಸಣೆ ನಡೆಸಲಿವೆ.ಲೋಪದೋಷಗಳು ಕಂಡಬಂದಲ್ಲಿ ಕೂಡಲೇ ಅವುಗಳ ದುರಸ್ತಿಗೆ ಶಿಫಾರಸ್ಸು ಮಾಡಲಿವೆ.

ಹೊಗೆ ತಪಾಸಣೆ ಯಂತ್ರವು ಹಲವು ಸಂಕೀರ್ಣ ಸೌಲಭ್ಯಗಳುಳ್ಳ ಏಕೈಕ ಯಂತ್ರವಾಗಿದ್ದು ಎಲ್ಇಡಿ ರಿಮೋಟ್ ಕಂಟ್ರೋಲ್, ಯುಎಸ್ಇ ಇಂಟರ್ ಫೇಸ್ ಗಳನ್ನು ಗಣಕಯಂತ್ರಕ್ಕೆ ಸಂಪರ್ಕಿಸಲು ಅನುಕೂಲವಾಗುವಂತೆ ಹೊಂದಿದೆ, ಆಟೋಮೆಟಿಕ್ ಜೀರೋ ಕ್ಯಾಲಿಬ್ರೇಷನ್ ಸೌಲಭ್ಯದೊಂದಿಗೆ ಪ್ರತಿ ಆಕ್ಸಿಲರೇಷನ್ ಪರೀಕ್ಷೆ ಮಾಡುವಾಗಲೂ ಸಹ ಕಾರ್ಯೋನ್ಮುಖವಾಗುತ್ತದೆ, ಇದರಲ್ಲಿ ಪ್ರೆಸ್ ಕೀ ಅಥವಾ ಲಿವರ್ ನಿಂದ ಇನ್ ಬ್ಯುಲ್ಟ್ ಕ್ಯಾಲಿಬ್ರೇಷನ್ ಮಾಡುವ ಸೌಲಭ್ಯ ಹೊಂದಿದೆ.

ಈ ಯಂತ್ರವು 230 ವೋಲ್ಟ್ಸ್ ಎಸಿ ಯಲ್ಲಿ ಹಾಗು 10-36 ವೋಲ್ಟ್ಸ್ ಡಿಸಿ ಯಲ್ಲಿ ಕಾರ್ಯ ನಿರ್ವಹಿಸಲಿದ್ದು ಹೊಗೆ ಪರೀಕ್ಷಣಾ ಯಂತ್ರವು 400-4500 ಆರ್.ಪಿ.ಎಂ. ಉಳ್ಳು ಸಿಆರ್ಡಿಐ ಮತ್ತು ಡಿಡಿಐಎಸ್ ವಾಹನಗಳನ್ನು ಪರೀಕ್ಷಿಸಲು ಅನುಕೂಲವಾಗುವಂತಹ ಮ್ಯಾಗ್ನೆಟಿಕ್ ಸೆನ್ಸಾರ್ ಹೊಂದಿದೆ.

ಶಬ್ದ ಮಾಲಿನ್ಯವನ್ನು ಪರಿಶೀಲಿಸುವ ಯಂತ್ರವು 35 ಡಿಬಿಯಿಂದ 130 ಡಿಬಿವರೆಗಿನ ಶಬ್ದವನ್ನು 31.5 ಹೆಚ್.ಝೆಡ್ ಮತ್ತು 8 ಕೆಹೆಚ್ ಝೆಡ್ ಫ್ರೀಕ್ವೆನ್ಸಿಯಲ್ಲಿ ಪರೀಕ್ಷೆ ಮಾಡುವ ಸೌಲಭ್ಯವನ್ನು ಹೊಂದಿದ್ದು, ತಪಾಸಣಾ ವಾಹನದಲ್ಲಿ
ಉನ್ನತೀಕರಿಸಿದ ಹೊಗೆ ತಪಾಸಣೆ ಯಂತ್ರ, ಶಬ್ದ ಮಾಲಿನ್ಯವನ್ನು ಪರಿಶೀಲಿಸುವ ಯಂತ್ರ, ಲ್ಯಾಪ್ ಟಾಪ್, ಡಾಟಾ ಕಾರ್ಡ್ ಮತ್ತು ಪ್ರಿಂಟರ್ ವ್ಯವಸ್ಥೆ ಹೊಂದಿದೆ.

ಈಗಾಗಲೇ ವೋಲ್ವೋ ಬಸ್ಸುಗಳಲ್ಲಿ ನೀಡಲಾಗುತ್ತಿದ್ದ ಉಚಿತ ನೀರಿನ ಬಾಟಲ್ ಗಳ ಪೂರೈಕೆಯನ್ನು ಪರಿಸರ ದೃಷ್ಟಿಯಿಂದ ಸ್ಥಗಿತಗೊಳಿಸಿ ಲೋಹದ ಬಾಟಲ್ ಗೆ ಉತ್ತೇಜನ ನೀಡುವ ಪ್ರಯತ್ನಕ್ಕೆ ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೀಗ ಸ್ವಯಂ ಮಾಲಿನ್ಯ ತಪಾಸಣೆ ಮೂಲಕ ಗಮನ ಸೆಳೆಯುತ್ತಿದೆ.

Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.