ETV Bharat / state

ಸೆ.15ರವರೆಗೆ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಸೌಲಭ್ಯ: ಕೆಎಸ್​ಆರ್​ಟಿಸಿ ಘೋಷಣೆ - ksrtc expand date for students online application

ಪ್ರಸಕ್ತ ವರ್ಷವೂ ಸಹ ಎಲ್ಲ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಬಸ್ ಪಾಸ್​ಗಳನ್ನು ಪಡೆಯಬೇಕಿದ್ದು, ಆನ್​ಲೈನ್​ ಮುಖಾಂತರ ಅರ್ಜಿ ಸಲ್ಲಿಸುವಂತೆ ಕೆಎಸ್​ಆರ್​ಟಿಸಿ ತಿಳಿಸಿದೆ.

ksrtc
ಕೆಎಸ್​ಆರ್​ಟಿಸಿ
author img

By

Published : Aug 26, 2021, 11:03 PM IST

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಉಚಿತ ಅಥವಾ ರಿಯಾಯಿತಿ ದರದ ಪಾಸ್ ಗಳನ್ನು ಆನ್​ಲೈನ್​ ಮುಖಾಂತರ ನೀಡುತ್ತಿದೆ. ಹೀಗಾಗಿ, ಮುಂದಿನ ತಿಂಗಳು ಸೆ.15ರೊಳಗೆ ಅರ್ಜಿ ಸಲ್ಲಿಸಲು ಕೋರಿದೆ. ಅಲ್ಲಿಯವರೆಗೆ ಹಳೆಯ ಪಾಸ್ ಅಥವಾ ಶಾಲಾ ಕಾಲೇಜಿನ ಗುರುತಿನ ಚೀಟಿ ಬಳಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕೆಎಸ್​​ಆರ್​​ಟಿಸಿ ಸಂಸ್ಥೆ ತಿಳಿಸಿದೆ.

ksrtc expand date for students online application for free pass
ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣವನ್ನು ಸೆಪ್ಟೆಂಬರ್ 15 ರವರೆಗೆ ವಿಸ್ತರಿಸಿದ ಕೆಎಸ್​ಆರ್​ಟಿಸಿ

9ನೇ ತರಗತಿಯಿಂದ 12 ನೆಯ ತರಗತಿಯವರೆಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಭೌತಿಕ ತರಗತಿಗಳು ಪ್ರಾರಂಭವಾಗಿದೆ. ಸಾರಿಗೆ ನಿಗಮದ ವತಿಯಿಂದ ವಿದ್ಯಾರ್ಥಿ ಹಳೆಯ ಬಸ್ ಪಾಸ್​ಗಳನ್ನು ಬಳಸಿ ಆಗಸ್ಟ್ 2021ರ ಅಂತ್ಯದವರೆಗೆ ಪ್ರಯಾಣಿಸಲು ಈ ಹಿಂದೆ ಅನುಮತಿಸಲಾಗಿತ್ತು. ಪ್ರಸಕ್ತ ವರ್ಷವೂ ಸಹ ಎಲ್ಲಾ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಬಸ್ ಪಾಸ್​ಗಳನ್ನು ಪಡೆಯಬೇಕಿದ್ದು, ಆನ್​ಲೈನ್​ ಮುಖಾಂತರ ಅರ್ಜಿ ಸಲ್ಲಿಸಲು ಸಾರಿಗೆ ಸಂಸ್ಥೆ ಹೇಳಿದೆ.

ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬೇಕು: ಪಾಸ್ ವಿತರಣೆಯ ತಂತ್ರಾಂಶವನ್ನು ಸಂಪೂರ್ಣ ಆನ್​ಲೈನ್​ ಮಾಡಿರುವುದರಿಂದ, ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಲಾಗಿದೆ. 2020-21 ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್ ಪಾಸ್​ಗಳನ್ನು ಬಳಸಿ ಪ್ರಯಾಣಿಸಲು ಹಾಗೂ ಕಳೆದ ಸಾಲಿನಲ್ಲಿ ಪಾಸ್​ಗಳನ್ನು ಪಡೆಯದಿರುವ ವಿದ್ಯಾರ್ಥಿಗಳು ಹೊಸದಾಗಿ ಶಾಲೆ ಅಥವಾ ಕಾಲೇಜುಗಳಲ್ಲಿ ಪಾವತಿಸಿರುವ ರಶೀದಿ ಹಾಗೂ ವಿದ್ಯಾಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.

ಅವಕಾಶ ಕಲ್ಪಿಸಲಾಗಿದೆ: ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ-ಕಾಲೇಜುಗಳ ವಿಳಾಸವನ್ನು ಆನ್​ಲೈನ್​ ಮುಖಾಂತರ ನಮೂದಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್​ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಆದರೆ, ವಿದ್ಯಾರ್ಥಿಗಳು ಪಾಸ್ ಪಡೆಯಲು ಸೆಪ್ಟೆಂಬರ್ 15ರೊಳಗೆ ನಿಯಮಾನುಸಾರ ಉಚಿತ ಅಥವಾ ರಿಯಾಯಿತಿ ಪಾಸ್​ಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಸಂಸ್ಥೆ ಕೋರಿದೆ.

ಓದಿ: 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ನೋಂದಣಿ: ಸಚಿವ ಅಶ್ವತ್ಥ​ ನಾರಾಯಣ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.