ಬೆಂಗಳೂರು: ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ಸುಗಳ ದರವನ್ನು ಪರಿಷ್ಕರಿಸಲಾಗಿದೆ. ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹೊರೆ ಪರಿಗಣಿಸಿ ದರ ಪರಿಷ್ಕರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ. ಪರಿಷ್ಕೃತ ದರದಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಗಳಿಗೆ ಕನಿಷ್ಠ 300 ಕಿಲೋಮೀಟರ್ ದಿನಕ್ಕೆ ನಿಗದಿಯಂತೆ ರಾಜ್ಯದೊಳಗೆ ಪ್ರತಿ ಕಿ.ಮೀ. ಗೆ 44 ರೂ, ಅಂತಾರಾಜ್ಯ ಸೇವೆ ಒದಗಿಸುವ ಬಸ್ಗಳಿಗೆ ಪ್ರತಿ ಕಿ.ಮೀ. ಗೆ ರೂ.47 ನಿಗದಿಪಡಿಸಲಾಗಿದೆ.
ರಾಜಹಂಸ ಎಕ್ಸಿಕ್ಯೂಟಿವ್ 36 ಆಸನಗಳ ಬಸ್ ದರವನ್ನು ರಾಜ್ಯದೊಳಗೆ 46 ರೂ, ಅಂತಾರಾಜ್ಯಕ್ಕೆ 51 ರೂ, ರಾಜಹಂಸ 39 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ದಿನಕ್ಕೆ ಕನಿಷ್ಠ ನಿಗದಿಪಡಿಸಿದ್ದು ರಾಜ್ಯದೊಳಗೆ 49 ರೂ., ಹೊರರಾಜ್ಯಕ್ಕೆ 53 ರೂ. ನಿಗದಿ ಪಡಿಸಲಾಗಿದೆ. ರಾಜಹಂಸ 12 ಮೀಟರ್ ಚಾಸಿಸ್ನ 44 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ಕನಿಷ್ಠ ದಿನಕ್ಕೆ ಪರಿಷ್ಕರಿಸಿದ್ದು ರಾಜ್ಯದೊಳಗೆ 51 ರೂ ಪ್ರತಿ ಕಿ.ಮೀ. ಗೆ ಹಾಗೂ ಹೊರ ರಾಜ್ಯಗಳಿಗೆ ಪ್ರತಿ ಕಿ.ಮೀ ಗೆ ರೂ.55 ಹೆಚ್ಚಿಸಲಾಗಿದೆ.
ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿವೆ. ಈ ಆದೇಶ ಹೊರಡಿಸುವ ಮೊದಲು ಬುಕಿಂಗ್ ಮಾಡಿಕೊಂಡಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರಗಳನ್ನೇ ವಿಧಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಇದನ್ನೂ ಓದಿ: ಸಿಬ್ಬಂದಿಗೆ 1 ಕೋಟಿ ರೂ ಮೊತ್ತದ ಅಪಘಾತ ವಿಮಾ ಸೌಲಭ್ಯ ಜಾರಿಗೊಳಿಸಿದ ಕೆಎಸ್‌ಆರ್‌ಟಿಸಿ