ಬೆಂಗಳೂರು : ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾಗೆ ಕೆಎಸ್ಆರ್ಟಿಸಿ ಲೈಫ್ ಟೈಂ ಗೋಲ್ಡನ್ ಬಸ್ ಪಾಸ್ ಅನ್ನು ವಿತರಣೆ ಮಾಡಲು ನಿರ್ಧರಿಸಿದೆ.
ಚಿನ್ನದ ಹುಡುಗನ ಅತ್ಯುತ್ತಮ ಸಾಧನೆ ಸಂಭ್ರಮಿಸಿದ ಕೆಎಸ್ಆರ್ಟಿಸಿ 60 ವಸಂತಗಳನ್ನು ಪೂರೈಸುತ್ತಿದೆ. ಇದರ ಸವಿ ನೆನಪಿನಲ್ಲಿ ಅಥ್ಲೇಟ್ ನೀರಜ್ ಚೋಪ್ರಾಗೆ ಗೋಲ್ಡನ್ ಬಸ್ ಪಾಸ್ ನೀಡಲು ನಿರ್ಧರಿಸಿದೆ.
ಓದಿ: ಪಾಣಿಪತ್ to ಟೋಕಿಯೋ.. ಚಿನ್ನದ ಪದಕ ಗೆದ್ದ ರೈತನ ಮಗನ ಸಾಧನೆಯ ಹಾದಿ ಹೀಗಿತ್ತು!
ಈ ಕುರಿತು ನಿಗಮ ಪ್ರಕಟಣೆ ಹೊರಡಿಸಿದ್ದು, ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಪ್ರಯಾಣಿಸಬಹುದಾಗಿದೆ. ಇದೇ ಮೊದಲ ಬಾರಿಗೆ ಕೆಎಸ್ಆರ್ಟಿಸಿ ಗೋಲ್ಡನ್ ಬಸ್ ಪಾಸ್ ಅನ್ನು ವಿತರಣೆ ಮಾಡುತ್ತಿದೆ.